Advertisement

ಗ್ರೇ ನೊಮಡ್ಸ್‌ಗಳ ಮೋಜುಮಸ್ತಿಗೆ ಬ್ರೇಕ್‌ ಹಾಕಿದ ಕೋವಿಡ್‌

07:35 PM May 15, 2020 | sudhir |

ಮಣಿಪಾಲ: ಆಸ್ಟ್ರೇಲಿಯಾದಲ್ಲಿ ಹೆಚ್ಚಿನ ಜನರು ನಿವೃತ್ತಿ ಬದುಕನ್ನು ಪ್ರವಾಸ – ಪ್ರಯಾಣದಲ್ಲಿ ಕಳೆಯುತ್ತಾರೆ. ಹೀಗಾಗಿ ಇವರಿಗೆ ಸ್ಥಿರವಾದ ವಿಳಾಸ ಇರುವುದಿಲ್ಲ. ತಮ್ಮ ಕೊನೆಯ ದಿನಗಳನ್ನು ಪರ್ಯಟನೆಗೆ ಮೀಸಲಿಟ್ಟ ಕಾರಣಕ್ಕಾಗಿಯೇ ಅವರನ್ನು “ಗ್ರೇ ನೊಮಡ್ಸ್‌’ ಅಂದರೆ ಹಿರಿಯ ಅಲೆಮಾರಿಗಳು ಎಂದು ಕರೆಯುತ್ತಾರೆ.

Advertisement

ಆದರೆ ಸದ್ಯ ಕೋವಿಡ್‌-19 ಇವರ ಪ್ರವಾಸಕ್ಕೆ ಬ್ರೇಕ್‌ ಹಾಕಿದ್ದು, ವಿಶ್ವಾದ್ಯಂತ ಸಂಚಾರ ಸ್ಥಗಿತಗೊಂಡಿರುವ ಕಾರಣ ದೇಶದಿಂದ ದೇಶಕ್ಕೆ ಅಂಡಲೆಯುತ್ತಿದ್ದ ಹಿರಿ ಯರು ಇದ್ದಲ್ಲಿಯೇ ಬಂಧಿಯಾಗಿದ್ದಾರೆ. ಹಲ ವರು ವಿದೇಶಗಳಲ್ಲಿ ನೆಲೆಯಿಲ್ಲದೆ ಪರದಾಡುತ್ತಿದ್ದಾರೆ.

ಆಸ್ಟ್ರೇಲಿಯದ ಪ್ರವಾಸೋದ್ಯಮ ಮತ್ತು ಸಂಶೋಧನಾ ಸಂಸ್ಥೆಯ ಪ್ರಕಾರ ಪ್ರತಿ ಮೂರು ತಿಂಗಳಿಗೊಮ್ಮೆ ದೇಶೀಯವಾಗಿ ಸುಮಾರು 30 ಸಾವಿರದಿಂದ ರಿಂದ 40 ಸಾವಿರದವರೆಗೆ ನಿವೃತ್ತ ಹಿರಿಯರು ಪ್ರಯಾಣ ಮಾಡುತ್ತಾರೆ. ಲಾಕ್‌ಡೌನ್‌ ನಿಯಮಗಳು ಜಾರಿಯಲ್ಲಿರುವುದರಿಂದ ಹಿರಿಯ ಅಲೆಮಾರಿಗಳ ಪ್ರವಾಸ ಯೋಜನೆಯೂ ಸ್ಥಗಿತಗೊಂಡಿದ್ದು, ದೇಶಕ್ಕೂ ಇದರಿಂದ ನಷ್ಟವಾಗಿದೆ.

ಆಸ್ಟ್ರೇಲಿಯದ ಕಾರವಾನ್‌ ಇಂಡಸ್ಟ್ರಿ ಅಸೋಸಿಯೇ ಶನ್‌ ಪ್ರಕಾರ ಎಪ್ರಿಲ್‌ ತಿಂಗಳಲ್ಲಿ ಕಾರವಾನ್‌ ಮತ್ತು ಕ್ಯಾಂಪಿಂಗ್‌ ಉದ್ಯಮ 13.5 ಕೋಟಿ ಯುಎಸ್‌ ಡಾಲರ್‌ನಷ್ಟು ನಷ್ಟವನ್ನು ಕಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next