Advertisement

ಗ್ರೀನ್‌ ವಾಟರ್‌ ಯೋಜನೆ ಕಾಮಗಾರಿ ಪರಿಶೀಲನೆ

07:41 PM Jun 18, 2021 | Team Udayavani |

ಹಾವೇರಿ: ಹಳ್ಳಿಗಳಲ್ಲಿನ ಕೊಳಚೆ ನೀರು ನದಿ ಹಾಗೂ ಜಲ ಮೂಲಗಳಿಗೆ ಸೇರುವ ಮುನ್ನ ಸಂಸ್ಕರಿಸಿ ಹರಿಸುವ ವಿನೂತನ ಗ್ರೀನ್‌ ವಾಟರ್‌ (ಬೂದು ನೀರು) ಮ್ಯಾನೇಜ್‌ಮೆಂಟ್‌ ವ್ಯವಸ್ಥೆ ಅನುಷ್ಠಾನದ ಜಿಲ್ಲೆಯ ಕಾಮಗಾರಿ ಸ್ಥಳಗಳಿಗೆ ಪಂಚಾಯತ್‌ ರಾಜ್‌ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಎಲ್‌.ಕೆ.ಅತೀಕ್‌ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Advertisement

ಹಾವೇರಿ ಜಿಲ್ಲಾ ಪಂಚಾಯತ್‌ ವತಿಯಿಂದ ವಿನೂತನವಾಗಿ ಸುಸ್ಥಿರ ಬೂದು ನೀರು ನಿರ್ವಹಣೆಗೆ ಮೊದಲ ಹೆಜ್ಜೆಯಾಗಿ ರಾಣಿಬೆನ್ನೂರ ತಾಲೂಕಿನ ಕುಮಾರಪಟ್ಟಣಂ ಸಮೀಪದ ಕೋಡಿಯಾಲ ಹಾಗೂ ಬ್ಯಾಡಗಿ ಮತಕ್ಷೇತ್ರ ವ್ಯಾಪ್ತಿಯ ಬೆನಕಕೊಂಡ ಗ್ರಾಮದಲ್ಲಿ ನಡೆಯುತ್ತಿರುವ ಕಾಮಗಾರಿಗಳ ಸ್ಥಳಕ್ಕೆ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗ್ರಾಮಗಳಲ್ಲಿ ಪಾತ್ರೆ, ಬಟ್ಟೆ ತೊಳೆದ ನೀರು, ಬಚ್ಚಲು ನೀರು ಸೇರಿದಂತೆ ಕಲುಷಿತ ನೀರು ಚರಂಡಿಗಳಲ್ಲಿ ಗ್ರಾವಿಟಿ ಆಧಾರದ ಮೇಲೆ ಸರಾಗವಾಗಿ ಹರಿದು ಹೋಗುವಂತೆ ಚರಂಡಿಗಳ ನಿರ್ಮಾಣ ಮಾಡಲಾಗಿದೆ.

ಸಿಮೆಂಟ್‌ನಿಂದ ನಿರ್ಮಾಣ ಮಾಡಿದ ಕಾಲುವೆಗಳಲ್ಲಿ ನೀರು ಹರಿದು ಈ ಕಾಲುವೆಗೆ ಸಂಪರ್ಕ ಹೊಂದಿದಂತೆ ಕೆಳ ಹಂತದಲ್ಲಿ ಕಲ್ಲಿನಿಂದ ನಿರ್ಮಾಣ ಮಾಡಿದ ಚರಂಡಿ ಮೂಲಕ ಹರಿದು ಸಂಸ್ಕರಣಕ್ಕಾಗಿ ನಿರ್ಮಾಣ ಮಾಡಿರುವ ದೊಡ್ಡ ಕಲ್ಲು ತೊಟ್ಟಿಗಳಲ್ಲಿ ಸೇರಿ ಸಂಸ್ಕರಣಗೊಳ್ಳುತ್ತದೆ. ನಂತರ ಈ ತೊಟ್ಟಿಯಿಂದ ನದಿಗೆ ಹರಿಸಲು ಕಲ್ಲಿನಿಂದಲೇ ಕಾಲುವೆಗಳನ್ನು ನಿರ್ಮಾಣ ಮಾಡಲಾಗಿದೆ.

ನದಿಗೆ ಕಲುಷಿತ ನೀರು ಸೇರುವ ಮುನ್ನವೇ ತ್ಯಾಜ್ಯವನ್ನು ವೈಜ್ಞಾನಿಕ ಮತ್ತು ತಾಂತ್ರಿಕ ಮಾದರಿಯಲ್ಲಿ ಸಂಸ್ಕರಿತ ನೀರು ನದಿ ಸೇರಿದಂತೆ ಜಲಮೂಲಗಳಿಗೆ ಸೇರುವಂತೆ ಯೋಜನೆಯನ್ನು ವಿನ್ಯಾಸ ಮಾಡಲಾಗಿದೆ. ಗ್ರೀನ್‌ ವಾಟರ್‌(ಬೂದು ನೀರು) ಮ್ಯಾನೇಜ್‌ಮೆಂಟ್‌ ವ್ಯವಸ್ಥೆ ರಾಜ್ಯದಲ್ಲೇ ಹಾವೇರಿ ಜಿಲ್ಲೆಯ ಕೋಡಿಯಾಲ ಗ್ರಾಮದಲ್ಲಿ ಪ್ರಥಮವಾಗಿ ಅನುಷ್ಠಾನಗೊಂಡಿದ್ದು, ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದೆ. 2050 ಕುಟುಂಬಗಳು (10,252 ಜನರು) ವಾಸಿಸುವ ತುಂಗಭದ್ರಾ ನದಿ ದಂಡೆಯಲ್ಲಿರುವ ಕೋಡಿಯಾಲ ಗ್ರಾಮದಲ್ಲಿ ವೈಜ್ಞಾನಿಕ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಗ್ರಾಮದಿಂದ ಐದು ಕಡೆ ಕೊಳಚೆ ನೀರು ನದಿಗೆ ಸೇರುತ್ತಿತ್ತು. ಸರಾಗವಾಗಿ ಚರಂಡಿಯಲ್ಲಿ ನೀರು ಹರಿಯದೆ ಅಲ್ಲಲ್ಲಿ ನಿಂತು ಅನೈರ್ಮಲ್ಯ ವಾತಾವರಣ ಸೃಷ್ಟಿಸುವುದರ ಜತೆಗೆ ಅನಾರೋಗ್ಯಕರ ವಾತಾವರಣ ಹರಡುತ್ತಿತ್ತು. ಈ ಪೈಕಿ ಗ್ರಾಮದ ಪುಣ್ಯಕೋಟಿ ಮಠದ ಹತ್ತಿರ ನದಿಗೆ ಸುಮಾರು 360 ಮನೆಗಳಿಂದ(1622 ಜನಸಂಖ್ಯೆ) ಹರಿದುಹೋಗುವ ಮಾರ್ಗದಲ್ಲಿ ಅಂದಾಜು 56,770 ಲೀಟರ್‌ ಬೂದು ನೀರನ್ನು ಸಂಸ್ಕರಿಸಿ, ಈ ಬೂದು ನೀರು ಹರಿಯುವ ಪ್ರಮಾಣಕ್ಕಿಂತ ಶೇ.50ರಷ್ಟು ಹೆಚ್ಚಿನ ಪ್ರಮಾಣದ ಸುಮಾರು 85,000 ಲೀಟರ್‌ನಷ್ಟು ಬೂದು ನೀರು ಸಂಗ್ರಹಿಸುವ ಸಾಮರ್ಥ್ಯದ ಪಾಂಡ್‌ಗಳನ್ನು ನಿರ್ಮಿಸಿ ಕಲುಷಿತ ನೀರು ಸಂಸ್ಕರಣೆಗೊಳಿಸಲಾಗುತ್ತದೆ. ನಂತರ ಶುದ್ಧ ನೀರನ್ನು ನದಿಗೆ ಹರಿಸುವ ಯೋಜನೆ ಸಿದ್ಧವಾಗಿದೆ. ಈ ನೀರು ಸಂಸ್ಕರಣಗೊಂಡು ತುಂಗಭದ್ರಾ ನದಿಗೆ ಶುದ್ಧ ನೀರು ಹರಿಸುವುದರ ಮೂಲಕ ನದಿ ಕಲುಷಿತಗೊಳ್ಳದಂತೆ ವ್ಯವಸ್ಥೆ ಮಾಡಿರುವುದು ವಿಶೇಷವಾಗಿದೆ.

ಈ ಸಂದರ್ಭದಲ್ಲಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಜಿಪಂ ಮಾಜಿ ಅಧ್ಯಕ್ಷ ಏಕನಾಥ ಭಾನುವಳ್ಳಿ, ಕೋಡಿಯಾಲ ಮತ್ತು ಬೆನಕನಕೊಂಡ ಗ್ರಾಪಂ ಅಧ್ಯಕ್ಷರು, ಪದಾಧಿ  ಕಾರಿಗಳು, ಅ ಧಿಕಾರಿಗಳು ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next