Advertisement
ಈ ಬಗ್ಗೆ ಮಾಹಿತಿ ನೀಡಿರುವ ಯೋಜನೆಯ ಕೃಷಿ ಅಧಿಕಾರಿ ಚೇತನ್ ಕುಮಾರ್, ಪ್ರಗತಿ ಬಂಧು ತಂಡಗಳ ಮೂಲಕ ಗ್ರಾಮಾಭಿವೃದ್ಧಿ ಯೋಜನೆಯ ಅನುದಾನದ ಜತೆಗೆ ಹಡಿಲು ಭೂಮಿ, ಕೃಷಿಗೆ ಉತ್ತೇಜನ ನೀಡಲಾಗುತ್ತಿದೆ. ಇದಕ್ಕಾಗಿ ತಂಡದ ಸದಸ್ಯರೇ ಕೃಷಿ ಮಾಡುವುದರೊಂದಿಗೆ ಸರಕಾರಿ ಇಲಾಖೆಗಳ ಮೂಲಕವೂ ಮಾಹಿತಿ ನೀಡಿ ಉಪಯೋಗವಾಗುವಂತೆ ಮಾಡಲಾಗುತ್ತದೆ. ಇದರಿಂದ ಹಲವಾರು ಕುಟುಂಬಗಳು ಅಭಿವೃದ್ಧಿ ಕಂಡಿವೆ ಎಂದು ಹೇಳಿದ್ದಾರೆ.
ಸಂಘಗಳನ್ನು ಕಟ್ಟಿಕೊಂಡ ಪ್ರಗತಿ ಬಂಧು ತಂಡದ ಸದಸ್ಯರು ವಾರದ ಶ್ರಮ ವಿನಿಮಯದಲ್ಲಿ ಕೂಲಿಯಾಳುಗಳ ಸಮಸ್ಯೆ ಇರುವುದರಿಂದ ತಮ್ಮ ತಮ್ಮ ಮನೆಯ ಕೆಲಸದ ಜೊತೆಗೆ ಹಡಿಲು ಭೂಮಿ ಕೃಷಿ, ವಾಣಿಜ್ಯ ಬೆಳೆ, ಜಾಗದ ಸಮತಟ್ಟು ಇನ್ನಿತ್ಯಾದಿ ಕೆಲಸ ಕಾರ್ಯಗಳನ್ನು ಮಾಡಲು ಸಹಕಾರಿಯಾಗಿದೆ. ಕೃಷಿಗೆ ಉತ್ತೇಜನ
ಯೋಜನೆಯಡಿ ಕೃಷಿಗೆ ಹೆಚ್ಚು ಒತ್ತು ನೀಡಲಾಗಿದ್ದು, ಆಸಕ್ತರಿಗೆ ಕೃಷಿ ಇಲಾಖಾ ಧಿಕಾರಿಗಳು, ಸಂಪನ್ಮೂಲ ವ್ಯಕ್ತಿಗಳಿಂದ ವಿಚಾರಗೋಷ್ಠಿಯಲ್ಲಿ ಮಾಹಿತಿಯೊಂದಿಗೆ ಸಸಿ ವಿತರಣೆ, ಅಧ್ಯಯನ ಪ್ರವಾಸ, ಕೃಷಿ ಉತ್ತೇಜನಕ್ಕೆ ಹಲವು ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಇದರಿಂದಾಗಿ ಸ್ವಂತ ಭೂಮಿ ಇಲ್ಲದವರು ಕೂಡಾ ಹಡಿಲು ಬಿದ್ದ ಇತರರ ಭೂಮಿಯನ್ನು ಒಪ್ಪಂದದ ಮೇರೆಗೆ ಪಡೆದುಕೊಂಡು ಕೃಷಿ ನಡೆಸುತ್ತಿರುವುದು ಇದಕ್ಕೆ ಜ್ವಲಂತ ಉದಾಹರಣೆಯಾಗಿದೆ.
Related Articles
ಹಡಿಲು ಬಿದ್ದ ಭೂಮಿಯಲ್ಲಿ ಹಸಿರು ಬೆಳೆಸಲು ಯೋಜನೆ ಕೈಗೊಂಡ ಪ್ರೋತ್ಸಾಹಕ ಕಾರ್ಯಕ್ರಮ ಸಾಕಷ್ಟು ಯಶಸ್ವಿಯಾಗಿದೆ. ಹಡಿಲು ಭೂಮಿಯನ್ನು ಇತರರಿಗೆ ಒಪ್ಪಂದದ ಮೂಲಕ ನೀಡಿ ಅಲ್ಲಿ ತರಕಾರಿ, ಭತ್ತ ಬೆಳೆಯುತ್ತಿದ್ದಾರೆ.
– ಮುರಳೀಧರ ಶೆಟ್ಟಿ, ಯೋಜನಾಧಿಕಾರಿ, ಧರ್ಮಸ್ಥಳ ಯೋಜನೆ
Advertisement