Advertisement

ಹಸಿರು ಇಂಧನ; 2 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆ: ಸಚಿವ ಸುನಿಲ್ ಕುಮಾರ್

07:24 PM Nov 04, 2022 | Team Udayavani |

ಬೆಂಗಳೂರು: ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಹಸಿರು ಇಂಧನ ( ಗ್ರೀನ್ ಎನರ್ಜಿ ) ವಲಯದಲ್ಲಿ 2 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆ ಮಾಡಲು ಉದ್ಯಮಿಗಳು ಮುಂದೆ ಬಂದಿದ್ದಾರೆ ಎಂದು ಇಂಧನ ಸಚಿವ ವಿ.ಸುನಿಲ್ ಕುಮಾರ್  ತಿಳಿಸಿದ್ದಾರೆ.

Advertisement

ಜಾಗತಿಕ ಹೂಡಿಕೆದಾರರ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಅತೀ ಹೆಚ್ಚು ಬಂಡವಾಳ ಹೂಡಿಕೆ ಹಸಿರು ಇಂಧನ ಕ್ಷೇತ್ರಕ್ಕೆ ಹರಿದು ಬಂದಿದೆ.ಹೂಡಿಕೆದಾರರ ಸಮಾವೇಶ ಅಭೂತಪೂರ್ವವಾಗಿ ಯಶಸ್ವಿ ಆಗಿದೆ. ದೇಶದ ರಾಜ್ಯದ ಆರ್ಥಿಕ ಬೆಳವಣಿಗೆಗೆ ದೊಡ್ಡ ಪ್ರಮಾಣದಲ್ಲಿ  ಉದ್ಯಮಿಗಳ ಅಗತ್ಯ ಇದೆ. ಇಂಧನ ಇಲಾಖೆ ಉದ್ಯಮ ಹಾಗೂ ಆರ್ಥಿಕ  ಪ್ರಗತಿಗೆ ಸಿಎಂ ಬಸವರಾಜ ಬೊಮ್ಮಾಯಿ  ನೇತೃತ್ವದಲ್ಲಿ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ ಎಂದರು‌.

ಹಸಿರು ಇಂಧನ ಉತ್ಪಾದನೆಯಲ್ಲಿ ಬೇರೆ ರಾಜ್ಯಗಳಿಂದ ನಮ್ಮ ರಾಜ್ಯ ಮುಂದೆ ಇದೆ. ಕರ್ನಾಟಕದಲ್ಲಿ ಉತ್ಪಾದನೆ ಆಗುವ 30, 000 ಮೆಗಾವ್ಯಾಟ್ ಇಂಧನ ಪೈಕಿ 15,800 ಮೆಗಾವ್ಯಾಟ್ ಉತ್ಪಾದನೆ ಗ್ರೀನ್ ಎನರ್ಜಿ ಮೂಲಕ ಮಾಡುತ್ತಿದೆ ಎಂದು ಮಾಹಿತಿ ನೀಡಿದರು. ಮುಂದಿನ ನಮ್ಮ ಒಟ್ಟ‌ಬಳಕೆಯ ವಿದ್ಯುತ್ ಪೂರೈಕೆಯಲ್ಲಿ‌50% ಗ್ರೀನ್ ಎನರ್ಜಿ ಮೂಲಕವೇ ಉತ್ಪಾದಿಸುವ ಗುರಿಯನ್ನು ಇಲಾಖೆ ಹಾಕಿಕೊಂಡಿದೆ. ಕಾಲಮಿತಿಯೊಳಗೆ ಮಾಡಿಕೊಂಡ ಒಪ್ಪಂದಗಳನ್ನು ಅನುಷ್ಟಾನ ಮಾಡಲಾಗುತ್ತದೆ ಎಂದು ತಿಳಿಸಿದರು.

ಸಿಎಂ ಬಸವರಾಜ ಬೊಮ್ಮಾಯಿ ಅವರು, ಸೋಲಾರ್ ಹಾಗೂ ವಿಂಡ್‌ ಒಳಗೊಂಡ ಹೈಬ್ರೀಡ್ ಪಾರ್ಕ್ ನಿರ್ಮಾಣ ಘೋಷಣೆಯನ್ನು ಬಜೆಟ್ ನಲ್ಲಿ ಮಾಡಿದ್ದಾರೆ. ಇಂದನ ಕ್ಷೇತ್ರದಲ್ಲಿ ಹೂಡಿಕೆಗೆ ಕರ್ನಾಟಕದಲ್ಲಿ ವಿಶೇಷ ಮಹತ್ವ ಬಂದಿದೆ. ಇಂಧನ ಕ್ಷೇತ್ರದಲ್ಲಿ ಹೂಡಿಕೆಗೆ ಅಗತ್ಯವಿರುವ ಎಲ್ಲ ರೀತಿ ತಯಾರಿ ಇಲಾಖೆ ಮಾಡಿದೆ.

ಇಂಧನ ಬೇಡಿಕೆಗೆ ಅಗತ್ಯವಿರುವ ಪೂರೈಕೆಗೂ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ವಿವರಿಸಿದರು.
ಉತ್ಪಾದನೆ ಹೆಚ್ಚಾದಾಗ  ಗ್ರಿಡ್ ನಿರ್ವಹಣೆ, ಹೊಸ ಸಬ್ ಸ್ಟೇಷನ್ ನಿರ್ವಹಣೆಯನ್ನು ಯಶಸ್ವಿ ಆಗಿ ನಿರ್ವಹಣೆ ಮಾಡುತ್ತೇವೆ. ಗುಣಮಟ್ಟದ ವಿದ್ಯುತ್ ಸರಜರಾಜು ಮಾಡು 34 ಹೆಚ್ಚು ಸಬ್ ಸ್ಟೇಷನ್ ನಿರ್ಮಾಣ ಮಾಡಲಾಗಿದೆ 100 ಕ್ಕೂ ಹೆಚ್ಚು ಸಬ್ ಸ್ಟೇಷನ್ ಅಪ್ ಗ್ರೇಡ್ ಮಾಡಲಾಗಿದೆ.ಸೋಲಾರ್ ಉತ್ಪಾದನೆಯಲ್ಲೂ ಕರ್ನಾಟಕ ನಂಬರ್ ಒನ್ ಆಗಿದೆ. ಹಸಿರು ಇಂಧನದ ಉತ್ಪಾದನೆ ಹೆಚ್ಚು ಮಾಡುವ ನಿಟ್ಟಿನಲ್ಲೂ ಕ್ರಮ ಕೈಗೊಳ್ಳಲಾಗುವುದು ಎಂದರು.

Advertisement

ಹಸಿರು ಇಂಧನ ಉತ್ಪಾದನೆಯಲ್ಲಿ ಕರ್ನಾಟಕ ಮುಂದಿದೆ. ಏಷ್ಯಾ ಖಂಡದಲ್ಲೇ ಅತಿದೊಡ್ಡ ಸೋಲಾರ್ ವಿದ್ಯುತ್ ಪಾಕ್೯ ಕರ್ನಾಟಕದಲ್ಲಿ ಇದೆ.ಪಾವಗಡ ಸೋಲಾರ್ ಪಾರ್ಕ್ ನಿರ್ಮಿಸುವ ಮೂಲಕ ಸೋಲಾರ್ ಶಕ್ತಿಯಲ್ಲಿ ಕರ್ನಾಟಕ ಜಗತ್ತಿನ ನಂಬರ್ 1 ರಾಜ್ಯ ಆಗಿದೆ ಎಂದು ಪ್ರಶಂಸಿದರು.

ಮುಂದಿನ ನಮ್ಮ ಒಟ್ಟ‌ಬಳಕೆಯ ವಿದ್ಯುತ್ ಪೂರೈಕೆಯಲ್ಲಿ‌50% ಗ್ರೀನ್ ಎನರ್ಜಿ ಮೂಲಕವೇ ಉತ್ಪಾದಿಸುವ ಗುರಿ‌ ಇದೆ. ನಮ್ಮ ಪ್ರತಿಯೊಂದು ಯೋಜನೆಗಳಿಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಯಿ ಅವರು ಎಲ್ಲಾ ರೀತಿಯ ಸಹಕಾರ ಕೊಡುತ್ತಿದ್ದಾರೆ ಎಂದು ಹೇಳಿದರು.
ಕಳೆದ ಬಜೆಟ್ ನಲ್ಲಿ ನಮ್ಮ ಮುಖ್ಯಮಂತ್ರಿಯವರು,ಹೈಬ್ರಿಡ್ ಪಾರ್ಕ್‌ನಿರ್ಮಾಣ ಮಾಡುವುದಾಗಿ ಘೋಷಣೆ ಮಾಡಿದ್ದರು. ‌ಅದರಂತೆ ಈಗಾಗಲೇ ವಿಸ್ತೃತ ಯೋಜನಾ ವರದಿ(ಡಿಪಿಆರ್‌) ಸಿದ್ಧವಾಗಿದೆ .ಅದಷ್ಟು ಶೀಘ್ರದಲ್ಲೇ ಇದನ್ನು ಕೂಡ ಅನುಷ್ಟಾನ ಮಾಡಲಿದ್ದೇವೆ ಎಂದು ಸುನಿಲ್ ಕುಮಾರ್ ಆಶ್ವಾಸನೆ ನೀಡಿದರು.

ಗುಣಮಟ್ಟದ ವಿದ್ಯುತ್ ಸರಬರಾಜಿಗೆ‌ 36 ಸಬ್ ಸ್ಟೇಷನ್ ನಿರ್ಮಿಸಲಾಗಿದೆ.ಮುಂದಿನ 10 ವರ್ಷಗಳಲ್ಲಿ ಇಂಧನ ಇಲಾಖೆಯಲ್ಲಿ ಆಗಬೇಕಾದ ಅಭಿವೃದ್ಧಿ ಬಗ್ಗೆ ಸಿಎಂ ಸಾಕಷ್ಟು ಸಲಹೆ ನೀಡಿದ್ದಾರೆ .ಅದೇ ರೀತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ನಮಗೆ ಎಲ್ಲಾ ನೆರವು ನೀಡಿದ್ದಾರೆ ಎಂದು ಸಚಿವ ಸುನಿಲ್ ಕುಮಾರ್ ಹೊಗಳಿದರು.

ಬೃಹತ್ ಮತ್ತು ಮಧ್ಯಮ ಕೈಗಾರಿಕಾ  ಸಚಿವ ಮುರುಗೇಶ್ ನಿರಾಣಿ   ಮಾತನಾಡಿ,ನಿರೀಕ್ಷೆಗಿಂತ ಹೆಚ್ಚು ಬಂಡವಾಳ ಹೂಡಿಕೆಯಾಗಿದೆ.5 ಲಕ್ಷ ಕೋಟಿ ಹೂಡಿಕೆಯಾಗಲಿದೆ ಎಂದು ಹೇಳಿದ್ದೇವು ಆದರೆ, ಹತ್ತು ಲಕ್ಷ ಕೋಟಿ ಬಂಡವಾಳ ಹೂಡಿಕೆಯಾಗಿದೆ ಎಂದರು.

ಧಾರವಾಡದಲ್ಲಿ ಎಫ್ ಎಂ ಜಿ ಸೆಕ್ಟೆರ್ ಆರಂಭವಾಗಲಿದ್ದು,10 ಸಾವಿರ‌ ಕೋಟಿ ಹೂಡಿಕೆಯೊಂದಿಗೆ 1 ಲಕ್ಷ ಜನರಿಗೆ‌ ಉದ್ಯೋಗ ಸಿಗಲಿದೆ.ವಿಶೇಷವಾಗಿ ಸ್ಥಳೀಯರಿಗೆ ಹೆಚ್ಚಿನ ಅವಕಾಶಗಳು ಲಭಿಸಲಿವೆ. ಇದು ಸ್ವಾವಲಂಬಿ ಜೀವನಕ್ಕೆ ಅನುಕೂಲವಾಗಲಿದೆ ಎಂದು ಸಚಿವ ನಿರಾಣಿ ಅವರು ಅಭಿಪ್ರಾಯಪಟ್ಟರು.

ಜಗತ್ತಿನ‌ ನಕ್ಷೆಯಲ್ಲಿ ಕರ್ನಾಟಕವನ್ನ ಗುರುತಿಸಲಾಗುತ್ತದೆ.ವಿವಿಧ ವಲಯಗಳಲ್ಲಿ ನಾವು ಮೊದಲ ಸ್ಥಾನದಲ್ಲಿ ಬರುತ್ತಿದ್ದೇವೆ.2025ರ ಜನವರಿಗೆ ಮತ್ತೆ ಕರ್ನಾಟಕದಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶ ನಡೆಯಲಿದೆ ಎಂದು ಭವಿಷ್ಯ ನುಡಿದರು.

ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಎಷ್ಟು ಹೂಡಿಕೆ ಆಗಿದೆ ಎಂಬುದನ್ನು ಈ ಬಗ್ಗೆ ಶನಿವಾರ ಸಿಎಂ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಲಿದ್ದಾರೆ .ಸ್ವತಃ ಇಂಜಿನಿಯರ್ ಆಗಿರುವ ಸಿಎಂ ಬೊಮ್ಮಾಯಿ‌ ಅವರು ಕೈಗಾರಿಕೆಗಳ‌ ಸಂಕಷ್ಟ ಅರಿತಿದ್ದಾರೆ.ಒಟ್ಟಾರೆ ಕರ್ನಾಟಕ ಕೈಗಾರಿಕಾ ವಲಯದಲ್ಲಿ ಮೊದಲ ಸ್ಥಾನಕ್ಕೆ ಬರಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next