Advertisement

ಹಸಿ-ಒಣ ಕಸ ಸಂಗ್ರಹಿಸುವ ವಾಹನಗಳಿಗೆ ಚಾಲನೆ  

07:52 PM Mar 08, 2021 | Team Udayavani |

ಶಿವಮೊಗ್ಗ: ಪಾಲಿಕೆ ವತಿಯಿಂದ ಮನೆಮನೆಗೆ ತೆರಳಿ ಒಣ ಹಾಗೂ ಹಸಿ ಕಸ ಸಂಗ್ರಹ ಮಾಡುವ 51 ಆಟೋ ಟಿಪ್ಪರ್‌ಗಳನ್ನು ಲೋಕಾರ್ಪಣೆಗೊಳಿಸಲಾಯಿತು. ಪಾಲಿಕೆ ಮೇಯರ್‌ ಸುವರ್ಣ ಶಂಕರ್‌, ಉಪಮೇಯರ್‌ ಸುರೇಖಾ ಮುರಳೀಧರ್‌, ಆಯುಕ್ತರಾದ ಚಿದಾನಂದ ವಠಾರೆ ಹಸಿರು ಬಾವುಟ ತೋರಿಸಿ ವಾಹನಗಳನ್ನು ಲೋಕಾರ್ಪಣೆ ಮಾಡಿದರು.

Advertisement

ಸ್ವತ್ಛ ಭಾರತ್‌ ಯೋಜನೆಯ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನದಲ್ಲಿ ಈ ವಾಹನ ಖರೀದಿಸಲಾಗಿದೆ. ಆಯುಕ್ತ ಚಿದಾನಂದ ವಟಾರೆ ಮಾತನಾಡಿ, ಒಣ-ಹಸಿ ಕಸ ಸಂಗ್ರಹಕ್ಕಾಗಿ ಬಿಎಸ್‌6 ಮಾದರಿಯ ವಾಹನ ಖರೀದಿಸಲಾಗಿದೆ. ಹಲವು ಅನುದಾನದಡಿಯಲ್ಲಿ ಈ ವಾಹನ ಖರೀದಿಯಾಗಿದೆ. ಪ್ರತಿ ದಿನ 170 ಟನ್‌ ಕಸ ಸಂಗ್ರಹವಾಗುತ್ತಿದೆ. ಆಟೋ ಟಿಪ್ಪರ್‌ನಲ್ಲಿ ಎರಡು ವಿಭಾಗಗಳಿದ್ದು ಹಸಿ, ಒಣ ಕಸ ಸಂಗ್ರಹಿಸಲು ಅನುಕೂಲವಾಗಲಿದೆ ಎಂದರು.

ಕಸ ಸಂಗ್ರಹ ಮಾಡುತ್ತಿದ್ದಾರೋ ಇಲ್ಲವೋ ಎಂಬುದನ್ನು ಗಮನಿಸಲು ಹೈμÅàಕ್ವೆನ್ಸಿ ಕಾಂಪೋನೆಂಟ್‌ ಪ್ರತಿ ಮನೆಗೆ ಅಳವಡಿಸಲಾಗುವುದು. ಒಣ ಕಸ ಮತ್ತು ಹಸಿ ಕಸದ ಬಗ್ಗೆ ಕೆಲವರಿಗೆ ಅರಿವಿದ್ದರೆ ಮತ್ತೆ ಕೆಲವರಿಗೆ ಮಾಹಿತಿ ಕಡಿಮೆ ಇರುತ್ತದೆ. ಇದನ್ನು ವಾರ್ಡ್‌ ಹೆಲ್ತ್‌ ಇನ್‌ಸ್ಪೆಕ್ಟರ್‌ಗಳು ಮನೆ ಮನೆಗೆ ತೆರಳಿ ಮಾಹಿತಿ ನೀಡಲಿದ್ದಾರೆ. ಈ ಬಗ್ಗೆ ಒಂದು ತಿಂಗಳು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗುವುದು ಎಂದರು.

ಪಾಲಿಕೆ ಸದಸ್ಯರಾದ ಚನ್ನಬಸಪ್ಪ,  ಧೀರಾಜ್‌, ಜ್ಞಾನೇಶ್ವರ್‌, ಶಂಕರ್‌ ಗನ್ನಿ, ವಿಶ್ವನಾಥ್‌, ಆರ್‌.ಸಿ. ನಾಯ್ಕ, ಆರತಿ ಆ.ಮಾ.ಪ್ರಕಾಶ್‌, ಅನಿತಾ ರವಿಶಂಕರ್‌ ಮುಂತಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next