Advertisement
ಜಿಲ್ಲೆಯಲ್ಲಿ ಪರಿಸರ ಸಂರಕ್ಷಣೆ ಮಾಡಲು ಜನರಲ್ಲಿ ಅರಿವು ಮತ್ತು ಜಾಗೃತಿ ಮೂಡಿಸಿದರೂ ಕೆಲವರು ತಮ್ಮ ಸ್ವಾರ್ಥ ಸಾಧನೆಗಾಗಿ ಅರಣ್ಯವನ್ನು ಲೂಟಿ ಮಾಡುತ್ತಿದ್ದಾರೆ. ಇನ್ನೂ ಹಲವರು ಅಭಿವೃದ್ಧಿ ಹೆಸರಿ ನಲ್ಲಿ ಸಮೃದ್ಧವಾಗಿ ಬೆಳೆದಿರುವ ಗಿಡ-ಮರಗಳನ್ನು ಕಡಿದು ಹಾಕುವ ಕೆಲಸವನ್ನು ಮಾಡುತ್ತಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಅರಣ್ಯ ಸಂಪತ್ತು ಉಳಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಆದರೂ ಜಿಲ್ಲೆಯಲ್ಲಿ ಅರಣ್ಯ ಸಂಪತ್ತು ಉಳಿಸುವ ಸಲುವಾಗಿ ಒಂದು ಅಭಿ ಯಾನವನ್ನು ನಡೆಸುವುದು ಅನಿವಾರ್ಯವಾಗಿದೆ.
Related Articles
Advertisement
ದಂಡಿಗಾನಹಳ್ಳಿ, ಜಕ್ಕಲಮಡಗು, ಶ್ರೀನಿವಾಸಕೆರೆ, ಗುಡಿಬಂಡೆ ಕೆರೆ ವ್ಯಾಪ್ತಿಗೆ ಸುತ್ತಮುತ್ತಲ ಅರಣ್ಯ ಪ್ರದೇಶಗಳಿಂದ ಹರಿದು ಬಂದ ನೀರು ಸಂಗ್ರಹವಾಗಿ ಸುತ್ತಮುತ್ತಲಿನ ನಗರ/ಗ್ರಾಮೀಣ ಪ್ರದೇಶಗಳ ಜನರಿಗೆ ಕುಡಿವ ನೀರು ಸರಬರಾಜಾಗುತ್ತಿದೆ ನಗರ ಪ್ರದೇಶದ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳಿಗೆ ಕಾಡಿನ ಬಗ್ಗೆ ಮಾಹಿತಿ ಮತ್ತು ಹೆಚ್ಚಿನ ಅರಿವು ಮೂಡಿ ಸುವ ಸಲುವಾಗಿ ನಗರ ಪ್ರದೇಶಕ್ಕೆ ಹೊಂದಿ ಕೊಂಡಂತಿರುವ ಅರಣ್ಯ ಪ್ರದೇಶಗಳಾದ ಚಿಂತಾಮಣಿ ವಲಯ ವ್ಯಾಪ್ತಿಯಲ್ಲಿರುವ ಕೈವಾರ ತಪೋವನ, ಕಾಡುಮಲ್ಲೇಶ್ವರ ಬೆಟ್ಟ, ಗಡಿಗವಾರಹಳ್ಳಿ, ಚಿಕ್ಕಬಳ್ಳಾ ಪುರ ವಲಯದ ಸುಲಾಪ್ಪನದಿನ್ನೆ ಅರಣ್ಯ ಪ್ರದೇಶ ಸೇರಿದಂತೆ ವಿವಿಧೆಡೆ ಸಸ್ಯೋದ್ಯಾನ/ದೇವರಕಾಡು ನಿರ್ಮಿಸಲಾಗುತ್ತಿದೆ.
ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ 2017-18ನೇ ಸಾಲಿನಲ್ಲಿ ಒಟ್ಟು ಎಲ್‌ಪಿಜಿ ಗ್ಯಾಸ್ ಮತ್ತು ಸ್ಟೌವುಗಳನ್ನು ಫಲಾನುಭವಿಗಳಿಗೆ ವಿತರಿಸಿದ್ದು, 2021-22ನೇ ಸಾಲಿನಲ್ಲಿ ಎಸ್.ಸಿ.ಪಿ ಯೋಜನೆಯಡಿ 36 ಫಲಾನು ಭವಿಗಳಿಗೆ ಮತ್ತು ಟಿ.ಎಸ್.ಪಿ ಯೋಜನೆಯಡಿ 58 ಫಲಾನುಭವಿಗಳಿಗೆ ಉಚಿತವಾಗಿ ಗ್ಯಾಸ್ ಸಿಲಿಂಡರ್ ಗಳನ್ನು ವಿತರಣೆ ಮಾಡಲಾಗಿದೆ.
ರೈತರಿಗೆ ಸಸಿಗಳ ವಿತರಣೆ : ಚಿಕ್ಕಬಳ್ಳಾಪುರ ಪ್ರಾದೇಶಿಕ ಅರಣ್ಯ ವಿಭಾಗದಿಂದ 2021-22ನೇ ಸಾಲಿನಲ್ಲಿ ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿ ಸಾರ್ವಜನಿಕರು/ ರೈತರ ಜಮೀನುಗಳಲ್ಲಿ ನಾಟಿ ಮಾಡಲು 341 ಫಲಾನುಭವಿಗಳಿಗೆ ಒಟ್ಟು 428044 ಸಸಿಗಳನ್ನು ವಿತರಿಸಿದ್ದು, ಪ್ರತಿ ಮೂರು ವರ್ಷಗಳು ಬದುಕುಳಿದ ಸಸಿಗಳಿಗೆ ಕ್ರಮವಾಗಿ ಮೊದಲನೆ ವರ್ಷ ರೂ. 35.00, ಎರಡನೇ ವರ್ಷ ರೂ. 45.00 ಹಾಗೂ ಮೂರನೆ ವರ್ಷ ರೂ. 45.00 ರಂತೆ ಪ್ರತಿ ಸಸಿಗೆ ಪ್ರೋತ್ಸಾಹ ಧನವನ್ನು ನೀಡಿ ಅರಣ್ಯ ಬೆಳೆಸಲು ಪ್ರೋತ್ಸಾಹಿಸಲಾಗುತ್ತಿದೆ. ಹಾಗೂ ಸಾರ್ವಜನಿಕರಿಗೆ ಸಸಿ ವಿತರಣೆ ಯೋಜನೆಯಡಿಯಲ್ಲಿಯೂ 7000 ಸಸಿಗಳನ್ನು ಜನರಿಗೆ ರಿಯಾಯ್ತಿ ದರದಲ್ಲಿ ವಿತರಿಸಲಾಗುತ್ತಿದೆ.
ನೆಡುತೋಪುಗಳ ನಿರ್ಮಾಣ : ಚಿಕ್ಕಬಳ್ಳಾಪುರ ಪ್ರಾದೇಶಿಕ ಅರಣ್ಯ ವಿಭಾಗದಿಂದ ಅರಣ್ಯ ಪ್ರದೇಶವನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ವಿವಿಧ ಯೋಜನೆಗಳಡಿ ನೆಡುತೋಪು ನಿರ್ಮಾಣ ಮತ್ತು ನಿರ್ವಹಣೆ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಹಾಗೂ ಅರಣ್ಯ ಪ್ರದೇಶವನ್ನು ಸಂರಕ್ಷಣೆ ಮಾಡುವ ಸಲುವಾಗಿ ಬೆಂಕಿ ನಿಯಂತ್ರಣ ಮಾಡಲು, ಅಕ್ರಮ ಸಾಗಾಣಿಕೆಗಳನ್ನು ತಡೆಯಲು, ವನ್ಯಜೀವಿಗಳ ರಕ್ಷಣಾ ಕಾರ್ಯ, ಅರಣ್ಯ ಪ್ರದೇಶಗಳ ಒತ್ತುವರಿಯನ್ನು ತೆರವುಗೊಳಿಸುವ ನಿಟ್ಟಿನಲ್ಲಿ ಅರಣ್ಯ ಪ್ರದೇಶಗಳಿಗೆ ಮುಳ್ಳುತಂತಿ ಬೇಲಿ ನಿರ್ಮಾಣ ಕಾರ್ಯಗಳು ನಡೆಯುತ್ತಿವೆ.