Advertisement

ಗಾಳಿಪಟದ ಮಾಂಜಾಗೆ ಎನ್‌ಜಿಟಿ ನಿಷೇಧ

04:00 AM Jul 12, 2017 | Team Udayavani |

ಹೊಸದಿಲ್ಲಿ: ಹಲವು ವ್ಯಕ್ತಿಗಳು ಹಾಗೂ ಪ್ರಾಣಿಗಳ ಜೀವಕ್ಕೇ ಕಂಟಕವಾಗಿದ್ದ ಮಾಂಜಾಗೆ (ಗಾಳಿಪಟ ಹಾರಿಸಲು ಬಳಸುವ ನೂಲು) ಸಂಪೂರ್ಣ ನಿಷೇಧ ಹೇರಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಮಂಗಳವಾರ ಮಹತ್ವದ ಆದೇಶ ಹೊರಡಿಸಿದೆ.

Advertisement

ನೈಲಾನ್‌ ಅಥವಾ ಇತರ ಜೈವಿಕವಾಗಿ ವಿಭಜಿಸಲಾಗದ ವಸ್ತುಗಳಿಂದ ತಯಾರಾದ ಮಾಂಜಾವು ಪ್ರಾಣಿ, ಪಕ್ಷಿ ಸಂಕುಲ ಮತ್ತು ಮನುಷ್ಯರ ಜೀವಕ್ಕೆ ಎರವಾಗಿರುವ ಕಾರಣ ಅದಕ್ಕೆ ನಿಷೇಧ ಹೇರುತ್ತಿದ್ದೇವೆ ಎಂದು  ಎನ್‌ಜಿಟಿ ಹೇಳಿದೆ. ಜತೆಗೆ, ‘ಮಾಂಜಾ’ದ ತಯಾರಿಕೆ, ಮಾರಾಟ, ಕೊಳ್ಳುವಿಕೆ ಮತ್ತು ಬಳಕೆಯನ್ನು ನಿಲ್ಲಿಸುವಂತೆ ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡಿದೆ.

ಇದೇ ಸಂದರ್ಭದಲ್ಲಿ ನಿಷೇಧವು ಗಾಜು ಲೇಪಿತ ನೈಲಾನ್‌, ಚೀನೀ ಮಾಂಜಾ ಮತ್ತು ಕಾಟನ್‌ ಮಾಂಜಾಗೆ ಮಾತ್ರ ಅನ್ವಯವಾಗುತ್ತದೆ ಎಂದು ಎನ್‌ಜಿಟಿ ಮುಖ್ಯಸ್ಥ ನ್ಯಾ| ಸ್ವತಂತ್ರಕುಮಾರ್‌ ನೇತೃತ್ವದ ಪೀಠ ಸ್ಪಷ್ಟಪಡಿಸಿದೆ. ಪ್ರಾಣಿ ಹಕ್ಕುಗಳ ಸಂಸ್ಥೆ ಪೇಟಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಬಳಿಕ ಎನ್‌ಜಿಟಿ ಈ ತೀರ್ಪು ನೀಡಿದೆ. ಕರ್ನಾಟಕದಲ್ಲಿ ಕಳೆದ ವರ್ಷದ ಜುಲೈಯಲ್ಲೇ ಚೀನೀ ಮಾಂಜಾಗಳಿಗೆ ನಿಷೇಧ ಹೇರಿ ಆದೇಶ ಹೊರಡಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next