ದೇವನಹಳ್ಳಿ: SSLC ಮಕ್ಕಳು ವಿದ್ಯಾಭ್ಯಾಸದಿಂದ ವಂಚಿತರಾಗಿ ಕುಂಠಿತರಾಗಬಾರದೆಂಬ ಕಾರಣಕ್ಕಾಗಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದಮೇ 20ರಿಂದಲೇ ವಾರ ಆನ್‌ಲೈನ್‌ನಲ್ಲಿಯೇ ಕಿರುಪರೀಕ್ಷೆ ಆರಂಭವಾಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಪ್ರಶ್ನೆಪತ್ರಿಕೆ:ಸಾರ್ವಜನಿಕ ಶಿಕ್ಷಣ ಇಲಾಖೆಕಚೇರಿಯಿಂದ ಕಿರುಪರೀಕ್ಷೆಗೆ ಪ್ರಥಮ ವಿಷಯಕ್ಕೆ100 ಅಂಕ, ಇನ್ನುಳಿದ ಎಲ್ಲಾ ವಿಷಯಗಳಿಗೆ 80 ಅಂಕನೀಡಲಾಗಿದೆ. ಬೆಳಗ್ಗೆ 10 ರಿಂದ ಮಧ್ಯಾಹ್ನ 1 ರವರೆಗೆ ಕಿರುಪರೀಕ್ಷೆ ಮಾಡಲಾಗುತ್ತಿದೆ. ಉಪನಿರ್ದೇಶಕರ ಕಚೇರಿಯಿಂದ ತಾಲೂಕು ಶಿಕ್ಷಣಾಧಿಕಾರಿಗಳ ವ್ಯಾಟ್ಸಪ್ ಗ್ರೂಪ್‌ಗೆ ಪ್ರಶ್ನೆಪತ್ರಿಕೆ ಹಾಕಿ ಕ್ಷೇತ್ರಶಿಕ್ಷಣಾಧಿಕಾರಿಗಳ ವ್ಯಾಟ್ಸಪ್ ಮೂಲಕ ಮುಖ್ಯಶಿಕ್ಷಕರ ವ್ಯಾಟ್ಸಪ್‌ಗೆ ಪ್ರಶ್ನೆಪತ್ರಿಕೆ ಹಾಕಲಾಗುತ್ತದೆ.
ವಿದ್ಯಾರ್ಥಿಗಳು ಪ್ರಶ್ನೆ ಪತ್ರಿಕೆಯನ್ನು ಉತ್ತರ ಬರೆದನಂತರ ಶಿಕ್ಷಕರ ವ್ಯಾಟ್ಸಪ್‌ಗೆ ಹಾಕಬೇಕು. ಶಾಲೆಪ್ರಾರಂಭಗೊಂಡ ನಂತರಆಪ್ರಶ್ನೆ ಪತ್ರಿಕೆತೆಗೆದುಕೊಂಡು ಬರುವಂತೆ ವಿದ್ಯಾರ್ಥಿಗಳಿಗ ಸೂಚಿಸಲಾಗಿದೆ ಎಂದು ಉಪ ನಿರ್ದೇಶಕರು ಹೇಳುತ್ತಾರೆ. ಪರೀಕ್ಷೆ ಮುಂದೂಡಿ ಆದೇಶಹೊರಡಿಸಿದ್ದು ವಿದ್ಯಾರ್ಥಿಗಳು ಪರಿಕ್ಷೆ ನಡೆಸುವುದುಯಾವಾಗ ಎಂಬ ಚಿಂತೆಯಲ್ಲಿ ತೊಡಗಿದ್ದಾರೆ.
ಅಭ್ಯಾಸ:ಎಸ್ಸೆಸ್ಸೆಲ್ಸಿ ವಿಷಯಗಳನ್ನು ಶೇ.30 ಪಠ್ಯವನ್ನು ಕಡಿತಗೊಳಿಸಿದ್ದು, ಉಳಿದ ಪಠ್ಯಗಳನ್ನು ವಿದ್ಯಾರ್ಥಿಗಳು ಮನೆಯಲ್ಲಿಯೇ ಆನ್‌ಲೈನ್ ಶಿಕ್ಷಣ ಮೂಲಕ ಅಭ್ಯಾಸ ಮಾಡುತ್ತಿದ್ದಾರೆ. ಶಾಲೆ ಇಲ್ಲದೆಮನೆಗಳಲ್ಲಿಯೇ ಮೊಬೈಲ್ ಮೂಲಕ ಕಲಿಕೆಯಲ್ಲಿ ತೊಡಗಿರುವ ವಿದ್ಯಾರ್ಥಿಗಳಿಗೆ ಜಿಲ್ಲಾ ಸಾರ್ವಜನಿಕಶಿಕ್ಷಣ ಇಲಾಖೆ ವತಿಯಿಂದ ಬಿಆರ್‌ಡಿ ಜ್ಞಾನದೀಪಅಪ್ಲಿಕೇಶನ್ ಅನ್ನು ಬಿಡುಗಡೆಗೊಳಿಸಿದ್ದು, ಆಅಪ್ಲಿಕೇಶನ್‌ನಲ್ಲಿ ಇಲಾಖೆ ಹಾಗೂ ಜಿಲ್ಲಾ ಪೂರಕಪ್ರಶ್ನೆಪತ್ರಿಕೆ ಚಂದನ ವಾಹಿನಿ ಸಂವೇದ ತರಗತಿಪಾಸಿಂಗ್ ಪ್ಯಾಕೇಜ್ 1 ಅಂಕ ಮತ್ತು 2 ಅಂಕ ಪ್ರಶ್ನೆ,ಈ ಪಟ್ಟಿಯ ಪ್ರಶ್ನೆಗಳು ಲಭ್ಯವಿದೆ. ವಿದ್ಯಾರ್ಥಿಗಳುಯಾವುದೇ ಲಾಗಿನ್ ಇಲ್ಲದೆ ಅಪ್ಲಿಕೇಶನ್ ಬಳಸಿಕೊಳ್ಳಬಹುದಗಿದೆ.
ಇದರೊಂದಿಗೆ ಅನೇಕಇನ್‌ಕಂಟೆಂಟ್ ಆನ್‌ಲೈನ್‌ನಲ್ಲಿ ಲಭ್ಯವಿದ್ದು, ಮಕ್ಕಳುಪರೀಕ್ಷೆಗೆ ತಯಾರಾಗಲು ಅನುಕೂಲ ಮಾಡಿದೆ.ವೇಳಾಪಟ್ಟಿ:ನಿತ್ಯ ವೇಳಾಪಟ್ಟಿ ಸಿದ್ಧಪಡಿಸಿಕೊಳ್ಳಿ. 6ವಿಷಯಗಳಿಗೂ ನಿಗದಿತ ಸಮಯ ಮೀಸಲಿಡಬೇಕು. ದಿನದಲ್ಲಿ ಕನಿಷ್ಠ ಅರ್ಧ ಗಂಟೆಪಠ್ಯೇತರ ಚಟುವಟಿಕೆ ಮೀಸಲಿಡಬೇಕು. ಗಣಿತದಲ್ಲಿಹೆಚ್ಚು ಲೆಕ್ಕ ಅಭ್ಯಾಸವಿರುತ್ತದೆ. ವಿಜ್ಞಾನದ ಚಿತ್ರ,ಸಮಾಜದಲ್ಲಿನ ನಕ್ಷೆಗಳನ್ನು ಪ್ರತ್ಯೇಕವಾಗಿ ಅಭ್ಯಾಸಮಾಡಬೇಕು. ಕನ್ನಡ, ಇಂಗ್ಲಿಷ್, ಹಿಂದಿವಿಷಯಗಳನ್ನು ಕಥೆಗಳ ರೂಪದಲ್ಲಿ ಓದಿ ಅಧ್ಯಯನಮಾಡಬೇಕು. ಮಕ್ಕಳು ನಿರಂತರವಾಗಿ ಕಲಿಕೆಯಲ್ಲಿತೊಡಗಿಸಿಕೊಂಡರೆ ಪರೀಕ್ಷೆ ವೇಳೆಗೆ ಹೆಚ್ಚು ತಯಾರು ಮಾಡಲು ಅನುಕೂಲವಾಗುತ್ತದೆ.