Advertisement

ಕರ್ಫ್ಯೂಗೆ ಉತ್ತಮ ಪ್ರತಿಕ್ರಿಯೆ

01:57 PM Apr 30, 2021 | Team Udayavani |

ದೊಡ್ಡಬಳ್ಳಾಪುರ: ಕೋವಿಡ್ ನಿಯಂತ್ರಿಸುವ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಜಾರಿಮಾಡಿರುವ ಜನತಾ ಕರ್ಫ್ಯೂಗೆತಾಲೂಕಿನಲ್ಲಿ ಎರಡನೇ ದಿನವೂ ಉತ್ತಮಪ್ರತಿಕ್ರಿಯೆ ವ್ಯಕ್ತವಾಯಿತು.

Advertisement

ವಾಣಿಜ್ಯ ವ್ಯವಹಾರಗಳು ಸ್ಥಬ್ಧಗೊಂಡಿದ್ದವು. ತುರ್ತು ಅಗತ್ಯವಿರುವವರಿಗೆ ಹೊರತುಪಡಿಸಿದಂತೆ ಸಾರಿಗೆ ಸಂಚಾರ ಸಂಪೂರ್ಣ ಸ್ಥಬ್ಧಗೊಂಡಿತ್ತು. ಬೆಳಗ್ಗೆ 6ರಿಂದ 10 ಗಂಟೆಗಳ ಅವಧಿಯಲ್ಲಿ ಅಗತ್ಯವಸ್ತುಗಳನ್ನು ಕೊಳ್ಳಲು ಅವಕಾಶಕಲ್ಪಿಸಲಾಗಿತ್ತು. ಈ ವೇಳೆ ಮಾರುಕಟ್ಟೆಪ್ರದೇಶದಲ್ಲಿ ಜನಸಂದಣಿ ಹೆಚ್ಚಾಗಿತ್ತು.ರಸ್ತೆಯಲ್ಲಿ ದ್ವಿಚಕ್ರ ವಾಹನಗಳುಸಂಚರಿಸುತ್ತಿದ್ದವು.

ಜನಸಂದಣಿ ಹಾಗೂವಾಹನ ಸಂಚಾರ ಇರುತ್ತಿದ್ದ ರಸ್ತೆಗಳಲ್ಲಿ ಜನಸಂಚಾರವಿಲ್ಲದೇ ಬಿಕೋ ಎನ್ನುತ್ತಿತ್ತು. ನಗರದ ಪ್ರಮುಖ ಉದ್ಯಮನೇಕಾರಿಕೆ ಅಬಾಧಿತವಾಗಿತ್ತು . ಗೃಹಕೈಗಾರಿಕೆಗಳು ಎಂದಿನಂತಿದ್ದವು. ಬೆಳಗಿನ4 ಗಂಟೆಗಳ ಕಾಲ ಮಾರುಕಟ್ಟೆ ಪ್ರದೇಶಸೇರಿದಂತೆ ವಾಣಿಜ್ಯ ಪ್ರದೇಶಗಳಲ್ಲಿನಿತ್ಯವೂ ಹೆಚ್ಚಿನ ಜನಸಂದಣಿ ಕಂಡುಬರುತ್ತಿದೆ. ಪೊಲೀಸ್‌ ಹಾಗೂ ನಗರಸಭೆಅಧಿಕಾರಿಗಳು ಈ ವೇಳೆಯಲ್ಲಿ ಜನರಿಗೆಎಚ್ಚರಿಕೆ ನೀಡುವ ಕಾರ್ಯ ಮಾಡಬೇಕಿದೆ.ಇಲ್ಲವಾದಲ್ಲಿ ಕೊವಿಡ್‌ ಸೋಂಕುಹೆಚ್ಚಾಗಲಿದೆ ಎನ್ನುತ್ತಾರೆ ತಜ್ಞರು.

Advertisement

Udayavani is now on Telegram. Click here to join our channel and stay updated with the latest news.

Next