ಕುನೊ : ನಮೀಬಿಯಾದಿಂದ ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ತರಲಾಗಿರುವ ಎಂಟು ಚೀತಾಗಳು “ಆರೋಗ್ಯಕರ, ಸಕ್ರಿಯ ಮತ್ತು ಉತ್ತಮವಾಗಿ ಹೊಂದಿಕೊಂಡಿರುವ” ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಸಂತೋಷ ವ್ಯಕ್ತಪಡಿಸಿದ್ದಾರೆ.
ಸೆಪ್ಟೆಂಬರ್ ಮಧ್ಯದಲ್ಲಿ ನಮೀಬಿಯಾದಿಂದ ಸ್ಥಳಾಂತರಗೊಂಡಾಗಿನಿಂದ ಅವುಗಳನ್ನು ಇರಿಸಲಾಗಿದ್ದ ಕ್ವಾರಂಟೈನ್ ಪ್ರದೇಶದಿಂದ ಒಗ್ಗಿಕೊಳ್ಳುವ ದೊಡ್ಡ ಆವರಣಕ್ಕೆ ಎಂಟು ಚೀತಾಗಳ ಪೈಕಿ ಎರಡನ್ನು ಬಿಡುಗಡೆ ಮಾಡಿರುವುದನ್ನು ಅವರು “ಶ್ರೇಷ್ಠ ಸುದ್ದಿ” ಎಂದು ಕರೆದರು.
“ಒಳ್ಳೆಯ ಸುದ್ದಿ! ಕಡ್ಡಾಯ ಕ್ವಾರಂಟೈನ್‌ನ ನಂತರ, ಕುನೋ ಆವಾಸಸ್ಥಾನಕ್ಕೆ ಮತ್ತಷ್ಟು ಹೊಂದಿಕೊಳ್ಳಲು 2 ಚೀತಾಗಳನ್ನು ದೊಡ್ಡ ಆವರಣಕ್ಕೆ ಬಿಡಲಾಗಿದೆ ಎಂದು ನನಗೆ ತಿಳಿಸಲಾಗಿದೆ. ಉಳಿದವು ಗಳನ್ನೂ ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ಮೋದಿ ಟ್ವೀಟ್‌ನಲ್ಲಿ ತಿಳಿಸಿ, ಎರಡು ಚೀತಾಗಳ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಕುನೊ ರಾಷ್ಟ್ರೀಯ ಉದ್ಯಾನವನ ವಿಭಾಗೀಯ ಅರಣ್ಯ ಅಧಿಕಾರಿ (ಡಿಎಫ್‌ಒ) ಪ್ರಕಾಶ್ ಕುಮಾರ್ ವರ್ಮಾ ಅವರು ಶನಿವಾರ ಎರಡು ಚೀತಾಗಳನ್ನು ಕ್ವಾರಂಟೈನ್ ವಲಯಗಳಿಂದ ದೊಡ್ಡ ಆವರಣದಲ್ಲಿ ಬಿಡಲಾಗಿದೆ ಎಂದು ಹೇಳಿದ್ದಾರೆ.
Related Articles
ದೊಡ್ಡ ಆವರಣವು ಐದು ಚದರ ಕಿಲೋಮೀಟರ್‌ಗಿಂತ ಹೆಚ್ಚು ವಿಸ್ತೀರ್ಣವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.