Advertisement
ಇದು ಹದ್ದಿಗಿಂತ ದೊಡ್ಡದು. ಹದ್ದಿನ ಮೈ ಬಣ್ಣವನ್ನು ತುಂಬಾ ಹೋಲುತ್ತದೆ. ರಾಜಸ್ಥಾನದ ತಳಿ ಸ್ವಲ್ಪ ಕೆಂಪು ಮಿಶ್ರಿತ ಕಂದು ಬಣ್ಣದಿಂದ ಕೂಡಿದೆ. ಉದ್ದ ಗೆರೆಗಳಿರುವ ಹಳದಿ ಕಾಲಿನ ಮುಂಭಾಗದಲ್ಲಿ ಚಿಕ್ಕ ಮೂರು ಬೆರಳಿದೆ. ಇದರ ರೆಕ್ಕೆಯ ಅಗಲ 614-762 ಎಂ.ಎಂ. 100-122-170 ಸೆಂ.ಮೀ. ದೊಡ್ಡ ಕಾಡು ಕೋಳಿ, ಕೋರಿ ಕಾಡು ಕೋಳಿ ಮತ್ತು ಭಾರತದ ಕಾಡು ಕೋಳಿಯಲ್ಲಿ ತುಂಬಾ ಸಾಮ್ಯತೆ ಇದೆ. ಗಂಡುಹಕ್ಕಿಯ ಕುತ್ತಿಗೆಯಲ್ಲಿ ಚೀಲವಿದ್ದು, ಅದೇ ಕಾರಣದಿಂದ ಪಕ್ಷಿಯು ವಿಚಿತ್ರವಾಗಿ ಕಾಣಿಸುತ್ತದೆ. ಪ್ರಣಯದ ಸಂದರ್ಭದಲ್ಲಿ ಈ ಚೀಲದಲ್ಲಿ ಗಾಳಿ ತುಂಬಿಕೊಂಡು ಸುಮದುರ ದನಿಯನ್ನು ಹೊರಡಿಸುವ ಮೂಲಕ, ಪುಕ್ಕ ಅಗಲಿಸುವುದು, ತಲೆ ಎತ್ತಿ ಕೂಗುತ್ತಾ ತನ್ನ ಪೌರುಶ ಪ್ರದರ್ಶಿಸಿ -ಹೆಣ್ಣನ್ನು ಒಲಿಸಿಕೊಳ್ಳುತ್ತದೆ.
Related Articles
Advertisement
ಕಾಲು ಮೊಳಕಾಲಿನ ತನಕ ಚಿಕ್ಕದಿದ್ದು -ಮೊಳ ಕಾಲಿನಿಂದ ಕೆಳಭಾಗ ಉದ್ದವಾಗಿರುವುದು ಕಾಲಲ್ಲಿ ಚಿಕ್ಕ ಮೂರು ಬೆರಳು ಮುಂದಕ್ಕೆ ಚಾಚಿದೆ. ಇದು ವೇಗವಾಗಿ ನೆಲದಮೇಲೆ ಓಡಾಡಲು ಸಹಕಾರಿ.
ಇದು ತನ್ನ ಕುತ್ತಿಗೆಯನ್ನು ಮುಂದೆ ಚಾಚಿ, ರೆಕ್ಕೆ ಬಿಚ್ಚಿ ನವಿಲಿನಂತೆ ಹಾರುವಾಗ ಇದರ ರೆಕ್ಕೆಯ ಮಧ್ಯ ಇರುವ ಕಪ್ಪು ಗರಿ ಸ್ಪಸ್ಟವಾಗಿ ಕಾಣುತ್ತದೆ. ಇದು ದೊಡ್ಡ ಮತ್ತು ಭಾರವಾಗಿದ್ದರೂ ದೂರ ಹಾರುವ ಸಾಮರ್ಥ್ಯ ಈ ಕೋಳಿಗೆ ಇದೆ. ಗಾಬರಿಯಾದಾಗ, ಕೆಲವೊಮ್ಮೆ ತೋಳ, ನಾಯಿ, ಗಿಡುಗಗಳು ತನ್ನ ಮೊಟ್ಟೆ ಮತ್ತು ಮರಿಗಳನ್ನು ತಿನ್ನಲು ಬಂದಾಗ -ಹಾರಿ , ಕುಪ್ಪಳಿಸಿ ಕುಕ್ಕಿ ರಕ್ಷಣೆ ಒದಗಿಸುತ್ತದೆ. ಇದರ ಇರುನೆಲೆ ನಾಶ, ಬೇಟೆಯಾಡುವುದು, ಇದರ ಗರಿ ಮತ್ತು ಮಾಂಸಕ್ಕಾಗಿ ಕೊಲ್ಲುವುದರಿಂದ, ಸುಲಭವಾಗಿ ವೈರಿಗಳಿಂದ ಇದರ ಮೊಟ್ಟೆ, ಮರಿಗಳು ನಾಶವಾಗುವುದರಿಂದ -ಇದರ ಸಂತತಿಯಲ್ಲಿ ಕಡಿಮೆಯಾಗುತ್ತಿದೆ.
ಪಿ. ವಿ.ಭಟ್ ಮೂರೂರು