Advertisement

ಶ್ರೀಮಠದಲ್ಲಿ ಮಹಾ ದಾಸೋಹ ವ್ಯವಸ್ಥೆ: ಗ್ರಾಮಸ್ಥರ ಸೇವಾ ಕಾರ್ಯ

07:28 AM Feb 06, 2019 | |

ನಂಜನಗೂಡು: ಸುತ್ತೂರು ಜಾತ್ರಾ ಮಹೋತ್ಸವ ಎಷ್ಟು ಪ್ರಸಿದ್ಧಿಯೋ ಶ್ರೀಮಠದ ಮಹಾದಾಸೋಹ ಕೂಡ ಅಷ್ಟೇ ಹೆಸರು ವಾಸಿಯಾಗಿದೆ. ದಾಸೋಹದಲ್ಲಿ ಭಕ್ತರಿಗೆ ಸೇವಾ ಮನೋಭಾವದಿಂದ ಉಣಬಡಿಸಲು ವಿವಿಧ ಗ್ರಾಮಗಳ ಗ್ರಾಮಸ್ಥರು ಸ್ವಯಂ ಪ್ರೇರಣೆಯಿಂದ ಪಾಲ್ಗೊಳ್ಳುತ್ತಾರೆ. ಆರು ದಿನಗಳ ಅವಧಿಯಲ್ಲಿ ಸುಮಾರು 10 ಲಕ್ಷ ಭಕ್ತರಿಗೆ ದಾಸೋಹ ಕಲ್ಪಿಸಲಾಗಿರುತ್ತದೆ.

Advertisement

ಬಾಣಸಿಗರು ಮಾಡಿಟ್ಟ ಶುಚಿ-ರುಚಿ ಯಾದ ಭೋಜನವನ್ನು ಭಕ್ತರಿಗೆ ಬಡಿಸುವ ಕೈಂಕರ್ಯಕ್ಕೆ ಸೇವಾಕಾಂಕ್ಷಿಗಳ ದಂಡೆ ಇಲ್ಲಿ ಜಮಾವಣೆಯಾಗುತ್ತದೆ. ಸೇವೆಗಾಗಿ ಜೆಎಸ್‌ಎಸ್‌ನ 350ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳ ಪ್ರಾಧ್ಯಾಪಕ ವೃಂದ ಹಾಗೂ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಸದಾ ಟೊಂಕಕಟ್ಟಿ ನಿಲ್ಲುತ್ತಾರೆ. ಇವರೊಂದಿಗೆ ಸುತ್ತೂರಿನ ಸುತ್ತಲಿನ ಹತ್ತೂ ರಿನ‌ ಗ್ರಾಮಸ್ಥರು ಸಹಕರಾ ನೀಡುತ್ತಾರೆ.

ಮಹಾದಾಸೋಹದ ಪ್ರಸಾದದ ವಿತರಣೆ ಗಾಗಿ ಜಾತ್ರೆಯ ಪ್ರಾರಂಭದ ದಿನದಿಂದ ಕೊನೆಯವರೆಗೂ ಐದು ವಿಭಾಗಗಳ ಸೇವಾ ಕೈಂಕರ್ಯ ನಡೆಸಲಾಗುತ್ತದೆ. ಜಾತ್ರೆಯ ಮಹಾದಾಸೋಹದಲ್ಲಿ ಆರು ವಿಭಾಗಗಳಿದ್ದು, ಮೊದಲೆರಡು ವಿಭಾಗಗಳು ಮಹಿಳೆಯರಿಗೆ ಮೀಸಲಿದ್ದರೆ, ಉಳಿದ ಮೂರು ವಿಭಾಗಗಳು ಪುರುಷರಿಗೆ ಅವಕಾಶ ಕಲ್ಪಿಸಲಾಗಿದೆ. ಉಳಿದ ಒಂದು ವಿಭಾಗ ಸ್ವಯಂ ಸೇವಕರು, ವೃದ್ಧರು ಮತ್ತು ಅಂಗವಿಕಲರಿಗೆ ಕಾಯ್ದಿರಿಸಿರಲಾಗಿರುತ್ತದೆ.

ಮೊದಲ ದಿನ: ಜಾತ್ರಾ ಮಹೋತ್ಸವದ ಪ್ರಥಮ ದಿನದ ಊಟ ಬಡಿಸುವ ಜವಾಬ್ದಾರಿ ಯನ್ನು ತಗಡೂರು, ಸುತ್ತೂರು, ಆಲತ್ತೂರು, ಮಾದಯ್ಯನಹುಂಡಿ, ಮೂಡಹಳ್ಳಿ, ಮಲ್ಲ ರಾಜಯ್ಯನ ಹುಂಡಿ, ಸೋನಹಳ್ಳಿ, ಹೆಗ್ಗಡ ಹಳ್ಳಿ (ಗುಂಡ್ಲುಪೇಟೆ) ಗ್ರಾಮಸ್ಥರು ವಹಿಸಿ ಕೊಳ್ಳುತ್ತಾರೆ.

2ನೇ ದಿನ: ಎರಡನೇ ದಿನ ಹೊಸಕೋಟೆ, ಹದಿನಾರು, ತುಮ್ಮನೇರಳೆ, ನಂದಿಗುಂದ, ನಂದಿಗುಂದಪುರ, ಹುಳಿಮಾವು, ಬೊಕ್ಕಹಳ್ಳಿ, ಬಸಳ್ಳಿಹುಂಡಿ ಹಾಗೂ ಯೂತ್‌ ಹಾಸ್ಟೆಲ್‌.

Advertisement

3ನೇ ದಿನ: ತೃತೀಯ ದಿನದ ದಾಸೋಹ ಹೊಣೆ ಜೀಮಾರಹಳ್ಳಿ, ಬಿಳುಗಲಿ, ಬಸವನ ಪುರ, ಸಣ್ಣಮಲ್ಲುಪುರ, ತಗಡೂರು, ಚುಂಚನಹಳ್ಳಿ ಗ್ರಾಮಸ್ಥರದ್ದಾಗಿದೆ.

4ನೇ ದಿನ: ನಾಲ್ಕನೇ ದಿನವಾದ ತೆಪ್ಪೊತ್ಸವ ದಿನದಂದು ಬಿಳಿಗೆರೆ, ಕುಪ್ಪರವಳ್ಳಿ, ಕಲ್ಕುಂದ, ಗೆಜ್ಜಿಗನಹಳ್ಳಿ, ಕಾಹಳ್ಳಿ, ಹೊರಳವಾಡಿ, ತಾಯೂರು, ನಗರ್ಲೆ ಮತ್ತು ಹೆಗ್ಗಡಹಳ್ಳಿ (ನಂಜನಗೂಡು)ಗ್ರಾಮಸ್ಥರು ಸೇವೆಯನ್ನು ಮುಂದುವರಿಸುವರು.

5ನೇ ದಿನ: ಐದನೇ ದಿನವಾದ ಅನ್ನಬ್ರಹ್ಮೋ ತ್ಸವ ದಿನದಂದು ಕಲ್ಮಹಳ್ಳಿ, ಸರಗೂರು, ಬಸವನಪುರ, ಕುಪ್ಪರವಳ್ಳಿ, ಬಿಳುಗಲಿ ಗ್ರಾಮ ಸ್ಥರು ಊಟ ಬಡಿಸುವ ಕಾರ್ಯ ಕೈಗೊಳ್ಳುತ್ತಾರೆ. ಇದರೊಂದಿಗೆ ಜಾತ್ರೆಗೆ ಆಗಮಿಸುವ ಸಹ ಸ್ರಾರು ಭಕ್ತರು ಕೂಡ ಪ್ರತಿ ದಿನದ ಸೇವಾಪಟ್ಟಿ ಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿ ಕೊಂಡು ಸೇವೆ ಕೈಂಕರ್ಯ ನಡೆಸುತ್ತಾರೆ.

ಜೆಎಸ್‌ಎಸ್‌ ವಿಶೇಷ ಚೇತನರ ಪಾಲಿಟೆಕ್ನಿಕ್‌ನಲ್ಲಿ ಓದುತ್ತಿರುವ 500ಕ್ಕೂ ಹೆಚ್ಚು ವಿದ್ಯಾರ್ಥಿಗಳಲ್ಲಿ ಪ್ರತಿದಿನ ದಾಸೋಹ ಸೇವೆಯಲ್ಲಿ ಪಾಲ್ಗೊಳ್ಳುತ್ತಾರೆ. ಮೈಸೂರಿನ ಪಾಲಿಟೆಕ್ನಿಕ್‌ ಕಾಲೇಜಿನಿಂದ ಮುಂಜಾನೆ ಬಸ್‌ಗಳಲ್ಲಿ ಪ್ರಾಧ್ಯಾಪಕರ ಸುಪರ್ದಿಯಲ್ಲಿ ಆಗಮಿಸುವ ಈ ವಿದ್ಯಾರ್ಥಿಗಳ ತಂಡ ಮಧ್ಯಾಹ್ನ ಹಾಗೂ ರಾತ್ರಿ 11.30ರವರೆಗೆ ದಾಸೋಹ ಸೇವೆಯನ್ನು ಕೈಗೊಳ್ಳುತ್ತಾರೆ.

ದಸೋಹದಲ್ಲಿ ಸ್ಟೀಲ್‌ ತಟ್ಟೆಯಲ್ಲಿ ಊಟ ಬಡಿಸಲಾಗುತ್ತದೆ. ಊಟ ಮುಗಿದ ನಂತರ ಭಕ್ತರೇ ಅದನ್ನು ತೊಳೆದು ಸೂಕ್ತ ಸ್ಥಳದಲ್ಲಿ ಇಡಬೇಕಿದೆ. ಕೈ ಸನ್ನೆ ಬಾಯಿ ಸನ್ನೆಗಳ ಮೂಲಕವೇ ಊಟ ಬಡಿಸುವ ಕಾರ್ಯ ನಡೆಯುತ್ತದೆ. ಒಟ್ಟಾರೆ ಆರು ದಿನಗಳ ಜಾತ್ರಾ ಮಹೋತ್ಸವದಲ್ಲಿ ಸುಮಾರು 10 ಲಕ್ಷ ಭಕ್ತರಿಗೆ ದಾಸೋಹ ವ್ಯವಸ್ಥೆ ಕಲ್ಪಿಸಿರಲಾಗಿರುತ್ತದೆ.

* ಶ್ರೀಧರ್‌ ಆರ್‌. ಭಟ್

Advertisement

Udayavani is now on Telegram. Click here to join our channel and stay updated with the latest news.

Next