ಹೊಸದಿಲ್ಲಿ: ಲಾಕ್‌ಡೌನ್ ಅವಧಿಯಲ್ಲಿ ಉತ್ತಮ ಆರೋಗ್ಯ ಮತ್ತು ಶೀಘ್ರವೇ ಸೋಂಕಿನ ಸಮಸ್ಯೆ ನಿವಾರಣೆಯಾಗಲಿ ಎಂದು ಪ್ರಧಾನಿ ನರೇಂದ್ರ ಮೋದಿ ಎ.5ರಂದು ಮಾಡಿದ ಟ್ವೀಟ್ ದೇಶದಲ್ಲಿ “ಅತ್ಯಂತ ಹೆಚ್ಚು ರಿಟ್ವೀಟ್ ಮಾಡಲಾಗಿರುವ ರಾಜಕೀಯ ಟ್ವೀಟ್’ ಎಂದು ಟ್ವಿಟರ್ ಇಂಡಿಯಾ ಹೇಳಿದೆ.
ಎ. 3ರಂದು ಪ್ರಧಾನಿ ಮೋದಿ ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಿದ್ದ ವೇಳೆ, ದೀಪ ಹಚ್ಚುವ ಬಗ್ಗೆ ಸಲಹೆ ನೀಡಿದ್ದರು. ಎ.5 ರಂದು ಟ್ವೀಟ್ ಮಾಡಿದ್ದ ಪ್ರಧಾನಿ ದೀಪ ಬೆಳಗಿ ಶೀಘ್ರ ಸಮಸ್ಯೆ ನಿವಾರಣೆಯಾಗಲಿ ಎಂದು ಆಶಿಸಿದ್ದರು. ಈ ಟ್ವೀಟ್ ಅನ್ನು 1,18,000 ರಿಟ್ವೀಟ್, 5,13,000 ಲೈಕ್‌ಗಳು ಅದಕ್ಕೆ ಸಿಕ್ಕಿವೆ.
101 ಕಾರ್ಯಕ್ರಮಗಳಲ್ಲಿ ಪಿಎಂ ಭಾಗಿ: ಕೊರೊನಾ ಅವಧಿ ಯಲ್ಲಿ ಕೂಡ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದನ್ನು ಕಡಿಮೆ ಮಾಡಿಲ್ಲ. ವಿಶೇಷವಾಗಿ ಸೆಪ್ಟೆಂಬರ್‌ನಿಂದ ನವೆಂಬರ್ ವರೆಗಿನ ಅವಧಿ ಯಲ್ಲಿ 101 ಸಾರ್ವ ಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ದ್ದಾರೆ. ವರ್ಚು ವಲ್ ವ್ಯವಸ್ಥೆ ಮೂಲಕ ಅವರು ಕಾರ್ಯಕ್ರಮ ಗಳಲ್ಲಿ ಭಾಗಿ ಯಾಗಿದ್ದಾರೆ. ಮೂರು ತಿಂಗಳ ಅವಧಿಯಲ್ಲಿ ಪ್ರಧಾನಿಯವರು ಪ್ರತಿ ದಿನ ಸರಾಸರಿ ಒಂದು ಕಾರ್ಯ ಕ್ರಮದಲ್ಲಿ ಭಾಗಿಯಾಗಿ ದ್ದಾರೆ. ಗ್ರಾಮೀಣ ಭಾರತದಿಂದ ದೊಡ್ಡ ಕಂಪೆನಿಗಳ ಸಿಇಒಗಳ ಜತೆಗೆ ಅವರು ಸಮಾಲೋಚನೆಯಲ್ಲಿ ಭಾಗಿಯಾಗಿದ್ದಾರೆ.
26- ಉದ್ಘಾಟನೆ ಅಥವಾ ಹೊಸ ಯೋಜನೆ ಶುರು
10- ಅಂತಾರಾಷ್ಟ್ರೀಯ ಕಾರ್ಯಕ್ರಮ(ಜಿ-20, ಆಸಿಯಾನ್ ಇಂಡಿಯಾ ಸಮ್ಮೇಳನ, ಬ್ರಿಕ್ಸ್ ಕೂಟ, ಇಟಲಿ, ಲಕ್ಸೆಂಬರ್ಗ್, ಶ್ರೀಲಂಕಾ, ಡೆನ್ಮಾರ್ಕ್ ಸರಕಾರಗಳ ಜತೆ ಸಭೆ) ಹೆಚ್ಚಿನ ಸಭೆ, ಕಾರ್ಯಕ್ರಮಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕವೇ ನಡೆಸಿದ ಪ್ರಧಾನಿ ವಿವಿಧ ಸಚಿವಾಲಯಗಳ ಆಂತರಿಕ ಸಭೆಗಳೂ ವಿಡಿಯೋ ಕಾನ್ಫರೆನ್ಸ್ ಮೂಲಕವೇ ನಡೆಸಿದ ಮೋದಿ ಮೈಸೂರು ವಿವಿಯಲ್ಲಿ ನಡೆದ ಕಾರ್ಯಕ್ರಮ, ಜೆಎನ್‌ಯುನಲ್ಲಿ ವಿವೇಕಾನಂದ ಪ್ರತಿಮೆ ಉದ್ಘಾಟನೆಯಲ್ಲಿ ಭಾಗಿ.