Advertisement

ಮಳೆಯಿಂದ ದ್ರಾಕ್ಷಿ ಹಾನಿ: ತಹಶೀಲ್ದಾರ್‌ ಪರಿಶೀಲನೆ

01:37 PM Nov 30, 2021 | Shwetha M |

ಚಡಚಣ: ಕಳೆದ ಕೆಲ ದಿನ ಜಿಲ್ಲೆಯಲ್ಲಿ ಸುರಿದ ತುಂತುರು ಮಳೆ ಹಾಗೂ ಮೋಡ ಕವಿದ ವಾತಾವರಣಕ್ಕೆ ಸಿಲುಕಿದ ದ್ರಾಕ್ಷಿ ಬೆಳೆ ಹಾಳಾಗಿದ್ದು ತಹಶೀಲ್ದಾರ್‌ ಸುರೇಶ ಚವಲರ ಭೇಟಿ ನೀಡಿ ಪರಿಶೀಲಿಸಿದರು.

Advertisement

ತಾಲೂಕಿನ ಬರುವ ವಿವಿಧ ಗ್ರಾಮಗಳ ರೈತರ ತೋಟಗಳಿಗೆ ಭೇಟಿ ನೀಡಿದ ಅವರು, ಹಾಳಾದ ದ್ರಾಕ್ಷಿ ಕುರಿತು ಸಮಗ್ರ ವರದಿ ಪಡೆದುಕೊಂಡಿದ್ದೇನೆ. ತ್ವರಿತವಾಗಿ ಜಿಲ್ಲಾಧಿಕಾರಿಗಳ ಗಮನಕ್ಕೆ ತರುವುದಾಗಿ ರೈತರಿಗೆ ತಿಳಿಸದರು.

ತುಂತುರು ಮಳೆ ಹಾಗೂ ಮೋಡ ಕವಿದ ವಾತಾವರಣಕ್ಕೆ ಸಿಲುಕಿ ದ್ರಾಕ್ಷಿ ಹೂವುಗಳು ಉದುರುತ್ತಿವೆ. ಕಟಾವಿಗೆ ಬಂದ ದ್ರಾಕ್ಷಿ ಮಾರಾಟ ಮಾಡಿದ್ದಾರೆ. ಆದರೆ ಈ ಮಳೆಯಿಂದ ಹಣ್ಣಾದ ದ್ರಾಕ್ಷಿ ಕೆಟ್ಟು ಹೋಗಿ ವಾಸನೆ ಬೀಡುತ್ತಿವೆ. ಅಲ್ಲದೇ ಉದರಿ ಬೀಳುತ್ತಿವೆ ಎಂದು ರೈತರು ತಹಶೀಲ್ದಾರ್‌ಗೆ ಮನವರಿಕೆ ಮಾಡಿಕೊಟ್ಟರು.

ಸಂಕಷ್ಟಕ್ಕೆ ಸಿಲುಕಿದ ದ್ರಾಕ್ಷಿ ಬೆಳೆಗಾರರಿಗೆ ಸರ್ಕಾರ ವಿಶೇಷ ಪ್ಯಾಕೇಜ್‌ ಹಾಗೂ ಪ್ರಸಕ್ತ ಸಾಲಿನ ವಿಮೆ ಬಿಡುಗಡೆಗೊಳಿಸಲು ರೈತರಾದ ಸತೀಶ ತೋಳನೂರ, ಶಿವಾನಂದ ಬಿರಾದಾರ, ರಾಚು ಪಟ್ಟಣಶೆಟ್ಟಿ, ಕಾಶೀನಾಥ ಕಾಮಗೊಂಡ, ವಿಶ್ವನಾಥ ಬಿರಾದಾರ, ಮಾದು ರಾಯಗೊಂಡ ಮನವಿ ಮಾಡಿಕೊಂಡರು. ಸುತ್ತಲಿನ ಗ್ರಾಮಗಳ ರೈತರು ಹಾಗೂ ಇಲಾಖೆ ಅಧಿಕಾರಿಗಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next