Advertisement

ಶಾಲಾಭಿವೃದಿಗೆ ಬಿಡುಗಡೆಯಾಗಲಿ ಅನುದಾನ

06:16 PM Jan 04, 2021 | Team Udayavani |

ದಾವಣಗೆರೆ: ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಲ್ಲಿ ಹರಿಹರ ವಿಧಾನಸಭಾ ಕ್ಷೇತ್ರದಶಾಸಕ ಎಸ್‌. ರಾಮಪ್ಪ ಮೂರು ಶಾಲೆಗಳನ್ನ ದತ್ತು ಪಡೆದಿದ್ದಾರೆ.

Advertisement

ಬನ್ನಿಕೋಡು ಗ್ರಾಮದ ಕರ್ನಾಟಕ ಪಬ್ಲಿಕ್‌ಶಾಲೆ, ಹಾಲಿವಾಣದಸರ್ಕಾರಿ ಹಿರಿಯಪ್ರಾಥಮಿಕ ಶಾಲೆ, ನಿಟ್ಟೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳ ದತ್ತು ತೆಗೆದುಕೊಂಡು ಅಭಿವೃದ್ಧಿಗೆ ಕಂಕಣಬದ್ಧರಾಗಿದ್ದಾರೆ.

ಬನ್ನಿಕೋಡು ಕೆಪಿಎಸ್‌ ಶಾಲೆ- 5 ಲಕ್ಷ ರೂ. :  ಎಲ್‌ಕೆಜಿಯಿಂದ ದ್ವಿತೀಯಪಿಯುಸಿವರೆಗೆ 762 ವಿದ್ಯಾರ್ಥಿಗಳ ಸಂಖ್ಯೆ ಹೊಂದಿರುವ ಬನ್ನಿಕೋಡುಗ್ರಾಮದ ಕರ್ನಾಟಕ ಪಬ್ಲಿಕ್‌ ಶಾಲೆಯಲ್ಲಿ 240 ಅಡಿ ಉದ್ದ, 120 ಅಗಲದ ಕಾಂಪೌಂಡ್‌, ಶಾಲಾ ಆಟದ ಮೈದಾನ ದುರಸ್ತಿ, 4 ಕೊಠಡಿ, ಹೈಟೈಕ್‌ ಶೌಚಾಲಯ, ಅಕ್ಷರ ದಾಸೋಹ ಕೊಠಡಿಗಾಗಿ 5 ಲಕ್ಷ ರೂ. ಅನುದಾನದ ಪ್ರಸ್ತಾವನೆ ಸಲ್ಲಿಸಲಾಗಿದೆ.

ಬನ್ನಿಕೋಡು ಗ್ರಾಮದ ಕರ್ನಾಟಕ ಪಬ್ಲಿಕ್‌ ಶಾಲೆಯಲ್ಲಿ 700ಕ್ಕೂ ಹೆಚ್ಚು ವಿದ್ಯಾರ್ಥಿಗಳುವ್ಯಾಸಂಗ ಮಾಡುತ್ತಿದ್ದಾರೆ. ಕಾಂಪೌಂಡ್‌ ಮೇಲ್ದರ್ಜೆಗೇರಿಸಬೇಕು. ಶೌಚಾಲಯ ವ್ಯವಸ್ಥೆ ಆಗಬೇಕು. ಹೈಟೆಕ್‌ ಶೌಚಾಲಯಕ್ಕೆ ಗಮನ ನೀಡಬೇಕು. ಕುಡಿಯುವ ನೀರಿನ ವ್ಯವಸ್ಥೆಗೆ ಇನ್ನೂ ಹೆಚ್ಚಿನ ಸೌಲಭ್ಯ ದೊರೆಯುವಂತಾಗಬೇಕು. ಎಲ್ಲಕ್ಕಿಂತಲೂ ಮುಖ್ಯವಾಗಿ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಕೊಠಡಿ,ಸ್ಮಾರ್ಟ್‌ಕ್ಲಾಸ್‌, ಶಾಲಾ ಕಾರ್ಯಕ್ರಮನಡೆಸುವುದಕ್ಕೆ ಅನುಕೂಲಕರವಾದಸಭಾಂಗಣದ ಜೊತೆಗೆ ಸುಣ್ಣ ಬಣ್ಣದ ಆಗಬೇಕು ಎನ್ನುತ್ತಾರೆ ಮುಖ್ಯ ಶಿಕ್ಷಕ ಎಂ. ಸಿದ್ದನಗೌಡ.

ಸರಕಾರಿ ಹಿರಿಯ ಪ್ರಾಥಮಿ ಶಾಲೆ ಹಾಲಿವಾಣ-25 ಲಕ್ಷ ರೂ.  :

Advertisement

ಒಂದರಿಂದ 7ನೇ ತರಗತಿಯವರೆಗೆ 320 ವಿದ್ಯಾರ್ಥಿಗಳು ಸಂಖ್ಯೆಗೆ ಅನುಗುಣವಾಗಿ ಇರುವ ಶಾಲೆಯಲ್ಲಿ 2 ಹೊಸ ಕೊಠಡಿ, 25 ಡೆಸ್ಕ್, 5 ಗ್ರೀನ್ ಬೋರ್ಡ್‌, ಶಾಲಾ ದುರಸ್ತಿ, ಸುಣ್ಣ ಬಣ್ಣಕ್ಕಾಗಿ 25 ಲಕ್ಷ ಅನುದಾನದ ಪ್ರಸ್ತಾವನೆ ಸಲ್ಲಿಸಲಾಗಿದೆ. ಅತ್ಯಂತ ಹಿಂದುಳಿದಿರುವ ಹಾಲಿವಾಣ ಗ್ರಾಮದಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಆತಿ ಮುಖ್ಯವಾಗಿ ಕೊಠಡಿಗಳ ಕೊರತೆ ಇದೆ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಕೊಠಡಿಗಳು ಬೇಕಾಗಿವೆ ಎಂದು ಮುಖ್ಯ ಶಿಕ್ಷಕ ಎಂ. ರುದ್ರಯ್ಯ ಹೇಳುತ್ತಾರೆ.

ಸರಕಾರಿ ಹಿರಿಯ ಪ್ರಾಥಮಿ ಶಾಲೆ ನಿಟ್ಟೂರು- 5 ಲಕ್ಷ ರೂ. :  ಒಂದರಿಂದ 7ನೇ ತರಗತಿಯವರೆಗೆ 120 ವಿದ್ಯಾರ್ಥಿಗಳ ಹೊಂದಿರುವ ನಿಟ್ಟೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 4 ಕೊಠಡಿ, 2 ಶೌಚಾಲಯಕ್ಕೆ 5 ಲಕ್ಷದ ಪ್ರಸ್ತಾವನೆ ಸಲ್ಲಿಸಲಾಗಿದೆ. ನಿಟ್ಟೂರು ಶಾಲೆಗೆ ಕೊಠಡಿಗಳ ಅಗತ್ಯತೆ ಇದೆ. ಗ್ರೀನ್ ಬೋರ್ಡ್‌,ಉತ್ತಮ ಶಾಲಾ ಆವರಣದ ಅಗತ್ಯತೆ ಇದೆ. ಕಂಪ್ಯೂಟರ್ ‌ಪ್ರಯೋಗಾಲಯ ಇತರೆ ಪಾಠೊಪಕರಣಗಳ ಅಗತ್ಯತೆ ಇದೆ. ಈವರೆಗೆ ಕಾಮಗಾರಿ ಪ್ರಾರಂಭವಾಗಿಲ್ಲ. ಇನ್ನೂ 10 ಲಕ್ಷರೂಪಾಯಿ ಅನುದಾನಕ್ಕೆ ಶಾಸಕರನ್ನು ಕೋರಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಯು. ಬಸವರಾಜ್‌ ಮಾಹಿತಿ ನೀಡಿದರು.

ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿಮೂರು ಶಾಲೆಗಳಸಮಗ್ರಅಭಿವೃದ್ಧಿಗಾಗಿ ದತ್ತುಪಡೆಯಲಾಗಿದೆ.ಆನುದಾನ ಬಂದಿಲ್ಲ. ಅನುದಾನ ಬಂದ ನಂತರಅಗತ್ಯ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುವುದು.  –ಎಸ್‌. ರಾಮಪ್ಪ, ಶಾಸಕರು, ಹರಿಹರ

 

-ರಾ. ರವಿಬಾಬು

Advertisement

Udayavani is now on Telegram. Click here to join our channel and stay updated with the latest news.

Next