ತಿ.ನರಸೀಪುರ: ಪಟ್ಟಣದ ತ್ರಿವೇಣಿ ನಗರ ಹಾಗೂ ವಿವೇಕಾನಂದ ನಗರ ಬಡಾವಣೆಗಳಲ್ಲಿರುವ ರಸ್ತೆಗಳ ಅಭಿವೃದ್ಧಿಗೆ ಮುಖ್ಯಮಂತ್ರಿಗಳ ನಿಧಿಯಿಂದ ಅನುದಾನ ಮಂಜೂರು ಮಾಡಲಾಗಿದೆ ಎಂದು ವರುಣ ಕಾಂಗ್ರೆಸ್ ಯುವ ಮುಖಂಡ ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ಪಟ್ಟಣದ ಹೆಳವರಹುಂಡಿಯಲ್ಲಿ ಸಿಎಂ ಜಂಟಿ ಕಾರ್ಯದರ್ಶಿ ಎಂ.ರಾಮಯ್ಯ ಅವರೊಂದಿಗೆ ಕಾರ್ಯಪಾಲಕ ಅಭಿಯಂತರ ಮರಿಸ್ವಾಮಿ ಅವರಿಂದ ಕಬಿನಿ ನೀರಾವರಿ ನಿಗಮದ ಅಭಿವೃದ್ಧಿ ಕಾಮಗಾರಿಗಳ ಮಾಹಿತಿ ಪಡೆದು ನಂತರ ಸ್ಥಳೀಯರ ಅಹವಾಲು ಸ್ವೀಕರಿಸಿ ಮಾತನಾಡಿ, ವರುಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಸೇರುವ ತ್ರಿವೇಣಿ ನಗರ ರಸ್ತೆಗಳ ಅಭಿವೃದ್ಧಿಗೆ 6.25 ಕೋಟಿ, ವಿವೇಕಾನಂದ ನಗರ ರಸ್ತೆಗಳ ಅಭಿವೃದ್ಧಿಗೆ 7.80 ಕೋಟಿ ರೂಗಳ ಅನುದಾನ ಸಿಎಂ ನಿಧಿಯಿಂದಲೇ ಮಂಜೂರು ಮಾಡಲಾಗಿದೆ ಎಂದರು.
ಭೈರಾಪುರ ಗ್ರಾಪಂ ಮಾಜಿ ಅಧ್ಯಕ್ಷ ಎ.ಜೆ.ವೆಂಕಟೇಶ್ ಮಾತನಾಡಿ, ಪುರಸಭೆಯ ನಿರ್ಲಕ್ಷ್ಯದ ಅಡ್ಡ ಪರಿಣಾಮ ಮುಂಬರುವ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಾಗುವುದರಿಂದ ಪುರಸಭೆಯ ನಿರ್ಲಕ್ಷ್ಯವನ್ನು ಸರಿಪಡಿಸಲು ಗಮನ ಹರಿಸಬೇಕು. ಸಾರ್ವಜನಿಕ ಆಸ್ಪತ್ರೆಯಲ್ಲಿನ ಅವ್ಯವಸ್ಥೆ ಬಗೆಹರಿಸಬೇಕು. ವರುಣ ಕ್ಷೇತ್ರದ ಪ್ರವಾಸದ ವೇಳೆ ಕೇಳಿ ಬರುವ ದೂರುಗಳಿಗೆ ಸ್ಪಂದಿಸಿ, ತುರ್ತು ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.
ಪುರಸಭಾ ಅಧ್ಯಕ್ಷೆ ಸುಧಾ ಗುರುಮಲ್ಲಪ್ಪ, ಕೆಎಂಎಫ್ ನಿರ್ದೇಶಕ ಕೆ.ಸಿ.ಬಲರಾಂ, ತಾಪಂ ಮಾಜಿ ಉಪಾಧ್ಯಕ್ಷ ಬಿ.ಮರಯ್ಯ, ಗ್ರಾಪಂ ಮಾಜಿ ಅಧ್ಯಕ್ಷ ಟಿ.ಎಂ.ನಂಜುಂಡಸ್ವಾಮಿ, ಬಿಎಸ್‌ಎನ್‌ಎಲ್ ಸಲಹಾ ಸಮಿತಿ ಸದಸ್ಯ ಎನ್.ಸೋಮು, ಖಾಸಗಿ ಬಸ್ ಏಜೆಂಟರ ಸಂಘದ ಅಧ್ಯಕ್ಷ ಪಿ.ಪುಟ್ಟರಾಜು, ಜಿಲ್ಲಾ ಕಾಂಗ್ರೆಸ್ ಮಾಧ್ಯಮ ಸಂಚಾಲಕ ಸಂತೃಪ್ತಿಕುಮಾರ್, ಪುರಸಭಾ ಸದಸ್ಯರಾದ ಟಿ.ಜಿ.ಪುಟ್ಟಸ್ವಾಮಿ, ನಾಗೇಂದ್ರ, ಮುಖ್ಯಾಧಿಕಾರಿ ಎಂ.ಸಿ.ನಾಗರತ್ನ, ಮೃಗಾಲಯ ಪ್ರಾಧಿಕಾರದ ನಿರ್ದೇಶಕಿ ಲತಾ ಜಗದೀಶ್,
ಮರಳೂರು ಗ್ರಾಪಂ ಅಧ್ಯಕ್ಷ ಮಹೇಶ್‌ಕುಮಾರ್, ಗ್ರಾಪಂ ಸದಸ್ಯ ಮಂಜು, ಮಾಜಿ ಸದಸ್ಯರಾದ ಬಿ.ಎಂ.ದೀವಾಕರ, ಮೆಡಿಕಲ್ ಪ್ರಕಾಶ್, ಮಾಜಿ ಅಧ್ಯಕ್ಷ ಮನ್ನೇಹುಂಡಿ ಮಹೇಶ, ಎ.ಜೆ.ವೆಂಕಟೇಶ್, ಫೈನಾನ್ಸ್ ಕಾಂತರಾಜು, ಮುಖಂಡರಾದ ಮುದ್ದಬೀರನಹುಂಡಿ ಗುರುಸ್ವಾಮಿ, ಚಿಕ್ಕನಂಜಯ್ಯ, ಡಣಾಕಯನಪುರ ಸೋಮಣ್ಣನಾಯಕ, ಏಳುಮಲೆ ಮಂಜು, ಎಂ.ವೆಂಕಟೇಶ್, ಮಾದೇಗೌಡ, ಮರಿಸ್ವಾಮಿ, ಮಹದೇವು, ವಿರೂಪಾಕ್ಷ, ಹಾಲಿನ ಸತ್ಯ, ಮಾಸ್ಟರ್ ಸೋಮಣ್ಣ, ವಿಓ ಹುಂಡಿ ಬಸವರಾಜು, ಲಿಂಗರಾಜು ಹಾಗೂ ಇನ್ನಿತರರು ಹಾಜರಿದ್ದರು.