ಮಹಾನಗರ: ‘ಕುಲಾಲ್ ವರ್ಲ್ಡ್’ ಪುರುಷ ಮತ್ತು ಮಹಿಳಾ ವಾಟ್ಸಪ್ ಗ್ರೂಪಿನ ಸದಸ್ಯರು ವಿವಿಧ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ನಾಲ್ಕು ಕುಟುಂಬಗಳಿಗೆ ಒಟ್ಟು 1,39,500 ರೂ. ನೆರವು ಹಸ್ತಾಂತರಿಸಿದರು.
ಕುಟುಂಬಗಳಿಗೆ ಸಹಾಯ
ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ಬಂಟ್ವಾಳ ತಾಲೂಕು ನೆಟ್ಲ ಮುಟ್ನೂರು ನೇರಳಕಟ್ಟೆಯ ನಾರಾಯಣ ಕುಲಾಲ್ -ಸಾವಿತ್ರಿ ದಂಪತಿಯ ಪುತ್ರ ಗಗನ್, ವಾಹನ ಅಪಘಾತದಿಂದ ಎಡಗಾಲಿನ ಪಾದ ಮತ್ತು ಬಲಗಾಲಿನ ಶಕ್ತಿ ಕಳೆದು ಕೊಂಡ ಕುಂಪಲ ನಿವಾಸಿ ಉಮೇಶ್ ಮತ್ತು ಶಾರದಾ ಅವರ ಪುತ್ರ ರೋಹಿತಾಶ್ವ, ಎಲುಬು ಕ್ಯಾನ್ಸರ್‌ನಿಂದ ಬಳಲುತ್ತಿರುವ ಮಂಜೇಶ್ವರ ಕುಂಜತ್ತೂರು ತೂಮಿನಾಡಿನ ವಿಶ್ವನಾಥ ಮೂಲ್ಯ ಅವರ ಪತ್ನಿ ಗೀತಾ ಅವರ ಚಿಕಿತ್ಸೆಗಾಗಿ ಈ ಸಹಾಯ ವಿತರಿಸಲಾಗಿದೆ. ಮೂರೂ ಕುಟುಂಬಕ್ಕೆ ತಲಾ 46,500 ರೂ.ಗಳನ್ನು ನೀಡಲಾಗಿದೆ. ಗೀತಾ ಅವರ ಅನುಪಸ್ಥಿತಿ ಹಿನ್ನೆಲೆಯಲ್ಲಿ ಸಂಬಂಧಿ ವೈಶಾಲಿ ಕುಲಾಲ್ ಚೆಕ್ ಸ್ವೀಕರಿಸಿದರು.
ಅಲ್ಲದೆ ಪಾರ್ಶ್ವವಾಯು ಪೀಡಿತ, ವಾಮಂಜೂರು ಪರಾರಿ ನಿವಾಸಿ ಬಾಲಕೃಷ್ಣ ಮೂಲ್ಯ ಅವರಿಗೆ 10,000 ರೂ. ತುರ್ತು ನೆರವನ್ನು ಕದ್ರಿ ಮಂಜುನಾಥೇಶ್ವರ ದೇವಸ್ಥಾನದಲ್ಲಿ ನೀಡಲಾಯಿತು.
ತುಳುನಾಡ ಪೊರ್ಲು ಸೇವಾ ಟ್ರಸ್ಟ್‌ನ ಪ್ರಮುಖರಾದ ನವೀನ್ ಪಿ. ಮಿಜಾರ್, ನೀತೂ ಅಜಿಲಮೊಗರು, ಚಂದು ಕುಪ್ಪೆಪದವು ಅತಿಥಿಗಳಾಗಿದ್ದರು. ಕುಲಾಲ್ ವರ್ಲ್ಡ್ ವಾಟ್ಸಪ್ ಗ್ರೂಪಿನ ನಿರ್ವಾಹ ಕರಾದ ರಂಜಿತ್ ಕುಮಾರ್ ಮೂಡಬಿದಿರೆ, ಹೇಮಂತ್ ಕುಮಾರ್ ಕಿನ್ನಿಗೋಳಿ, ನರೇಶ್ ಕೆ.ಟಿ. ಬೆಳ್ತಂಗಡಿ, ಸದಸ್ಯರಾದ ರಮೇಶ್ ಕುಮಾರ್ ವಗ್ಗ, ದಯಾನಂದ್ ಬಂಗೇರ ಮೂಡಬಿದಿರೆ, ಪ್ರಶಾಂತ್ ಕುಲಾಲ್ ಶಕ್ತಿನಗರ, ಗುರು ಪ್ರಸಾದ್ ಕುಲಾಲ್ ಬೆಳ್ತಂಗಡಿ, ಧನಂಜಯ ಕುಲಾಲ್ ಬೆಳ್ತಂಗಡಿ, ವೈಶಾಲಿ ಕುಲಾಲ್ ವಿಟ್ಲ, ಪೂಜಾ ವಿ. ಕುಲಾಲ್ ಕೃಷ್ಣಾಪುರ, ಸುಚಿತಾ ಗುರುಪ್ರಸಾದ್ ಕುಲಾಲ್ ಬಜಪೆ ಉಪಸ್ಥಿತರಿದ್ದರು.