Advertisement

ಮಾಗಡಿ ನೀರಾವರಿ ಯೋಜನೆಗೆ ಅನುದಾನ ಬಿಡುಗಡೆ

07:29 AM Feb 25, 2019 | |

ಕುದೂರು: ನೀರಾವರಿ ಯೋಜನೆಗೆ ಮಾಗಡಿ ತಾಲೂಕಿಗೆ 450 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಸಂಸದ ಡಿ.ಕೆ.ಸುರೇಶ್‌ ಹೇಳಿದರು. ಮಾಗಡಿ ತಾಲೂಕಿನ ಚಿಕ್ಕತೊರೆಪಾಳ್ಯದಲ್ಲಿ ನೂತನವಾಗಿ ನಿರ್ಮಿಸಿರುವ ಚಾಮುಂಡೇಶ್ವರಿ ದೇವಾಲಯ, ಮುನೇಶ್ವರ ದೇವಾಲಯದ ಉದ್ಘಾಟನೆ ಹಾಗೂ ಸಂತ ಸೇವಾಲಾಲ್‌ ಜಯಂತಿ ಸಮಾರಂಭವನ್ನು ಉದ್ಘಾಟಿಸಿದ ಅವರು ಮಾತನಾಡಿದರು.

Advertisement

ತಾಲೂಕಿನ ತಿಪ್ಪಗೊಂಡನಹಳ್ಳಿ ಜಲಾಶಯದ ನೀರಿನಿಂದ ಮಾಗಡಿ ತಾಲೂಕಿನಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗುವುದರ ಜೊತೆಗೆ ಕೊಳವೆಬಾವಿ, ಕೆರೆ-ಕಟ್ಟೆಗಳಲ್ಲಿ ನೀರಿನ ಸಂಗ್ರಹ ಹೆಚ್ಚಾಗುತ್ತದೆ. ತಿಪ್ಪಗೊಂಡನಹಳ್ಳಿ ಜಲಾಶಯ ತುಂಬಿದರೆ ಅದರ ನೀರು ಮಂಚನಬೆಲೆ ಜಲಾಶಯಕ್ಕೆ ಹರಿದು ಬರುತ್ತದೆ.

ಆದರೆ, ತಿಪ್ಪಗೊಂಡನಹಳ್ಳಿ ಜಲಾಶಯದ ನೀರು ಕುಲುಷಿತವಾಗಿದ್ದು, ಬಳಸಲು ಯೋಗ್ಯವಿಲ್ಲದಂತಾಗಿದೆ. ಇದರಿಂದ ತಿಪ್ಪಗೊಂಡನಹಳ್ಳಿ ಜಲಾಶಯ ಸ್ವತ್ಛಗೊಳಿಸಲು ಮಂಚನಬೆಲೆ ಹಾಗೂ ವೈ.ಜಿ.ಗುಡ್ಡ ಜಲಾಶಯ ಅಭಿವೃದ್ಧಿಗೆ 540 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಇದರಿಂದ ತಾಲೂಕಿಗೆ ಅನುಕೂಲವಾಗಲಿದೆ ಎಂದರು.

ದೇವಾಲಯದಿಂದ ಮನಸ್ಸಿಗೆ ಶಾಂತಿ: ಇಂದಿನ ದಿನಗಳಲ್ಲಿ ಮನುಷ್ಯನಿಗೆ ನೆಮ್ಮದಿ ಗಗನ ಕುಸುಮವಾಗಿದೆ. ಮನಸ್ಸಿಗೆ ಶಾಂತಿ ದೊರಕುವ ಏಕೈಕ ಸ್ಥಳ ಎಂದರೆ ಅದು ದೇವಾಲಯಗಳು ಮಾತ್ರ. ದೇವಾಲಯಕ್ಕೆ ತೆರಳಿ ದೇವರ ಧ್ಯಾನ ಮಾಡುವುದರಿಂದ ಮನಸ್ಸಿಗೆ ಸಂತೋಷ ಉಂಟಾಗುವುದರ ಜೊತೆಗೆ ನೆಮ್ಮದಿ ದೊರಕುತ್ತದೆ ಎಂದು ಹೇಳಿದರು.

ನಾನೇ ಲೋಕಸಭಾ ಅಭ್ಯರ್ಥಿ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಖಚಿತವಾಗಿದೆ. ಮೈತ್ರಿ ಬಗ್ಗೆ ಇನ್ನೂ ಮಾತುಕತೆ ನಡೆದಿಲ್ಲ. ರಾಜ್ಯದಲ್ಲಿ ಮೈತ್ರಿ ಸರ್ಕಾರದಿಂದ ನಾಯಕರು ಒಟ್ಟಾಗಿ ಚುನಾವಣೆ ಎದುರಿಸೋಣ ಎಂದು ಹೇಳುತ್ತಿದ್ದು, ಸೀಟು ಹಂಚಿಕೆ ನಂತರ ಯಾವ ಅಭ್ಯರ್ಥಿ ಘೋಷಣೆಯಾಗುತ್ತಾರೂ ಅವರ ಪರವಾಗಿ ಚುನಾವಣೆಯಲ್ಲಿ ಕೆಲಸ ಮಾಡುತ್ತೇನೆ. ರಾಜ್ಯದಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಕಾಂಗ್ರೆಸ್‌ ಚುನಾವಣೆಗೆ ಸಿದ್ಧವಾಗಿದೆ ಎಂದರು.

Advertisement

ಸೇವಾಲಾಲ್‌ ಆದರ್ಶ ಅಳವಡಿಸಿಕೊಳ್ಳಿ: ಚಿತ್ರದುರ್ಗದ ಸಂತ ಸೇವಾಲಾಲ್‌ ಗುರುಪೀಠ ಮಠದ ಪೀಠಾಧ್ಯಕ್ಷ ಶ್ರೀಸರ್ದಾರ್‌ ಸೇವಾಲಾಲ್‌ ಮಹಾಸ್ವಾಮೀಜಿ ಮಾತನಾಡಿ, ಬುದ್ಧ, ಬಸವ, ಕಬೀರ, ಗುರುನಾನಕ್‌ ಮುಂತಾದ ಮಾನವತವಾದಿಗಳ ನಡುವೆ ದನಗಳನ್ನು ಮೇಯಿಸುತ್ತಿದ್ದ ಸೇವಾಲಾಲ್‌ ಸತ್ಯ, ಅಹಿಂಸಾ ಮಾರ್ಗಗಳನ್ನು ಪ್ರಕಾಶಗೊಳಿಸಿದರು. ಸೇವಾಲಾಲ್‌ ಅನುಭವ ಜ್ಞಾನದ ನುಡಿಗಳು ಇಂದಿಗೂ ಮಾರ್ಗದರ್ಶನವಾಗಿದೆ. ಸೇವಾಲಾಲ್‌ ಆವರ ತತ್ವ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಸೇವಾಲಾಲ್‌ ಭವನ ನಿರ್ಮಾಣಕ್ಕೆ ಬದ್ಧ: ಶಾಸಕ ಎ.ಮಂಜು ಮಾತನಾಡಿ, ತಾಲೂಕಿನಲ್ಲಿ ಮೂಲ ಸೌಲಭ್ಯ ಅಭಿವೃದ್ಧಿಗಾಗಿ ಸರ್ಕಾರ 1 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ತಾಂಡಗಳಲ್ಲಿ ಸೇವಾಲಾಲ್‌ ಭವನ ಕಟ್ಟಲು ಸರ್ಕಾರ ಬದ್ಧವಾಗಿದೆ. ಸಮಾಜದ ಒಳತಿಗಾಗಿ ಶ್ರಮಿಸಿದ ಸೇವಾಲಾಲ್‌ರಂತಹ ಮಹನೀಯರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು.

ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಶ್ರೀಕುಮಾರ ಚಂದ್ರುಶೇಖರ ಸ್ವಾಮೀಜಿ ದಿವ್ಯ ಸಾನ್ನಿಧ್ಯವಹಿಸಿದ್ದರು. ಮಾಜಿ ಶಾಸಕ ಎಚ್‌.ಸಿ.ಬಾಲಕೃಷ್ಣ, ತಾಲೂಕು ಪಂಚಾಯ್ತಿ ಅಧ್ಯಕ್ಷ ಶಿವರಾಜು, ಸದಸ್ಯ ಸುರೇಶ್‌, ರಾಮಕೃಷ್ಣಯ್ಯ, ಬಿಬಿಎಂಪಿ ಮಾಜಿ ಸದಸ್ಯ ಎ.ಎಚ್‌.ಬಸವರಾಜು, ನಾರಾಯಣಪ್ಪ, ಹನುಮಂತರಾಯಪ್ಪ, ಪುರಸಭೆ ಮಾಜಿ ಅಧ್ಯಕ್ಷ ಪುರುಷೋತ್ತಮ್‌, ಮಾರೇಗೌಡ, ಗೋವಿಂದ ನಾಯಕ್‌, ಬಾಳೆಗೌಡ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next