Advertisement
2021-22ರಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಅಮೃತ ರೈತ ಉತ್ಪಾದಕ ಯೋಜನೆ ಜಾರಿಗೆ ರಾಜ್ಯ ಸರಕಾರ ಆದೇಶಿಸಿತ್ತು. ಮೂರು ವರ್ಷಗಳಲ್ಲಿ ರಾಜ್ಯವ್ಯಾಪಿ 750 ಸಂಸ್ಥೆಗಳನ್ನು ರಚಿಸುವುದು, ಯೋಜನೆ ಅಡಿಯಲ್ಲಿ ನೋಂದಣಿಯಾದ ರೈತರಿಂದ ಷೇರುಗಳನ್ನು ಸಂಗ್ರಹಿಸಿ, ಸಂಘದ ಸದಸ್ಯರಿಗೆ ನೇರ ಮಾರುಕಟ್ಟೆ ಬೆಂಬಲ ನೀಡುವುದರ ಮೂಲಕ ಮಧ್ಯವರ್ತಿಗಳ ಹಾವಳಿ ತಪ್ಪಿಸುವುದು, ರೈತರ ಉತ್ಪನ್ನ ಹಾಗೂ ಮೀನುಗಾರರ ಸಿಗಡಿ, ಮೀನು, ಪಚ್ಚಿಲೆ ಮೊದಲಾದವುಗಳಿಗೆ ಉತ್ತಮ ಮಾರುಕಟ್ಟೆ ಒದಗಿಸುವುದು, ಮೀನಿನ ಮೌಲ್ಯವ ರ್ಧಿತ ಉತ್ಪನ್ನಗಳನ್ನು ಉತ್ಪಾದಿಸಿ ಸೂಕ್ತ ಬೆಲೆ ದೊರಕಿಸಿಕೊಡುವುದು, ಮಾಹಿತಿ, ಮಾರ್ಗದರ್ಶನಕ್ಕಾಗಿ ತರಬೇತಿ, ಪ್ರಾತ್ಯಕ್ಷಿಕೆಗಳನ್ನು ನಡೆಸುವುದು ಮೊದ ಲಾದ ಕಾರ್ಯಕ್ರಮಗಳನ್ನು ಯೋಜನೆ ಯಡಿ ಅಳವಡಿಸಿಕೊಳ್ಳಲಾಗಿತ್ತು.
ಪ್ರಸ್ತುತ ಮೂರು ವರ್ಷದಿಂದ ಕಂಪೆನಿಗಳು ಷೇರುದಾರರಿಗೆ ಅನೇಕ ಸೌಲಭ್ಯಗಳನ್ನು ನೀಡಿದೆ ಹಾಗೂ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಸರಕಾರದ ನಿಯಮದಂತೆ ಇವುಗಳಿಗೆ 30 ಲಕ್ಷ ಅನುದಾನ ಸಿಗಬೇಕಿತ್ತು. ಆದರೆ ಇಲ್ಲಿಯ ತನಕ ಕೈ ಸೇರಿರುವುದು ಕೇವಲ 9,71,860 ರೂ. ಮಾತ್ರ. ಹೀಗಾಗಿ 20,28,140 ರೂ ಅನುದಾನ ಬಾಕಿ ಇದೆ.
Related Articles
Advertisement
“ಮೀನುಗಾರಿಕೆಯ ರೈತ ಉತ್ಪಾದಕ ಸಂಸ್ಥೆಗಳಿಗೆ ಜಲಾನಯನ ಇಲಾಖೆ ಮೂಲಕ ಅನುದಾನ ಬಿಡುಗಡೆಗೊಂಡು ನಮ್ಮ ಇಲಾಖೆಯಿಂದ ಜಮೆಯಾಗುತ್ತದೆ. ಸರಕಾರದಿಂದ ಅನುದಾನ ಬಿಡುಗಡೆಯಾಗಲು ಬಾಕಿ ಇದ್ದು, ಸಮಸ್ಯೆ ಬಗ್ಗೆ ಈಗಾಗಲೇ ಹಲವು ಸಂಸ್ಥೆಗಳು ಮನವಿ ಮಾಡಿದೆ.” – ದಿನೇಶ್ ಕುಮಾರ್, ಮೀನುಗಾರಿಕೆ ಇಲಾಖೆ ನಿರ್ದೇಶಕರುಕೇಂದ್ರ ಸಂಯೋಜಿತ ಸಂಸ್ಥೆಗಳಿಗೆ ಸಮಸ್ಯೆ ಇಲ್ಲ
ರಾಜ್ಯ ಹಾಗೂ ಕೇಂದ್ರ ಸರಕಾರ ಗಳಲ್ಲಿ ಇಂಥ ಯೋಜನೆಗಳಿವೆ. ಕೇಂದ್ರ ಸರಕಾರ ಸಂಯೋಜಿತ ಸಂಸ್ಥೆಗಳಿಗೆ ಕಾಲಕಾಲಕ್ಕೆ ಅನುದಾನ ತಲುಪುತ್ತಿದೆ. ರಾಜ್ಯದಲ್ಲಿ ಮಾತ್ರ ಸಮಸ್ಯೆ ಇದೆ. –ರಾಜೇಶ್ ಗಾಣಿಗ ಅಚ್ಲಾಡಿ