Advertisement
ಶುಕ್ರವಾರ ಕುಳಾಯಿ ಬಳಿಯ ಬಸ್ ನಿಲ್ದಾಣಕ್ಕೆ ಹಾಕಿದ ಗ್ರಾನೈಟ್ ಕಲ್ಲುಗಳು ಮುರಿದು ಬಿದ್ದಿವೆ. ಸರಿಯಾಗಿ ಒಂದೆರಡು ಪ್ರಯಾಣಿಕರು ಕುಳಿತುಕೊಳ್ಳಲು ಸಾಧ್ಯವಿಲ್ಲದ ಬೆಂಚ್ ಅಳವಡಿಸಲಾಗಿದೆ. ಇನ್ನು ಮಳೆ ಗಾಳಿಗೆ ಬಸ್ ನಿಲ್ದಾಣದ ಛಾವಣಿ ರಕ್ಷಣೆ ನೀಡುವುದು ಅನುಮಾನ.ಹೈಟೆಕ್ ಸಿಟಿ ಮಾದರಿ ಬಸ್ ಬೇ ಬಳಿ ಬಸ್ ನಿಲ್ದಾಣವನ್ನು ತಗಡು ಶೀಟು ಬಳಸಿ ನಿರ್ಮಿಸಲಾಗಿದೆ. ಕರಾವಳಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ಬೀಳುವುದರಿಂದ ಗಟ್ಟಿ ಮುಟ್ಟಾದ ನಿಲ್ದಾಣಗಳ ಅಗತ್ಯವಿದೆ. ಹೆಚ್ಚಿನ ಒತ್ತಡವುಳ್ಳ ಹೆದ್ದಾರಿ ಇದಾಗಿರುವುದರಿಂದ ಖಾಸಗಿ ಬಸ್ ಸಂಚಾರ ಪ್ರಯಾಣಿಕರ ಸಂಖ್ಯೆಯೂ ಹೆಚ್ಚಿದ್ದು, ಇದೀಗ ನಿರ್ಮಿಸಿದ ಬಸ್ ನಿಲ್ದಾಣದಲ್ಲಿ ಹತ್ತು ಪ್ರಯಾಣಿಕರು ನಿಲ್ಲುವುದೇ ಅಸಾಧ್ಯ ಎನ್ನುವಂತಿದೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಇಲ್ಲಿ ಬಸ್ ನಿಲ್ದಾಣದ ಆವಶ್ಯಕತೆಯಿದ್ದು, ಮಳೆ ಗಾಳಿ ಬಿಸಿಲಿಗೆ ರಕ್ಷಣೆ ನೀಡುವಂತಿದ್ದರೆ ಉತ್ತಮ.
ಕುಳಾಯಿ ಸೇರಿದಂತೆ ಹೆದ್ದಾರಿ 66ರಲ್ಲಿ ಸಂಪೂರ್ಣ ಸರ್ವಿಸ್ ರಸ್ತೆ ನಿರ್ಮಾಣಕ್ಕೆ ಹೆದ್ದಾರಿ ಇಲಾಖೆ ತಿಲಾಂಜಲಿ ನೀಡಲಿದೆಯೆ ಎಂಬ ಅನುಮಾನ ಮೂಡುತ್ತಿದ್ದು, ಹೆದ್ದಾರಿ ಪ್ರಮುಖ ರಸ್ತೆ ಬದಿ ಈ ಹಿಂದಿನಂತೆಯೇ ಬಸ್ ತಂಗುದಾಣವನ್ನು ನಿರ್ಮಿಸಲಾಗುತ್ತಿದೆ. ಹೀಗಾಗಿ ಬಸ್ ಗಳು ರಸ್ತೆ ಬದಿಯೇ ನಿಲ್ಲುವ ಮೂಲಕ ಸ್ವಲ್ಪ ಎಡವಟ್ಟಾದರೂ ಅಪಘಾತವಾಗುವ ಸಾಧ್ಯತೆಯಿದೆ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಬಸ್ ಬೇ ಒಂದೆಡೆ, ನಿಲ್ದಾಣ ಇನ್ನೊಂದೆಡೆ
ಚಿತ್ರಾಪುರ ಬಳಿ ಬಸ್ ಬೇ ಒಂದಡೆಯಾದರೆ ಬಸ್ ನಿಲ್ದಾಣ ಇನ್ನೊಂದೆಡೆಯಾಗಿದೆ. ಸುರತ್ಕಲ್ ವಿದ್ಯಾದಾಯಿನಿ ಶಾಲೆ ಬಳಿಯ ಬಸ್ ನಿಲ್ದಾಣವನ್ನು ಮತ್ತೂಂದೆಡೆ ಒತ್ತಡ ಪೂರ್ವಕವಾಗಿ ಸ್ಥಳಾಂತರಿಸಲಾಗಿದೆ. ಆದರೆ ಲಕ್ಷಾಂತರ ರೂ .ಖರ್ಚು ಮಾಡಿ ಇಲ್ಲಿ ಬಸ್ ಬೇ ನಿರ್ಮಾಣ, ಡಾಮರು ಕಾಮಗಾರಿ ಮಾಡಲಾಗಿದೆ.