ಹೈದರಾಬಾದ್/ಜೈಪುರ: ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರ ಬಾಬು ನಾಯ್ಡುಗಿಂತ ಅವರ ಮೊಮ್ಮಗ 3 ವರ್ಷದ ದೇವಾಂಶ್ ಆರು ಪಟ್ಟು ಶ್ರೀಮಂತ. ನಾಯ್ಡು ಹೊಂದಿರುವ ಆಸ್ತಿಯ ಮೌಲ್ಯ 2.53 ಕೋಟಿ ರೂ.ಗಳಿಂದ 3 ಕೋಟಿ ರೂ.ಗಳಿಗೆ ಹೆಚ್ಚಾಗಿದೆ. ದೇವಾಂಶ್ ಆಸ್ತಿ 18.71 ಕೋಟಿ ರೂ.ಗಳಿಗೆ ವೃದ್ಧಿ ಯಾಗಿದೆ. ಪಾರದರ್ಶಕತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ 8 ವರ್ಷಗಳಿಂದ ನಾಯ್ಡು ತಮ್ಮ ಹಾಗೂ ಕುಟುಂಬದ ಆಸ್ತಿ ವಿವರ ಘೋಷಣೆ ಮಾಡಿಕೊಳ್ಳುತ್ತಿದ್ದಾರೆ. ನಾಯ್ಡು ಮತ್ತು ಅವರ ಕುಟುಂಬದ ಆಸ್ತಿ ಮೌಲ್ಯ 69.28 ಕೋಟಿ ರೂ.ಗಳಿಂದ 81.83 ಕೋಟಿ ರೂ.ಗೆ ಅಂದರೆ ಒಂದು ವರ್ಷದ ಅವಧಿಯಲ್ಲಿ 12.55 ಕೋಟಿ ರೂ. ಏರಿಕೆಯಾಗಿದೆ ಎಂದು “ಎನ್‌ಡಿಟಿವಿ’ ವರದಿ ಮಾಡಿದೆ. ಇತ್ತೀಚೆಗೆ ಹೊರಬಿದ್ದ ಸಮೀಕ್ಷೆ ಯೊಂದರ ಪ್ರಕಾರ, 177 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿರುವ ಮೂಲಕ ದೇಶದ ಅತ್ಯಂತ ಶ್ರೀಮಂತ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ನಾಯ್ಡು ಪಾತ್ರರಾಗಿದ್ದಾರೆ. ಅಫಿದವಿತ್‌ನಲ್ಲಿ ಘೋಷಣೆ ಮಾಡಲಾಗಿ ರುವ ಆಸ್ತಿಯ ವಿವರ ಪ್ರಕಾರ ಚಂದ್ರಬಾಬು ನಾಯ್ಡು ಆಸ್ತಿ ಮೌಲ್ಯ ಹಾಲಿ 3 ಕೋಟಿ ರೂ. ಅವರ ಪತ್ನಿಯ ಆಸ್ತಿ 25 ಕೋಟಿ ರೂ.ಗಳಿಂದ 31 ಕೋಟಿ.ರೂ. (6 ಕೋಟಿ ರೂ. ಹೆಚ್ಚಳ)ವಾಗಿದೆ. ಪುತ್ರ- ಆಂಧ್ರ ಸಚಿವ ನರಾ ಲೋಕೇಶ್ ಕಳೆದ ವರ್ಷ 15.21 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದರು. ಈಗ ಅದು 21.40 ಕೋಟಿ ರೂ. ಮೌಲ್ಯದ್ದಾಗಿದೆ. ಲೋಕೇಶ್ ಪುತ್ರ ದೇವಾಂಶು ಹೊಂದಿರುವ ಆಸ್ತಿ 11.54 ಕೋಟಿ ರೂ. (ಕಳೆದ ವರ್ಷ)ಗಳಿಂದ 18.71 ಕೋಟಿ ರೂ.ಗೆ ವೃದ್ಧಿ ಸಿದೆ (7.17 ಕೋಟಿ ರೂ.). 11 ಸಾವಿರ ಹೆಚ್ಚುವರಿ ¬ಬೂತ್: 28ರಂದು ನಡೆಯಲಿರುವ ಮಧ್ಯಪ್ರದೇಶ ಚುನಾವಣೆಗೆ ಚುನಾವಣಾ ಆಯೋಗ 11 ಸಾವಿರ ಪೋಲಿಂಗ್ ಬೂತ್‌ಗಳನ್ನು ರಚಿಸಿದೆ. ಸದ್ಯ ಚುನಾವಣೆ ನಡೆಯುತ್ತಿರುವ ಐದು ರಾಜ್ಯ ಗಳಿಗೆ ಹೋಲಿಕೆ ಮಾಡಿದರೆ ಇದು ಅತ್ಯಂತ ಹೆಚ್ಚಿನ ಸಂಖ್ಯೆಯದ್ದಾಗಿದೆ. 11, 421 ಹೊಸ ಪೋಲಿಂಗ್ ಬೂತ್ ಸ್ಥಾಪಿಸಲಾಗಿದೆ. ಒಟ್ಟು 65 ಸಾವಿರ ಬೂತ್‌ಗಳಿವೆ ಎಂದು ಆಯೋಗ ತಿಳಿಸಿದೆ. ಹೀಗಾಗಿ ಹಾಲಿ ಸಾಲಿನಲ್ಲಿ ಯಾವನೇ ಒಬ್ಬ ಮತದಾರನಿಗೆ ಹಕ್ಕು ಚಲಾವಣೆಗಾಗಿ 2 ಕಿಮೀ ದೂರಕ್ಕಿಂತ ಹೆಚ್ಚು ಪ್ರಯಾಣಿಸುವ ಅಗತ್ಯವಿಲ್ಲ ಎಂದಿದೆ. ನ.27, ಡಿ.3ಕ್ಕೆ ಪ್ರಚಾರ: ಪ್ರಧಾನಿ ಮೋದಿ ತೆಲಂ ಗಾಣ ದಲ್ಲಿ ನ.27 ಮತ್ತು ಡಿ.3ರಂದು ಪ್ರಚಾರ ನಡೆಸ ಲಿದ್ದಾರೆ. ಸ್ಥಳದ ಬಗ್ಗೆ ಶೀಘ್ರ ನಿರ್ಧರಿಸಲಾಗುತ್ತದೆ ಎಂದು ಬಿಜೆಪಿ ತಿಳಿಸಿದೆ. ಬಿಜೆಪಿ ಅಧ್ಯಕ್ಷ ಅಮಿತ್ ಶಾ ನ.25, 27, 28ರಂದು ಪ್ರಚಾರ ನಡೆಸಲಿದ್ದಾರೆ. ಶುಕ್ರವಾರ ತೆಲಂಗಾಣದಲ್ಲಿ ಸೋನಿಯಾ ರ್ಯಾಲಿ ನಡೆಸಲಿದ್ದು, ಪ್ರಣಾಳಿಕೆ ಬಿಡುಗಡೆ ಮಾಡಲಿದ್ದಾರೆ.