Advertisement
ವಯಸ್ಸಾದವರಿಗೆ ಕಲಿಯಲು ಆಸಕ್ತಿ ಎಲ್ಲಿರುತ್ತೆ ಅಂತ ಕೇಳಬೇಡಿ. ಈ ಶಾಲೆಯಲ್ಲಿ 60-90ರ ವಯೋಮಾನದ 40 ಅಜ್ಜಿಯರು ಕಲಿಯುತ್ತಿದ್ದಾರೆ. ಗುಲಾಬಿ ಬಣ್ಣದ ಸೀರೆ ತೊಟ್ಟು, ಸ್ಲೇಟು-ಬಳಪ-ಪುಸ್ತಕ ಇರುವ ಬ್ಯಾಗ್ ಹಿಡಿದು, ದಿನವೂ ತಪ್ಪದೆ ಶಾಲೆಗೆ ಬರುವ ಇವರ ಉತ್ಸಾಹ, ಮಕ್ಕಳನ್ನೇ ನಾಚಿಸುತ್ತದೆ. ಪ್ರತಿದಿನ ಮಧ್ಯಾಹ್ನ ಎರಡು ಗಂಟೆಗಳ ಕಾಲ ನಡೆಯುವ ಈ ತರಗತಿಯಲ್ಲಿ ಓದು, ಬರಹ, ಸರಳ ಲೆಕ್ಕಾಚಾರಗಳ ಜೊತೆಗೆ ಚಿತ್ರಕಲೆ, ಕ್ರಾಫ್ಟ್, ಗಾರ್ಡನಿಂಗ್ ಕೂಡಾ ಹೇಳಿಕೊಡಲಾಗುತ್ತದೆ. ಇತರೆ ಶಾಲೆಗಳಂತೆ, ಇಲ್ಲಿಯೂ ತರಗತಿ ಶುರುವಾಗುವ ಮೊದಲು ಪ್ರಾರ್ಥನೆ ಗೀತೆ ನಡೆಯುತ್ತದೆ. ವಿದ್ಯಾರ್ಥಿಗಳ ಕಲಿಕೆಯ ಮೌಲ್ಯಮಾಪನಕ್ಕಾಗಿ ತಿಂಗಳಿಗೊಮ್ಮೆ ಕಿರು ಪರೀಕ್ಷೆ, ವಾರ್ಷಿಕ ಪರೀಕ್ಷೆ ಕೂಡಾ ನಡೆಸಲಾಗುತ್ತದೆ. ಮನೆಯ, ಹೊಲದ ಕೆಲಸ ಮುಗಿಸಿ ವೃದ್ಧೆಯರು ಶಾಲೆಗೆ ಬರುತ್ತಾರೆ.
Advertisement
ಅಜ್ಜಿಯರ ಪಾಠ ಶಾಲೆ
09:37 AM Jan 23, 2020 | mahesh |