Advertisement

ಇಡ್ಲಿ ಬೆಲೆ ಏರಿಕೆ ಮಾಡಲ್ಲ ಎಂದ ಅಜ್ಜಿ!

12:06 AM May 10, 2020 | Sriram |

ಕೋವಿಡ್ 19ವೈರಸ್‌ ಮತ್ತು ಲಾಕ್‌ಡೌನ್‌ನಿಂದಾಗಿ ಅನೇಕರಿಗೆ ಬದುಕು ಸಾಗಿಸುವುದೇ ಸವಾಲಾಗಿ ಪರಿಣಮಿಸಿರುವ ಈ ಹೊತ್ತಲ್ಲಿ ಬೆಲೆಯೇರಿಕೆಯ ಬಿಸಿ ಕೂಡ ಜನಸಾಮಾನ್ಯರನ್ನು ಕಂಗೆಡಿಸಿದೆ. ದಿನನಿತ್ಯದ ಬಳಕೆಯ ಹಲವು ಸಾಮಗ್ರಿಗಳ ಬೆಲೆ ಏರಿಕೆಯಾಗಿದೆ. ಆದರೆ, ತಮಿಳುನಾಡಿನಲ್ಲಿ ಬಡವರಿಗೆ ಕೇವಲ ಒಂದು ರೂಪಾಯಿಗೆ ಇಡ್ಲಿ ನೀಡುವ 85ರ ಅಜ್ಜಿ ಕೆ. ಕಮಲಥಾಲ್‌ ಅವರು ಮಾತ್ರ ತಮ್ಮ ಕಾಯಕವನ್ನು ಮುಂದುವರಿಸಿದ್ದಾರೆ. ಯಾರು ಕೂಡ ಹಸಿವಿನಿಂದ ಇರಬಾರದು ಎಂಬ ಉದ್ದೇಶಕ್ಕಾಗಿಯೇ ನಾನು 1 ರೂ.ಗೆ ಮನೆಯಲ್ಲೇ ಮಾಡಿದ ಇಡ್ಲಿಯನ್ನು ಮಾರಾಟ ಮಾಡುತ್ತಿರುವುದು. ಹೀಗಿರುವಾಗ, ಈಗ ನಾನು ಯಾವ ಕಾರಣಕ್ಕೂ ಇಡ್ಲಿಯ ಬೆಲೆ ಏರಿಸುವುದಿಲ್ಲ ಎಂದಿದ್ದಾರೆ ಅಜ್ಜಿ.

Advertisement

ಕೋವಿಡ್ 19 ಶುರುವಾದ ಬಳಿಕ ಪರಿಸ್ಥಿತಿ ಸ್ವಲ್ಪ ಕೆಟ್ಟಿದೆ. ಅಗತ್ಯ ಸಾಮಗ್ರಿಗಳ ಬೆಲೆ ಏರಿಕೆಯಾಗಿದೆ. ಆದರೂ, ನಾನು ಇಡ್ಲಿಯ ಬೆಲೆ ಹೆಚ್ಚಿಸುವುದಿಲ್ಲ. ಎಷ್ಟೋ ಬಡವರು ಈ ಕಡಿಮೆ ಬೆಲೆಯ ಇಡ್ಲಿಯಿಂದ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ. ಅವರ ಹೊಟ್ಟೆಗೆ ಹೊಡೆಯಲು ನಾನು ಇಚ್ಛಿಸುವುದಿಲ್ಲ ಎನ್ನುವ ಮೂಲಕ ಅಜ್ಜಿ ಕಮಲಥಾಲ್‌ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. 30 ವರ್ಷಗಳಿಂದಲೂ ಅವರು 1 ರೂ.ಗೆ ಇಡ್ಲಿ ಮಾರಾಟ ಮಾಡುತ್ತಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next