Advertisement

ಕೇಂದ್ರದಲ್ಲಿ ಮಹಾಮೈತ್ರಿಗೆ ಸಿದ್ಧರಾಗಿ: ಲಾಲು

02:18 PM Jun 12, 2017 | Team Udayavani |

ಪಾಟ್ನಾ: ಬಿಹಾರ ಮಾಜಿ ಸಿಎಂ, ಆರ್‌ಜೆಡಿ ನಾಯಕ ಲಾಲು ಪ್ರಸಾದ್‌ ಯಾದವ್‌ ಅವರಿಗೆ ರವಿವಾರ 70ನೇ ಜನ್ಮದಿನದ ಸಂಭ್ರಮ. ವಿವಿಧ ರಾಜಕಾರಣಿಗಳಿಂದ ಅಭಿನಂದನೆಗಳ ಸುರಿಮಳೆ. ಈ ಸಂಭ್ರಮದ ಮಧ್ಯೆಯೇ ಮಹಾಘಟಬಂಧನದ ಮಾತನಾಡಿದ್ದಾರೆ ಲಾಲು. ಹೌದು.  ಮುಂದಿನ ಮಹಾ ಹೋರಾಟಕ್ಕಾಗಿ ನೀವೆಲ್ಲ ಸಿದ್ಧರಾಗಿ. ಇನ್ನು ದಿಲ್ಲಿ ನೋಡುವುದು ಮಹಾಮೈತ್ರಿಯನ್ನು. ಎಲ್ಲ ಪಾಲುದಾರ ಪಕ್ಷಗಳೂ ಇಂದಿನಿಂದಲೇ ಕಾರ್ಯಪ್ರವೃತ್ತರಾಗಿ ಎಂದು ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ತಮ್ಮ ರಾಜಕೀಯ ಸಹೋದ್ಯೋಗಿಗಳಿಗೆ ಲಾಲು ಕರೆ ನೀಡಿದ್ದಾರೆ.

Advertisement

ಇದೇ ವೇಳೆ, ‘ಮುಂದಿನ ರಾಜಕೀಯ ಹೋರಾಟಕ್ಕೆ ನಿಮ್ಮ ಬೆಂಬಲ ಅಗತ್ಯವಿದೆ. ನಿಮಗೆ ಜನ್ಮದಿನ ಶುಭ‌ ಕಾಮನೆಗಳು’ ಎಂದು ಪಶ್ಚಿಮ ಬಂಗಾಲ ಸಿಎಂ ಮಮತಾ ಬ್ಯಾನರ್ಜಿ ಅಭಿನಂದಿಸಿದ್ದಾರೆ. ಬಿಹಾರದಲ್ಲಿನ ಮಹಾಮೈತ್ರಿಯು ಬಿಜೆಪಿಯನ್ನು ಅಧಿಕಾರದಿಂದ ದೂರವುಳಿಸುವಲ್ಲಿ ಸಫ‌ಲವಾಗಿದ್ದು, ಇದೇ ಮಾದರಿಯನ್ನು ದೇಶಕ್ಕೂ ವಿಸ್ತರಣೆ ಮಾಡಬೇಕು. ಇದಕ್ಕಾಗಿ ನಾವೆಲ್ಲ ಒಂದಾಗಿ, ಒಂದೇ ಗುರಿ ಇಟ್ಟುಕೊಂಡು ಹೋರಾಡಬೇಕು ಎಂದು ಲಾಲು ತಿಳಿಸಿದ್ದಾರೆ. ಜನ್ಮದಿನದ ಹಿನ್ನೆಲೆಯಲ್ಲಿ ಲಾಲು ನಿವಾಸಕ್ಕೆ ಆಗಮಿಸಿದ ಸಿಎಂ ನಿತೀಶ್‌ ಕುಮಾರ್‌, ರಾಜ್ಯ ರಾಜಕೀಯ ಮತ್ತು ಸಮಾಜಕ್ಕೆ ಅವರು ನೀಡಿದ ಕೊಡುಗೆಯನ್ನು ಕೊಂಡಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next