ಮಂಗಳೂರು: ಸಾಮಾನ್ಯ ಸೇವಾ ಕೇಂದ್ರಗಳಿಗಿಂತಲೂ ಅತ್ಯುತ್ತಮ ಸೇವೆ ಒದಗಿಸುವ ನಿಟ್ಟಿನಲ್ಲಿ ಗ್ರಾಮ ಒನ್ ಆರಂಭಿಸಲಾಗಿದ್ದು, ಇದು ಮುಖ್ಯಮಂತ್ರಿಗಳ ಅತಿ ಮಹತ್ವಾಕಾಂಕ್ಷಿ ಯೋಜನೆಯಾಗಿದೆ ಎಂದು ರಾಜ್ಯ ಸರಕಾರದ ಸಿಬಂದಿ ಆಡಳಿತ ಸುಧಾರಣೆ ಇಲಾಖೆಯ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ವಿ. ಪೊನ್ನುರಾಜ್ ತಿಳಿಸಿದರು.ಗ್ರಾಮ ಒನ್,
ಜಿಲ್ಲಾ ಪಂಚಾಯತ್‌ನಲ್ಲಿ ಮಂಗಳ ವಾರ ಗ್ರಾಮ ಒನ್ ಆಪರೇಟರ್‌ಗಳ ತರಬೇತಿಯನ್ನು ದ್ದೇಶಿಸಿ ಅವರು ಮಾತನಾಡಿದರು.
ಗ್ರಾಮ ಒನ್‌ನಲ್ಲಿ ಸರಕಾರದ 500ರಿಂದ 800 ಸೇವೆಗಳನ್ನು ಗ್ರಾಮ ಸ್ಥರಿಗೆ ನೀಡುವ ಉದ್ದೇಶ ಹೊಂದ ಲಾಗಿದೆ. ಅದರಲ್ಲಿ ಫಲಾನುಭವಿಗಳಿಗೆ ಪ್ರಮಾಣ ಪತ್ರಗಳನ್ನು ನೀಡುವುದರ ಜತೆಗೆ ಸರಕಾರದ ವಿವಿಧ ಯೋಜನೆ ಗಳನ್ನು ಆದ್ಯತೆಯ ಮೇರೆಗೆ ಅರ್ಹರಿಗೆ ತಲುಪಿಸಲಾಗುವುದು, ಆದರೆ ಪ್ರತ್ಯೇಕವಾಗಿ ಖಾಸಗಿಯಾಗಿ ಸೇವೆ ಸಲ್ಲಿಸುವ ಅವಕಾಶವಿರುವುದಿಲ್ಲ, ಪ್ರಾರಂಭದಲ್ಲಿ ಫ್ರಾಂಚೈಸಿಗಳು ಕಡಿಮೆ ಇದ್ದಲ್ಲಿ ಅದರ ಸಂಖ್ಯೆಗಳನ್ನು ಹೆಚ್ಚು ಮಾಡಲಾಗುವುದು ಎಂದರು.
ಗ್ರಾಮ ಒನ್‌ನಲ್ಲಿ ಬಸ್, ರೈಲು ಟಿಕೇಟ್‌ಗಳು, ವಾಹನಗಳ ವಿಮೆ ಸೇರಿದಂತೆ ವಿವಿಧ ರೀತಿಯ ವಿಮೆಗಳನ್ನು ಮಾಡಿಸುವುದು ಹಾಗೂ ಬ್ಯಾಂಕಿಂಗ್ ವಹಿವಾಟಿಗೆ ಅನು ಕೂಲ ಮಾಡಿಕೊಡುವಂತಹ ಅವಕಾಶ ಗಳನ್ನು ಮುಂದೆ ಕಲ್ಪಿಸಿಕೊಡ ಲಾಗುವುದು. ಈ ಕೇಂದ್ರಗಳು ಸರಕಾರದ ಕಚೇರಿಗಳಂತೆ ಸೇವೆ ನೀಡುವ ವಾತಾ ವರಣ ಹೊಂದಿರಬೇಕು ಎಂದು ಹೇಳಿದರು.
ಸರಕಾರದಿಂದ ನೀಡಲಾಗುವ ಸೇವೆ ಒದಗಿಸುವುದು ಹಾಗೂ ಅದಕ್ಕೆ ಸಂಬಂಧಿಸಿದ ಚಟುವಟಿಕೆಗಳನ್ನು ಮಾತ್ರ ಮಾಡಲು ಅವಕಾಶವಿರುತ್ತದೆ. ಇಲ್ಲಿ ಶಿಸ್ತು ಬಹಳ ಮುಖ್ಯ. ಈ ಕೇಂದ್ರಗಳಲ್ಲಿ ಸರಕಾರಿ ಹಾಗೂ ಖಾಸಗಿ ಸೇವೆ ನೀಡುವ ಪಟ್ಟಿಯನ್ನು ನೀಡಲಾಗುವುದು. ಅದರಂತೆಯೇ ಕಾರ್ಯನಿರ್ವಹಿಸಬೇಕು, ಲೈಸನ್ಸ್ ಪಡೆದವರು ಮಾತ್ರ ಈ ಕೇಂದ್ರಗಳನ್ನು ನಡೆಸಬೇಕು ದಿನದಲ್ಲಿ 12 ತಾಸು ಕೆಲಸ ನಿರ್ವಹಿಸಬೇಕು ಹಾಗೂ ಎಲ್ಲ ದಿನಗಳಲ್ಲಿಯೂ ಕೆಲಸ ಮಾಡಲು ಶಕ್ತರಾಗಿರಬೇಕು ವಾರಕ್ಕೆ ಒಂದು ರಜೆ ನೀಡುವ ಬಗ್ಗೆ ಚಿಂತಿಸಲಾಗುತ್ತಿದೆ, ಒಟ್ಟಾರೆ ಸರಕಾರಿ ಕಚೇರಿಯಂತೆ ಸೇವೆ ನೀಡುವ ಜನಸೇವ ಕೇಂದ್ರಗಳಾಗಿ ಇವು ಹೊರಹೊಮ್ಮಬೇಕು ಎನ್ನುವುದು ಮುಖ್ಯಮಂತ್ರಿಗಳ ಆಶಯವಾಗಿದೆ ಎಂದವರು ವಿವರಿಸಿದರು.
ಗ್ರಾಮಗಳಿರುವ ಜನಸಂಖ್ಯೆಯ ಆಧಾರದ ಮೇಲೆ ಈ ಕೇಂದ್ರಗಳನ್ನು ತೆರೆಯಲಾಗುತ್ತಿದೆ. ಗ್ರಾಮೀಣ ಪ್ರದೇಶ ದಲ್ಲಿ ಉದ್ಯೋಗವಕಾಶ ಒದ ಗಿಸುವುದು ಹಾಗೂ ಆ ಮೂಲಕ ಸರಕಾರದ ಸೇವೆಗಳನ್ನು ಜನರಿಗೆ ತಲು ಪಿಸುವುದು ಈ ಯೋಜನೆಯ ಚಿಂತನೆಯಾಗಿದೆ. ಮುಂಬರುವ ದಿನಗಳಲ್ಲಿ ತಾಲೂಕು ವಾರು ಪ್ರತ್ಯೇಕವಾಗಿ ಈ ರೀತಿಯ ತರಬೇತಿಯನ್ನು ಹಮ್ಮಿಕೊಳ್ಳ ಲಾಗುವುದು ಎಂದು ತಿಳಿಸಿದರು.
ಸಾಲ ಸೌಲಭ್ಯ ಕುರಿತು
ಮಾಹಿತಿ ಕಾರ್ಯಾಗಾರ
ಜಿ.ಪಂ. ಸಿಇಒ ಡಾ| ಕುಮಾರ್ ಅವರು ಮಾತನಾಡಿ, ಗ್ರಾಮ ಒನ್ ಕೇಂದ್ರಗಳನ್ನು ಪ್ರಾರಂಭಿಸುವ ಆಸಕ್ತರು ಪಿಎಂಇಜಿಪಿ, ಮುದ್ರಾ ಸೇರಿದಂತೆ ವಿವಿಧ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ. ಮುಂದಿನ ದಿನಗಳಲ್ಲಿ ಜಿಲ್ಲಾ ಲೀಡ್ ಬ್ಯಾಂಕ್ ಮೂಲಕ ಬ್ಯಾಂಕ್‌ಗಳು ನೀಡುವ ಸಾಲ ಸೌಲಭ್ಯಗಳ ಕುರಿತು ಮಾಹಿತಿ ಕಾರ್ಯಾಗಾರವನ್ನು ಹಮ್ಮಿ ಕೊಳ್ಳಲಾಗುವುದು ಎಂದರು.
ಇಡಿಸಿಎಸ್ ನಿರ್ದೇಶಕ ದಿಲೀಪ್ ಶಶಿ, ಎಡಿಸಿ ಕೃಷ್ಣಮೂರ್ತಿ ಹಾಗೂ ಗ್ರಾಮ ಯೋಜನಾ ನಿರ್ದೇಶಕ ವರಪ್ರಸಾದ್ ರೆಡ್ಡಿ ವೇದಿಕೆಯಲ್ಲಿದ್ದರು.