ಕಾಪು : ರಾಜ್ಯ ಸರಕಾರದ ಆದೇಶದಂತೆ ಕಾಪು ತಾಲೂಕು ತಹಶೀಲ್ದಾರ್ ಶ್ರೀನಿವಾಸ ಮೂರ್ತಿ ಕುಲಕರ್ಣಿ ಅವರು ಜೂ. 18ರಂದು ಕಾಪು ಪುರಸಭಾ ವ್ಯಾಪ್ತಿಯ ಕೈಪುಂಜಾಲಿನಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳ ಜೊತೆಗೆ ಗ್ರಾಮ ವಾಸ್ತವ್ಯ ನಡೆಸಿ ಅಹವಾಲು ಸ್ವೀಕರಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರಕಾರದ ಆದೇಶದ ಪ್ರಕಾರ ಪ್ರತೀ ಮೂರು ತಿಂಗಳಿಗೊಮ್ಮೆ ಗ್ರಾಮ ವಾಸ್ತವ್ಯ ನಡೆಸಿ, ಜನರಿಂದ ಅಹವಾಲು ಸ್ವೀಕರಿಸಿ ಸ್ಥಳ ದಲ್ಲೇ ಅದನ್ನು ಇತ್ಯರ್ಥ ಪಡಿಸಲು ಸೂಚನೆ ನೀಡಿದೆ. ಅದರಂತೆ ಕಾಪು ತಾಲೂಕಿನಲ್ಲೂ ಗ್ರಾಮ ವಾಸ್ತವ್ಯ ಆಯೋಜಿಸಲಾಗಿದೆ ಎಂದರು.
ಕಾಪು ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ ನವಾಡ, ಶಿಕ್ಷಣ ಸಂಯೋಜಕ ಶಂಕರ್, ಉಪ ತಹಶೀಲ್ದಾರ್ ಹರಿಪ್ರಸದ್ ಭಟ್, ಕಂದಾಯ ನಿರೀಕ್ಷಕ ಸುಧೀರ್ ಶೆಟ್ಟಿ, ಉಪ ವಲಯ ಅರಣ್ಯಾಧಿಕಾರಿ ಜೀವನ್ ದಾಸ್ ಶೆಟ್ಟಿ, ಕಾಪು ಪುರಸಭೆ ಸದಸ್ಯರಾದ ಕಿರಣ್ ಆಳ್ವ, ಶೋಭಾ ಬಂಗೇರ, ಫರ್ಜಾನ, ರತ್ನಾಕರ ಶೆಟ್ಟಿ, ರಾಧಿಕಾ ಸುವರ್ಣ, ಶಾಲಾ ಮುಖ್ಯೋಪಾಧ್ಯಾಯಿನಿ ಆಶಲತಾ ಮೊದಲಾದವರು ಉಪಸ್ಥಿತರಿದ್ದರು.
ಇದನ್ನೂ ಓದಿ : ನಿರಂಜನ್ ಸುಧೀಂದ್ರ ಚೊಚ್ಚಲ ಚಿತ್ರ ‘ನಮ್ಮ ಹುಡುಗರು’ ಜು.8ಕ್ಕೆ ತೆರೆಗೆ