ಯಳಂದೂರ: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಕೋವಿಡ್‌ನಂತರ ಅಲ್ಪ ಬದಲಾವಣೆ ತರಲಾಗಿದ್ದು ಗ್ರಾಪಂ ಸದಸ್ಯರೂ ತಮ್ಮ ವೈಯಕ್ತಿಕ ಕೆಲಸಗಳನ್ನುನರೇಗಾ ಮೂಲಕ ಮಾಡಿಕೊಳ್ಳಬಹುದು ಎಂದು ನರೇಗಾ ತಾಲೂಕು ಸಂಯೋಜಕ ನಾರಾಯಣ್ ಮಾಹಿತಿ ನೀಡಿದರು.
ಗುಂಬಳ್ಳಿ ಗ್ರಾಪಂ ಆವರಣದಲ್ಲಿ ಶುಕ್ರವಾರ ನಡೆದ ಗ್ರಾಮಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ನರೇಗಾ ಯೋಜನೆಯಡಿ ಈ ಹಿಂದೆ ಗ್ರಾಪಂ ಸದಸ್ಯರುಕೆಲಸಗಳನ್ನು ಮಾಡಿಸಿಕೊಳ್ಳಲು ಅವಕಾಶ ಇರಲಿಲ್ಲ. ಈಗ ನಿಯಮ ಸಡಿಲಗೊಂಡಿದೆ. ವೈಯುಕ್ತಿಕ ಕಾಮಗಾರಿಗಳಾದ ಕೊಟ್ಟಿಗೆ ನಿರ್ಮಾಣ, ಜಮೀನು, ಬದುಗಳ ಅಭಿವೃದ್ಧಿ ಸೇರಿ ಇತರೆ ಕೆಲಸ ಮಾಡಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಇದರೊಂದಿಗೆ ಶಾಲೆಗಳ ಅಡುಗೆ ಸಹಾಯಕರಿಗೂ ನರೇಗಾದಲ್ಲಿ ಕೆಲಸ ಮಾಡಲು ಅವಕಾಶ ಮಾಡಿಕೊಡಲಾಗಿದೆ ಎಂದರು.
2020-21ನೇ ಸಾಲಿನ 2 ನೇ ಹಂತದಲ್ಲಿ ಗುಂಬಳ್ಳಿ ಗ್ರಾಪಂನಲ್ಲಿ ಒಟ್ಟು 88 ಕಾಮಗಾರಿ ನಡೆದಿದೆ. ಇದರಲ್ಲಿ59.48 ಲಕ್ಷ ಕೂಲಿ ಮೊತ್ತ, 17.63 ಲಕ್ಷ ಸಾಮಗ್ರಿ ಮೊತ್ತ ಸೇರಿ ಒಟ್ಟು 77.12 ಲಕ್ಷ ರೂ. ವ್ಯಯಿಸಲಾಗಿದೆ. ಇದಲ್ಲದೆ ಪ್ರಧಾನಮಂತ್ರಿ ಆವಾಸ್ ವಸತಿ ಯೋಜನೆಯಡಿ 112 ಫಲಾನುಭವಿಗಳನ್ನು ಆಯ್ಕೆಮಾಡಲಾಗಿದ್ದು ಇದರಲ್ಲಿ 48 ಮಂದಿ ಇನ್ನೂ ಮನೆ ನಿರ್ಮಿಸಿಕೊಂಡಿಲ್ಲ. ಗುಂಬಳ್ಳಿ ಗ್ರಾಮದ ವಿಕಲಚೇತನ ವ್ಯಕ್ತಿಯೊಬ್ಬರಿಗೆ ಖಾಲಿ ನಿವೇಶನವೇ ಇಲ್ಲ, ಕೆಲವರಿಗೆ ಇದಕ್ಕೆ ಹೇಗೆ ಬಿಲ್ ಪಾವತಿ ಮಾಡಿಕೊಳ್ಳಬೇಕು, ಕೆಲಸಹೇಗೆ ಆರಂಭಿಸಬೇಕೆಂಬ ಮಾಹಿತಿ ಕೊರತೆ ಇದೆ. ಈ ಬಗ್ಗೆ ಇವರಿಗೆ ಈಗಾಗಲೇ ಮಾಹಿತಿ ನೀಡಲಾಗಿದೆ.
ಇದರೊಂದಿಗೆ ಮನೆ ನಿರ್ಮಾಣಕ್ಕೆ ನರೇಗಾದಲ್ಲೂ 90 ದಿನಗಳ ಕೂಲಿ ಕೆಲಸಕ್ಕೆ ಅವಕಾಶವೂ ಇದ್ದು ಸಾರ್ವ ಜನಿಕರು ಸದ್ಬಳಕೆ ಮಾಡಿಕೊಳ್ಳಬೇಕೆಂದರು. ಪಿಡಿಒ ಬಸವಣ್ಣ ಗ್ರಾಪಂನ ನೂತನ ಸದಸ್ಯರಿಗೆಸ್ವಾಗತ ಕೋರಿದರು. ನೋಡಲ್ ಅಧಿಕಾರಿ ಜಯಕಾಂತ, ಗ್ರಾಪಂ ಅಧ್ಯಕ್ಷೆ ಶಾಂತಮ್ಮ, ಸದಸ್ಯರಾದಮಂಜುಳಾ, ರಾಜೇಂದ್ರ, ಮಮತಾ, ಶ್ರೀನಿವಾಸ್, ಶಿವಮ್ಮ, ನಂಜನಾಯಕ, ವಿ.ಮಾದೇಶ್, ಜ್ಯೋತಿ, ಶಕುಂತಲಾ, ರಾಜಶೆಟ್ಟಿ, ಜೆ.ನಟರಾಜು, ಕೆ.ಎಸ್. ಚಂದ್ರಶೇಖರ್, ಭಾಗ್ಯಮ್ಮ, ಎನ್.ನಾಗಣ್ಣ ಮತ್ತಿತರರು ಉಪಸ್ಥಿತರಿದ್ದರು.