Advertisement

“ಬಿಜೆಪಿ ಸರ್ಕಾರದಿಂದ ಜನ ವಿರೋಧಿ ನೀತಿ’

05:22 PM Nov 27, 2021 | Suhan S |

ಸೊರಬ: ರಾಜ್ಯ ಹಾಗೂ ಕೇಂದ್ರದಲ್ಲಿ ಆಡಳಿತದಲ್ಲಿರುವ ಬಿಜೆಪಿ ಸರ್ಕಾರ ಜನತೆಗೆ ನೀಡಿದ ಆಶ್ವಾಸನೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದ್ದು, ಜನ ವಿರೋಧಿ  ನೀತಿ ಅನುಸರಿಸುತ್ತಿದೆ. ಬಡವರ ಬಗ್ಗೆ ಕಿಂಚಿತ್ತು ಕಾಳಜಿ ಹೊಂದಿಲ್ಲ ಎಂದು ವಿಧಾನ ಪರಿಷತ್‌ ಚುನಾವಣಾ ಕಾಂಗ್ರೆಸ್‌ ಅಭ್ಯರ್ಥಿ ಆರ್‌. ಪ್ರಸನ್ನಕುಮಾರ್‌ ಆರೋಪಿಸಿದರು.

Advertisement

ತಾಲೂಕಿನ ಕುಬಟೂರು ಗ್ರಾಮದ ಎಸ್‌. ಮಧು ಬಂಗಾರಪ್ಪ ನಿವಾಸದ ಆವರಣದಲ್ಲಿ ಸೊರಬ-ಆನವಟ್ಟಿ ಬ್ಲಾಕ್‌ ಕಾಂಗ್ರೆಸ್‌ ವತಿಯಿಂದ ವಿಧಾನ ಪರಿಷತ್‌ ಚುನಾವಣೆ ಹಿನ್ನೆಲೆಯಲ್ಲಿ ಕರೆದಿದ್ದ ಗ್ರಾಪಂ ಸದಸ್ಯರ ಸಭೆಯಲ್ಲಿ ಮತ ಯಾಚಿಸಿ ಅವರು ಮಾತನಾಡಿದರು. ಬಿಜೆಪಿ ಸರ್ಕಾರ ಅ ಧಿಕಾರಕ್ಕೆ ಬಂದ ಮೇಲೆ ಬಡವರಿಗೆ ಯಾವುದೇ ಯೋಜನೆಯಡಿ ವಸತಿಗಳನ್ನು ನೀಡಿಲ್ಲ. ಕಾಂಗ್ರೆಸ್‌ ಸರ್ಕಾರದ ಅವ ಧಿಯಲ್ಲಿ ನೀಡಿದ ಮನೆಗಳಿಗೂ ಹಣ ಬಿಡುಗಡೆ ಮಾಡಿಲ್ಲ. ಗ್ರಾಪಂ ಚುನಾವಣೆ ಸಂದರ್ಭದಲ್ಲಿ ಬಿಜೆಪಿಯವರು ಮನೆಗಳನ್ನು ನೀಡುತ್ತೇವೆ ಎಂದು ಪಟ್ಟಿ ಮಾಡಿ ಗಿಮಿಕ್‌ ಮಾಡಿದರು. ಆದರೆ, ಇದುವರೆಗೂ ಒಂದೂ ಮನೆಗಳನ್ನು ನೀಡಿಲ್ಲ. ಗ್ರಾಪಂ ಸದಸ್ಯರ ಮೀಸಲಾತಿ ಹತ್ತು ವರ್ಷದಿಂದ ತೆಗೆದು ಐದು ವರ್ಷಕ್ಕೆ ಸೀಮಿತ ಮಾಡಿ ಮನಸ್ಸಿಗೆ ಬಂದ ಹಾಗೆ ಕಾನೂನನ್ನು ರಚನೆ ಮಾಡುವುದರ ಮೂಲಕ ಗ್ರಾಮಗಳ ಅಭಿವೃದ್ಧಿಗೆ ಮಾರಕವಾಗಿ ಸರ್ಕಾರ ಕಾರ್ಯ ನಿರ್ವಹಿಸುತ್ತಿದೆ ಎಂದರು.

ರಾಜ್ಯದ 25 ಕ್ಷೇತ್ರಗಳಿಗೆ ವಿ.ಪ. ಚುನಾವಣೆ ನಡೆಯಲಿದ್ದು, ಶೇ.95 ರಷ್ಟು ಮತಗಳು ಗ್ರಾಪಂ ಸದಸ್ಯರು ಚಲಾಯಿಸಲಿದ್ದಾರೆ. ಅಭ್ಯರ್ಥಿಯ ಗೆಲುವು ನಿಮ್ಮ ಗೆಲುವಾಗಿರುತ್ತದೆ. ಈ ನಿಟ್ಟಿನಲ್ಲಿ ಸದಸ್ಯರು ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಶಿವಮೊಗ್ಗದ ಏಳು ವಿಧಾನಸಭಾ ಕ್ಷೇತ್ರಗಳ ಚುನಾವಣೆಯ ನೇತೃತ್ವವನ್ನು ಮಧು ಬಂಗಾರಪ್ಪ ಅವರು ವಹಿಸಲಿದ್ದಾರೆ. ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅ ಧಿಕಾರಕ್ಕೆ ಬರಲಿದ್ದು, ಜಿಲ್ಲೆಯಿಂದ ಮಧು ಬಂಗಾರಪ್ಪ ಅವರು ಸಚಿವರಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮಾಜಿ ಶಾಸಕ ಮಧು ಬಂಗಾರಪ್ಪ ಮಾತನಾಡಿ, ಆರ್‌. ಪ್ರಸನ್ನಕುಮಾರ ಅವರು ಮೇಲ್ಮನೆಗೆ ಹೋಗುವ ಎಲ್ಲ ಅರ್ಹತೆ ಹೊಂದಿದ್ದು, ಬಹುಮತದಿಂದ ಆಯ್ಕೆಯಾಗಲಿದ್ದಾರೆ. ಕಳೆದ ಬಾರಿ ನಾನು ಜೆಡಿಎಸ್‌ ಶಾಸಕನಾಗಿದ್ದರೂ ಕಾಂಗ್ರೆಸ್‌ ನಾಯಕರ ಸಹಕಾರದಿಂದ ಜಿಲ್ಲೆಯಲ್ಲೇ ಅತಿ ಹೆಚ್ಚು ಮನೆಗಳನ್ನು ಬಡವರಿಗೆ ನೀಡಿರುವ ತೃಪ್ತಿ ಇದೆ. ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್‌ ಸದಸ್ಯತ್ವ ನೋಂದಣಿ ನಡೆಯಲಿದ್ದು, ತಾಲೂಕು ಪ್ರಥಮ ಸ್ಥಾನ ಪಡೆಯಲಿದೆ. ಮೊದಲ ಪ್ರಾಶಸ್ತ್ಯದ ಮತವನ್ನು ಮಾತ್ರ ನೀಡುವಂತೆ ತಿಳಿಸಿದರು.

ಸಭೆಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಎಚ್‌. ಎಸ್‌. ಸುಂದರೇಶ್‌, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಕ್ಷ್ಮೀಕಾಂತ ಚಿಮಣೂರು, ಜಿಲ್ಲಾ ಉಪಾಧ್ಯಕ್ಷ ಶ್ರೀಧರ್‌ ಹುಲ್ತಿಕೊಪ್ಪ, ಸೊರಬ ಬ್ಲಾಕ್‌ ಅಧ್ಯಕ್ಷ ಅಣ್ಣಪ್ಪ ಹಾಲಘಟ್ಟ, ಆನವಟ್ಟಿ ಅಧ್ಯಕ್ಷ ಆರ್‌.ಸಿ. ಪಾಟೀಲ್‌, ಪ್ರಮುಖರಾದ ಕಲಗೋಡು ರತ್ನಾಕರ, ಶಿವಲಿಂಗೇಗೌಡ, ಚೌಟಿ ಚಂದ್ರಶೇಖರ, ತಬಲಿ ಬಂಗಾರಪ್ಪ, ನರೇಂದ್ರ ಒಡೆಯರ್‌, ಎಚ್‌. ಗಣಪತಿ, ಎಲ್‌.ಜಿ. ರಾಜಶೇಖರ್‌, ವಿಜಯಲಕ್ಷ್ಮೀ, ಕೆ.ವಿ. ಗೌಡ, ಸಂಜೀವ ತರಕಾರಿ, ಹಬೀಬುಲ್ಲಾ ಹವಾಲ್ದಾರ್‌, ಶಿವಮೂರ್ತಿ, ಸದಾಗೌಡ, ಕೆ.ಪಿ. ರುದ್ರಗೌಡ, ಎಂ. ಕರುಣಾಕರ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next