Advertisement
ಚುರುಕುಗೊಂಡಿರುವ ರಾಜಕೀಯ ಪಕ್ಷಗಳು: ರಾಜ್ಯದ ಪ್ರಭಾವಿ ರಾಜಕಾರಣಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರ ಕ್ಷೇತ್ರವಾಗಿರುವ ಮುಧೋಳ ಮತಕ್ಷೇತ್ರದಲ್ಲಿ ಈ ಬಾರಿಯ ಚುನಾವಣೆ ಕಣ ಹೆಚ್ಚು ರಂಗೇರಿದೆ. ಈಗಾಗಲೇ ಬಿಜೆಪಿ ಗ್ರಾಮ ಸ್ವರಾಜ್ಯ ಕಾರ್ಯಕ್ರಮದ ಮೂಲಕ ಪಕ್ಷದ ಕಾರ್ಯಕರ್ತರಲ್ಲಿ ಹುರುಪು ತುಂಬಿದೆ. ಅದೇ ಮಾರ್ಗದಲ್ಲಿರುವ ಕಾಂಗ್ರೆಸ್ ಪಕ್ಷ ಸತೀಶ ಬಂಡಿವಡ್ಡರನೇತೃತ್ವದಲ್ಲಿ ಒಂದು ಸುತ್ತಿನ ಚುನಾವಣೆ ಪೂರ್ವ ಭಾವಿ ಸಭೆ ನಡೆಸಿ ಕಾರ್ಯಕರ್ತರನ್ನು ಚುನಾವಣೆಗೆ ಅಣಿಗೊಳಿಸಿದೆ. ಆರ್.ಬಿ. ತಿಮ್ಮಾಪುರ ಅಧ್ಯಕ್ಷತೆಯಲ್ಲಿ ನಡೆಯಲ್ಲಿರುವ ಕಾಂಗ್ರೆಸ್ ಪಕ್ಷದ ಮತ್ತೂಂದು ಚುನಾವಣೆ ಪೂರ್ವಭಾವಿ ಸಭೆಯಲ್ಲಿ ಪಕ್ಷದ ಶಕ್ತಿ ಅನಾವರಣಕ್ಕೆ ವೇದಿಕೆ ಸಜ್ಜುಗೊಳಿಸಲಾಗಿದೆ.
Related Articles
Advertisement
ಕಡೆಗಣೆನೆಯೂ ಇದೆ: ಚುನಾವಣೆ ದುಡ್ಡು ಇದ್ದವರಿಗೆ, ನಮ್ಮಂತ ಬಡವರಿಗಲ್ಲ ಯಾರು ಆರಿಸಿ ಬಂದರೂ ನಾವು ದುಡಿದು ತಿನ್ನುವುದು ಮಾತ್ರ ತಪ್ಪುವುದಿಲ್ಲ ಎಂಬ ಮನೋಭಾವ ಉಳ್ಳ ರೈತರು ಹಾಗೂ ಕೃಷಿ ಕೂಲಿ ಕಾರ್ಮಿಕರು ಯಾವುದೇ ಗೋಜು ಗದ್ದಲಿಗೆ ಸಿಗದೆ ತಾವಾಯಿತು ತಮ್ಮ ಕೆಲಸವಾಯಿತು ಮಾತಿನಂತಿದ್ದಾರೆ. ಅವರಲ್ಲಿ ಚುನಾವಣೆ ಬಗ್ಗೆ ಪ್ರಶ್ನಿಸಿದರೆ ನಮಗ್ಯಾಕೆ ಅದರ ಉಸಾಬರಿ ಎಂಬ ಉತ್ತರ ನೀಡುತ್ತಾರೆ.
ಕಬ್ಬು ಪ್ರಧಾನ ಬೆಳೆಯಾಗಿರುವ ತಾಲೂಕಿನಲ್ಲಿ ಇದೀಗ ಕಬ್ಬು ಕಟಾವು ಪ್ರಕ್ರಿಯೆಯಲ್ಲಿದೆ. ಕೃಷಿಕರು ತಮ್ಮ ಜಮೀನಿನಲ್ಲಿರುವ ಕಬ್ಬು ಕಟಾವಿನ ಬಗ್ಗೆ ಗಮನಹರಿಸಿದ್ದರೆ. ಲೋಕಲ್ ಕಬ್ಬು ಕಟಾವು ಮಾಡುವ ಗ್ಯಾಂಗ್ ಕಾರ್ಮಿಕರು ಬೆಳಗ್ಗೆ 5ಗಂಟೆಗೆ ಮನೆಬಿಟ್ಟರೆ ಮರಳಿ ಮನೆಗೆ ವಾಪಸ್ಸಾಗುವುದು ಸೂರ್ಯಾಸ್ತದ ಬಳಿಕವೇ ಅಂತವರು ಮಾತ್ರ ಚುನಾವಣೆ ಎಂದರೆ ಮಾರುದ್ದ ಸರಿದುಹೋಗುತ್ತಿದ್ದಾರೆ.
ತಾಲೂಕು ಆಡಳಿತ ಸಕ್ರಿಯ: ತಾಲೂಕಿನ 22 ಗ್ರಾಮ ಪಂಚಾಯತಗೆ ನಡೆಯುವ ಚುನಾವಣೆಗೆ ತಾಲೂಕು ಆಡಳಿತ ಸನ್ನದ್ಧವಾಗಿದ್ದು, ಚುನಾವಣೆ ಕಾರ್ಯವನ್ನು ಚುರುಕಿನಿಂದ ನಿರ್ವಹಿಸುತ್ತಿದೆ. ಈಗಾಗಲೇ ಪ್ರತಿ ಗ್ರಾಮ ಪಂಚಾಯಿತಿಗಳಿಗೆ ಸಹಾಯಕ ಚುನಾವಣಾಕಾರಿಗಳ ನೇಮಕ ಮಾಡಲಾಗಿದ್ದು, ಶಾಂತಿ ಹಾಗೂ ಸುವಸ್ತಸ್ಥಿತ ಮತದಾನ ಪ್ರಕ್ರಿಯೆಗೆ ಶ್ರಮಿಸುತ್ತಿದ್ದಾರೆ. ಇನ್ನೊಂದೆಡೆ ಚುನಾವಣಾಕಾಂಕ್ಷಿಗಳು ಕಾಗದಪತ್ರ ಹಾಗೂ ಇನ್ನಿತರ ಮಾಹಿತಿಗಾಗಿ ತಹಶೀಲ್ದಾರ್ ಕಚೇರಿಗೆ ನಿತ್ಯ ಅಲೆದಾಡುತ್ತಿರುವುದರಿಂದ ತಹಶೀಲ್ದಾರ್ ಕಚೇರಿಯೂ ಜನಜಂಗುಳಿಯಿಂದ ಕೂಡಿದೆ.
ತಾಲೂಕಿನಲ್ಲಿ ಬಿಜೆಪಿ ಪರ ಅಲೆಯಿದ್ದು, ಬಹುತೇಕ ಎಲ್ಲ ಪಂಚಾಯಿತಿಗಳಲ್ಲಿ ನಮ್ಮ ಪಕ್ಷ ಬೆಂಬಲಿತ ಕಾರ್ಯಕರ್ತರೆ ಅಧಿ ಕಾರದ ಚುಕ್ಕಾಣಿ ಹಿಡಿಯಲಿದ್ದಾರೆ. ನಮ್ಮ ಕಾರ್ಯಕರ್ತ ಪಡೆ ಆತ್ಮವಿಶ್ವಾಸದಿಂದ ಚುನಾವಣೆಗೆ ಸನ್ನದ್ಧಗೊಂಡಿದ್ದು, ಎಲ್ಲ ಪಂಚಾಯತತಿಗಳಲ್ಲೂ ಗೆಲುವು ಸಾ ಧಿಸಲಿದ್ದೇವೆ.
ಹನಮಂತ ತುಳಸಿಗೇರಿ, ಬಿಜೆಪಿ ಗ್ರಾಮೀಣ ಘಟಕ ಅಧ್ಯಕ್ಷ
ಗೋವಿಂದಪ್ಪ ತಳವಾರ