Advertisement

ಮತದಾರರ ಪಟ್ಟಿಯಲ್ಲಿ ಎರಡು ಕಡೆ ಹೆಸರಿದ್ದರೆ ತೆಗೆಯಿರಿ : ತುಳಸಿ ಮದ್ದಿನೇನಿ ಸೂಚನೆ

11:03 AM Dec 11, 2020 | sudhir |

ಧಾರವಾಡ: ಜಿಲ್ಲೆಯ ಜನಸಂಖ್ಯೆ ಹಾಗೂ ನೋಂದಾಯಿತ ಮತದಾರರ ಅನುಪಾತ ಕ್ರಮಬದ್ಧವಾಗಿರಬೇಕು. ಎರಡು ಕಡೆಗಳಲ್ಲಿ
ಮತದಾರರು ಹೆಸರುಗಳನ್ನು ಹೊಂದಿದ್ದರೆ ಅವುಗಳನ್ನು ಗುರುತಿಸಿ ಸೂಕ್ತ ದಾಖಲೆಗಳೊಂದಿಗೆ ತೆಗೆಯಲು ಕ್ರಮ ಕೈಗೊಳ್ಳಬೇಕೆಂದು ಮತದಾರರ ಯಾದಿ ಪರಿಷ್ಕರಣೆಯ ಜಿಲ್ಲಾ ವೀಕ್ಷಕರಾದ ತುಳಸಿ ಮದ್ದಿನೇನಿ ಹೇಳಿದರು.

Advertisement

ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಮತದಾರರ ಯಾದಿ ವಿಶೇಷ ಪರಿಷ್ಕರಣೆ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ
ಮಾತನಾಡಿದ ಅವರು, ಮತಗಟ್ಟೆ ಮಟ್ಟದ ಅಧಿಕಾರಿಗಳಿಗೆ ಸಮರ್ಪಕ ತರಬೇತಿ ನೀಡಿ ಮತದಾರರ ಯಾದಿ ನೋಂದಣಿಯ ನಮೂನೆ 6 ಮತ್ತು 7 ಹಾಗೂ ಉಳಿದ ದಾಖಲೆಗಳ ನಿರ್ವಹಣೆ ಅಚ್ಚುಕಟ್ಟಾಗಿ ನಡೆಯಬೇಕು ಎಂದರು.

ಧಾರವಾಡ ಶಿಕ್ಷಣದ ಕೇಂದ್ರವಾಗಿರುವುದರಿಂದ ಇಲ್ಲಿ ವ್ಯಾಸಂಗಕ್ಕೆ ಬರುವ ವಿದ್ಯಾರ್ಥಿಗಳನ್ನು ಮತದಾರರ ಪಟ್ಟಿಗೆ ನೋಂದಣಿ
ಮಾಡಿಕೊಳ್ಳುವಾಗ ಅವರ ಹೆಸರುಗಳು ಬೇರೆ ಜಿಲ್ಲೆ ಅಥವಾ ಭಾಗಗಳಲ್ಲಿ ನೋಂದಣಿ ಆಗಿಲ್ಲವೆಂಬುದನ್ನು ಖಚಿತಪಡಿಸಿಕೊಳ್ಳಬೇಕು.

ಇದನ್ನೂ ಓದಿ:ರಾಜಸ್ಥಾನ್ ಸರ್ಕಾರಿ ಆಸ್ಪತ್ರೆ: ಒಂದೇ ಗಂಟೆಯಲ್ಲಿ ಒಂಬತ್ತು ನವಜಾತ ಶಿಶುಗಳ ಸಾವು

ಸೂಕ್ತ ದಾಖಲೆಗಳಿಲ್ಲದೆ ಯಾವುದೇ ಮತದಾರರ ಹೆಸರನ್ನು ಪಟ್ಟಿಯಿಂದ ತೆಗೆದು ಹಾಕಬಾರದು ಎಂದು ಸೂಚಿಸಿದರು.
ಜಿಲ್ಲೆಯಲ್ಲಿ ಮತದಾರರ ನೋಂದಣಿಗಾಗಿ ಇಬ್ಬರು ನೋಂದಣಾಧಿಕಾರಿಗಳು, 7 ಜನ ಸಹಾಯಕ ಮತದಾರರ ನೋಂದಣಾಧಿಕಾರಿಗಳನ್ನು ನೇಮಿಸಲಾಗಿದೆ. ಎಲ್ಲ 7 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮತಗಟ್ಟೆ ಮಟ್ಟದ ಅಧಿಕಾರಿಗಳಿಗೆ ತರಬೇತಿ ನೀಡಲಾಗಿದೆ. ಎಲ್ಲಾ 1634 ಮತಗಟ್ಟೆಗಳಲ್ಲಿ ಮತಗಟ್ಟೆ ಮಟ್ಟದ ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರಲ್ಲಿ 592 ಬಿಎಲ್‌ ಒಗಳು ಸ್ಥಳೀಯ ಮತಗಟ್ಟೆಗಳಲ್ಲಿಯೇ ನೋಂದಣಿಯಾದವರಾಗಿದ್ದಾರೆ. ಬಿಎಲ್‌ಒಗಳು ಮತದಾರರ ನೋಂದಣಿಗಾಗಿ ನೀಡುವ ನಮೂನೆ 6, 7, 8 ಹಾಗೂ 8 (ಎ) ಅರ್ಜಿಗಳ ನಿರ್ವಹಣೆಯಲ್ಲಿ ಲೋಪವೆಸಗಬಾರದು.

Advertisement

1950 ಸಹಾಯವಾಣಿ ಮೂಲಕ ದಾಖಲಾಗುವ ದೂರು ಮತ್ತು ಅಹವಾಲುಗಳನ್ನು ಸಕಾಲದಲ್ಲಿ ಪರಿಹರಿಸಬೇಕು. ಆನ್‌ಲೈನ್‌
ಆಧಾರಿತ ದೂರು ನಿರ್ವಹಣಾ ವ್ಯವಸ್ಥೆ ಕಾಲಮಿತಿಯೊಳಗೆ ನಡೆಯಬೇಕು. ಮತದಾರರ ಜಾಗೃತಿಗೆ ಸ್ವೀಪ್‌ ಚಟುವಟಿಕೆಗಳು
ನಿರಂತರವಾಗಿರಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next