Advertisement

30ರಂದು ಗ್ರಾಮ ಸ್ವರಾಜ್ಯ ಸಮಾವೇಶ

05:52 PM Nov 26, 2020 | Suhan S |

ತಾಳಿಕೋಟೆ: ಗ್ರಾಪಂ ಚುನಾವಣೆಗೆ ಪಕ್ಷವನ್ನು ಸಿದ್ಧಗೊಳಿಸಬೇಕು. ಕಾರ್ಯಕರ್ತರನ್ನು ತಯಾರಿಗೆರಾಜ್ಯಾದ್ಯಂತ 5 ಜಿಲ್ಲೆಗಳಿಗೆ ತಲಾ ಒಂದು ತಂಡ ರಚಿಸಿ ನ.27ರಿಂದ ಡಿ.3ರ ವರೆಗೆ ಗ್ರಾಮ ಸ್ವರಾಜ್ಯ ಸಮಾವೇಶ ನಡೆಯಲಿದ್ದು, ವಿಜಯಪುರ ಜಿಲ್ಲೆಯಲ್ಲಿ ನ.30ರಂದು ಎರಡು ಭಾಗಗಳಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಆರ್‌.ಎಸ್‌. ಪಾಟೀಲ (ಕೂಚಬಾಳ) ಹೇಳಿದರು.

Advertisement

ಸಂಗಮೇಶ್ವರ ಸಭಾಭವನದಲ್ಲಿ ಬುಧವಾರಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾಗಲಕೋಟೆ, ವಿಜಯಪುರ, ಯಾದಗಿರಿ, ಕಲ್ಬುರ್ಗಿ, ಬೀದರ ಒಳಗೊಂಡ ಜಿಲ್ಲೆಗಳಲ್ಲಿ ನಡೆಯಲಿರುವ ಸಮಾವೇಶದಲ್ಲಿ ಡಿಸಿಎಂ ಗೋವಿಂದ ಕಾರಜೋಳ, ವಸತಿ ಸಚಿವ ವಿ. ಸೋಮಣ್ಣ, ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ, ಶಾಸಕ ರಾಜುಗೌಡ ನರಸಿಂಹನಾಯಕ, ನಂದೀಶ ರಡ್ಡಿ, ಬಿಜೆಪಿ ರಾಜ್ಯಪ್ರಧಾನ ಕಾರ್ಯದರ್ಶಿ ಅಶ್ವತ್ಥ್ ನಾರಾಯಣ ಸೇರಿದಂತೆ ಸಂಸದರು, ಜಿಲ್ಲೆಯ ಶಾಸಕರು ಪಾಲ್ಗೊಳ್ಳಲಿದ್ದಾರೆ ಎಂದರು.

ಮೊದಲನೇ ಕಾರ್ಯಕ್ರಮ ಬಾಗಲಕೋಟೆಯಿಂದ ಪ್ರಾರಂಭಗೊಳ್ಳಲಿದ್ದು, ನ.30ರಂದು ವಿಜಯಪುರ ಜಿಲ್ಲೆಯಲ್ಲಿ ಸಮಾವೇಶ ನಡೆಯಲಿದೆ. ಮೊದಲನೇ ಕಾರ್ಯಕ್ರಮ ಬಬಲೇಶ್ವರ, ವಿಜಯಪುರ ನಗರ,ನಾಗಠಾಣ, ಚಡಚಣ, ಈ ನಾಲ್ಕು ಮಂಡಲ ರಾಣಿ ಚನ್ನಮ್ಮ ಸಬಾಭವನದಲ್ಲಿ ಬೆಳಗ್ಗೆ 11ಕ್ಕೆನಡೆಯಲಿದೆ ಎಂದರು. ಎರಡನೇಯದಾಗಿ ಮುದ್ದೇಬಿಹಾಳ, ದೇವರಹಿಪ್ಪರಗಿ, ಸಿಂದಗಿ, ಬಸವನ ಬಾಗೇವಾಡಿ ಮಂಡಲ ಒಳಗೊಂಡು ತಾಳಿಕೋಟೆ ಪಟ್ಟಣದ ಸಂಗಮೇಶ್ವರ ಸಭಾಭವನದಲ್ಲಿ ಮಧ್ಯಾಹ್ನ 3ಕ್ಕೆ ಸಮಾವೇಶ ನಡೆಯಲಿದೆ ಎಂದರು. ಈ ಸಮಾವೇಶಗಳ ಮೂಲಕ ಅಪೇಕ್ಷಿತರ ಪಟ್ಟಿ ತಯಾರಿಸಿ ಸಂಘಟನಾತ್ಮಕವಾಗಿ ಶಕ್ತಿಕೇಂದ್ರ, ಮಹಾಶಕ್ತಿ ಕೇಂದ್ರ, ಮಂಡಲ ಮತ್ತು ರಾಜ್ಯ-ಜಿಲ್ಲಾ ಪದಾಧಿಕಾರಿಗಳು, ಜಿಲ್ಲಾ ಎಲ್ಲ ಮೋರ್ಚಾಗಳ ಪದಾ ಧಿಕಾರಿಗಳು, ಭಾಗಿಯಾಗಲಿದ್ದಾರೆ ಎಂದರು.

ಈ ವೇಳೆ ಜಿಪಂ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಬಿಜೆಪಿ ಜಿಲ್ಲಾ ಉಪಾದ್ಯಕ್ಷ ಸಂಗನಗೌಡ ಚಿಕ್ಕೊಂಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಜೋಗೂರ,ಅಶೋಕ ಅಲಾಪುರ, ಜಿಲ್ಲಾ ಕಾರ್ಯದರ್ಶಿ ಕಾಶಿಬಾಯಿ ರಾಂಪುರ, ಸರಸ್ವತಿ ಫಿರಾಪುರ, ಶಿವಪ್ರಸಾದ ಹೂಗಾರ, ಜಿಲ್ಲಾ ಕಾರ್ಯದರ್ಶಿ ಬಿ.ಎಚ್‌. ಬಿರಾದಾರ, ಬಸವರಾಜ ಬೈಚಬಾಳ, ರಾಜಶೇಖರ ಪೂಜಾರಿ, ಬಸವನ ಬಾಗೇವಾಡಿ ಮಂಡಲ ಅಧ್ಯಕ್ಷ ಶಂಕರಗೌಡಪಾಟೀಲ, ದೇವರ ಹಿಪ್ಪರಗಿ ಮಂಡಲ ಅಧ್ಯಕ್ಷ ಭೀಮನಗೌಡ ಸಿದ್ದರಡ್ಡಿ, ಸಿಂದಗಿ ಅಧ್ಯಕ್ಷ ಈರಣ್ಣ ರಾವೂರ, ಮುದ್ದೇಬಿಹಾಳ ಮಂಡಲ ಅಧ್ಯಕ್ಷ ಪರಶುರಾಮ ಪವಾರ, ಮಂಡಲ ಪ್ರಧಾನ ಕಾರ್ಯದರ್ಶಿ ಮಂಜುನಾಥ ಶೆಟ್ಟಿ, ಈಶ್ವರ ಹೂಗಾರ, ಸಿದ್ದು ಹೆಬ್ಟಾಳ, ಕಾಶಿನಾಥ ಅರಳಿಚಂಡಿ ಇದ್ದರು.

ಬಿಜೆಪಿಯಲ್ಲಿ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಯಷ್ಟೇ ಗ್ರಾಪಂ ಚುನಾವಣೆಗೆ ಪ್ರಾಮುಖ್ಯತೆ ನೀಡಲಾಗುತ್ತದೆ. ದೇಶದಲ್ಲಿ ನರೇಂದ್ರ ಮೋದಿ, ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದಲ್ಲಿ ಸರ್ಕಾರ ಇರುವುದರಿಂದ ಗ್ರಾಪಂ ಬಲವರ್ಧನೆಗೆ ಸಾಕಷ್ಟು ಅನುದಾನ ನೀಡಲಾಗುತ್ತಿದೆ. ಪ್ರತಿ ಗ್ರಾಪಂಗೆ 50 ರಿಂದ 70 ಲಕ್ಷ ರೂ. 14ನೇ ಮತ್ತು 15ನೇ ಹಣಕಾಸು ಯೋಜನೆಯಡಿ ಅನುದಾನ ನೀಡುತ್ತ ಬಂದಿದ್ದಾರೆ. ಗ್ರೇಡ್‌ 1 ಪಂಚಾಯ್ತಿಗಳಿಗೆ 1 ಕೋಟಿವರೆಗೆ ಅನುದಾನ ನೀಡುತ್ತ ಬರಲಾಗಿದೆ. -ಆರ್‌.ಎಸ್‌. ಪಾಟೀಲ, ಬಿಜೆಪಿ ಜಿಲ್ಲಾಧ್ಯಕ್ಷ

Advertisement
Advertisement

Udayavani is now on Telegram. Click here to join our channel and stay updated with the latest news.

Next