Advertisement

ಕಾಯ್ದೆ ತಿದ್ದುಪಡಿ ವಿರೋಧಿಸಿ ಗ್ರಾಮಸಭೆ

03:52 PM Dec 28, 2020 | Suhan S |

ಕೊಪ್ಪಳ: ಕೇಂದ್ರ ಸರ್ಕಾರದ ಮೂರು ಕಾಯ್ದೆಗಳನ್ನು ವಿರೋಧಿಸಿ ಎಐಡಿವೈಒ, ರೈತ, ಕೃಷಿ, ಕಾರ್ಮಿಕಸಂಘಟನೆಗಳ ಆಶ್ರಯದಲ್ಲಿ ತಾಲೂಕಿನ ಹಳೇ ಕುಮಟಾ, ನಾಗೇಶನಹಳ್ಳಿ, ಗುಡದಳ್ಳಿ ಗ್ರಾಮದಲ್ಲಿ ಗ್ರಾಮಸಭೆ ನಡೆಸಿ ಸರ್ಕಾರದ ನೀತಿಗಳ ಕುರಿತು ರೈತರಿಗೆ ಮಾಹಿತಿ ನೀಡಲಾಯಿತು.

Advertisement

ಎಐಡಿವೈಒ ಜಿಲ್ಲಾ ಸಂಚಾಲಕ ಶರಣು ಪಾಟೀಲ್‌ ಮಾತನಾಡಿ, ದೆಹಲಿಯ ಸಿಂಘು ಗಡಿಯಲ್ಲಿಕೊರೆಯುವ ಚಳಿಯಲ್ಲಿ ತಿಂಗಳಿಂದ ರೈತರು ಹೋರಾಟನಡೆಸುತ್ತಿದ್ದಾರೆ. ಆದರೆ ಪ್ರಧಾನಿ ಮೋದಿ ರೈತರ ಪರ ಭಾಷಣ ಮಾಡುವ ಮನಸ್ಸು ಮಾಡುತ್ತಿಲ್ಲ. ಪದೇ ಪದೆ ಪ್ರತಿಪಕ್ಷಗಳು ಸುಳ್ಳು ಹೇಳಿ ರೈತರ ದಿಕ್ಕುತಪ್ಪಿಸುತ್ತಿವೆ ಎನ್ನುವಹೇಳಿಕೆ ನೀಡುತ್ತಿದ್ದಾರೆ. ರೈತರನ್ನು ಭಯೋತ್ಪಾದಕರಂತೆ, ಖಲಿಸ್ಥಾನಿಗಳು ಎಂದು ಅವಮಾನಿಸಲಾಗುತ್ತಿದೆ. ಈಹೋರಾಟದ ದಿಕ್ಕು ತಪ್ಪಿಸುವ ಕೆಲಸ ಮಾಡಲಾಗುತ್ತಿದೆ. ರೈತರಿಗೆ ಬೇಡವಾದ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕು. ಪ್ರಸ್ತಾಪಿತ ವಿದ್ಯುತ್‌ ತಿದ್ದುಪಡಿ ಕಾಯ್ದೆ ಜಾರಿಗೊಳಿಸಬಾರದು. ಕನಿಷ್ಟ ಬೆಂಬಲ ಬೆಲೆ ಖಾತ್ರಿಕಾಯ್ದೆ ರೂಪಿಸಬೇಕು ಎಂದು ಒತ್ತಾಯಿಸಿ ದೆಹಲಿಯ ಗಡಿಗಳಲ್ಲಿ, ಕೊರೆಯುವ ಚಳಿಯಲ್ಲೂ ನಡೆಯುತ್ತಿರುವ ರೈತರ ಹೋರಾಟ ಇಡೀ ದೇಶದ ಗಮನ ಸೆಳೆದಿದೆ.

ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಪ್ರಜ್ಞಾವಂತ ಧೀರ ರೈತರು, ಸಾವಿರಾರು ಮಹಿಳೆಯರು, ಮಕ್ಕಳು ಮತ್ತು ಕೃಷಿ ಕಾರ್ಮಿಕರು, ಕ್ರೀಡಾಪಟುಗಳು ಎಂದಿನಂತೆ ರೈತ ಆಂದೋಲನಕ್ಕೆ ಧುಮುಕುತ್ತಿದ್ದಾರೆ. ಟಿಕ್ರಿ ಗಡಿಯಲ್ಲಿಧರಣಿ ಕುಳಿತ ಮಹಿಳೆಯರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ. ಸರ್ಕಾರ ಈಕಾನೂನುಗಳನ್ನು ವಾಪಸ್‌ ಪಡೆಯಬೇಕು. ರೈತರು ರೊಚ್ಚಿಗೇಳುವಂತೆ ಮಾಡಿ ಹೋರಾಟ ಹತ್ತಿಕ್ಕುವ ಸರ್ಕಾರದ ಉದ್ದೇಶ ಅನ್ನದಾತರಿಗೆ ಅರ್ಥವಾಗಿದೆ ಎಂದು ಮೋದಿ ಸರ್ಕಾರದ ವಿರುದ್ಧ ಗುಡುಗಿದರು.

ಗ್ರಾಮ ಸಭೆಯಲ್ಲಿ ಎಐಡಿವೈಒ ಜಿಲ್ಲಾ ಕಾರ್ಯದರ್ಶಿ ಶರಣು ಗಡ್ಡಿ, ಸಂಘಟನೆಯ ಸದಸ್ಯರಾದ ಮೌಲಾಸಾಬ್‌,ಹುಲ್ಲೇಶ, ಪ್ರಭು, ರವಿ, ಕಾಸೀಂ ಹಾಗೂ ಊರಿನಮುಖಂಡರಾದ ಯಮನೂರಪ್ಪ, ಮಂಜಪ್ಪ,ರಾಜಪ್ಪ ಈಳಿಗರ, ಪರಶುರಾಮ ಅಸಲಾಪುರ ಸಲೀಮಸಾಬ್‌, ಸಿದ್ದಪ್ಪ, ಶರೀಫ್‌ ಸಾಬ್‌ ಸೇರಿ ಇತರರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next