Advertisement

ಗ್ರಾಪಂಮಟ್ಟದಲ್ಲಿ ಮಕ್ಕಳ ಹಕ್ಕುಗಳ ಗ್ರಾಮ ಸಭೆ

12:59 PM Nov 23, 2020 | Suhan S |

ಬೆಂಗಳೂರು: ಮಕ್ಕಳ ಹಲವು ರೀತಿಯಸಮಸ್ಯೆಗಳಿಗೆ ಸ್ಥಳದಲ್ಲೆ ಸ್ಪಂದನೆ ಸಿಗುವ “ಮಕ್ಕಳಹಕ್ಕುಗಳ ಗ್ರಾಮ ಸಭೆ’ ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ ಕೆಲವು ಅಂಶಗಳ ಸೇರ್ಪಡೆ ಮತ್ತುಬದಲಾವಣೆಗಳೊಂದಿಗೆ ಬೆಂಗಳೂರು ನಗರ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯ 96 ಗ್ರಾಪಂಗಳಲ್ಲಿ ನಡೆಯಲಿದೆ.

Advertisement

ಮಕ್ಕಳ ಹಸಿವಿನ ತಾರತಮ್ಯ ನಿವಾರಣೆ, ಶಾಲೆಯಿಂದ ಹೊರಗುಳಿಯದಂತೆ ನೋಡಿಕೊಳ್ಳುವುದು ಸೇರಿದಂತೆಮಕ್ಕಳಹಲವು ರೀತಿಯಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯ್ತಿ ರಾಜ್‌ ಇಲಾಖೆ”ಮಕ್ಕಳ ಹಕ್ಕುಗಳ ಗ್ರಾಮ ಸಭೆ’ ಯೋಜನೆ ರೂಪಿಸಿದೆ.

96 ಗ್ರಾಪಂನಲ್ಲಿ ಸಭೆ: ಕೋವಿಡ್‌ ಹಿನ್ನೆಲೆಯಲ್ಲಿಸರ್ಕಾರ ಈಗಾಗಲೇ ಮಾರ್ಗ ಸೂಚಿಗಳನ್ನು ಪ್ರಕಟಿಸಿದೆ. ಅದನ್ನು ಪಾಲನೆ ಮಾಡಿಕೊಂಡು ನವೆಂಬರ್‌ನಿಂದ 2021 ಜನವರಿ 24ರ ವರೆಗೆ ಬೆಂಗಳೂರು ನಗರಜಿಲ್ಲಾ ಪಂಚಾಯ್ತಿ ವ್ಯಾಪ್ತಿಯ 96 ಗ್ರಾಪಂಗಳಲ್ಲಿ ಮಕ್ಕಳ ಹಕ್ಕುಗಳ ಗ್ರಾಮ ಸಭೆ ನಡೆಯಲಿದೆ. ಮಕ್ಕಳ ಪರಿಸ್ಥಿತಿಯನ್ನುತಳಮಟ್ಟದಲ್ಲೇ ಗಮನಿಸಿ ಅದಕ್ಕೆ ಪರಿಹಾರ ಕಂಡುಕೊಳ್ಳುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಅಧಿಕಾರಿಗಳಿಗೆ ಸೂಚನೆ: ಗ್ರಾಪಂಗಳಲ್ಲಿ ವಿವಿಧ ಭಾಗೀದಾರರ ಸಹ ಭಾಗಿತ್ವದಲ್ಲಿ ಪೂರ್ವ ಸಿದ್ಧತೆಗಾಗಿ ಸಭೆ ನಡೆಸುವಂತೆ ಈಗಾಗಲೇಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಹಾಗೆಯೇ ಗ್ರಾಮ ಸಭೆಯ ಹತ್ತು ವಾರಗಳಕಾರ್ಯ ಚಟುವಟಿಕೆಗಳ ವೇಳಾ ಪಟ್ಟಿ ಮತ್ತುಸಾಧಿಸಬೇಕಾದ ಗುರಿಗಳ ಕುರಿತ ಕಾರ್ಯಯೋಜನೆ ತಯಾರಿಸಿ, ಕಾರ್ಯಕ್ರಮಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಸಂಬಂಧ ಪಂಚಾಯ್ತಿ ರಾಜ್‌ ಇಲಾಖೆ ಸುತ್ತೋಲೆಯನ್ನುಕೂಡ ಹೊರಡಿಸಿದೆ.

ಸಭೆಯಲ್ಲಿ ಯಾರ್ಯಾರು ಭಾಗಿ: ಮಕ್ಕಳಗ್ರಾಮ ಸಭೆಯಲ್ಲಿ ಸ್ಥಳೀಯ ಗ್ರಾಮಾಆಡಳಿತ,ಪಿಡಿಒ, ಶಾಲಾ ಮುಖ್ಯ ಶಿಕ್ಷಕರು, ಎಸ್‌ಡಿಎಂಸಿ ಸದಸ್ಯರು, ಆಶಾ ಕಾರ್ಯಕರ್ತೆಯರು, ಶಿಕ್ಷಣ ಇಲಾಖೆ ಅಧಿಕಾರಿಗಳು, ಸ್ವ ಸಹಾಯ ಸಂಘಗಳ ಪ್ರತಿನಿಧಿಗಳು, ಮಹಿಳಾ ಮತ್ತುಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು, ಅಂಗನವಾಡಿ ಶಿಕ್ಷಕಿಯರಿರುತ್ತಾರೆ. ಈ ಸಭೆಯಲ್ಲಿ ಮಕ್ಕಳ ಹಲವು ರೀತಿಯಸಮಸ್ಯೆಗಳಿಗೆ ಪರಿಹಾರ ಸಿಗಲಿದೆ ಎಂದುಬೆಂಗಳೂರು ನಗರ ಜಿಲ್ಲಾ ಪಂಚಾಯ್ತಿಯ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

Advertisement

ಗ್ರಾಮ ಸಭೆ ನಿಗದಿಗೆ ಸೂಚನೆ :  ಗ್ರಾಪಂ ಮಟ್ಟದ ಮಕ್ಕಳ ಹಕ್ಕುಗಳ ಗ್ರಾಮ ಸಭೆಯನ್ನು ಆಯಾ ತಾಲೂಕುಕಾರ್ಯನಿರ್ವಾಹಕ ಅಧಿಕಾರಿಗಳು ಸಂಬಂಧ ಪಟ್ಟ ಗ್ರಾಪಂ ಆಡಳಿತಾಧಿಕಾರಿ ಗಳೊಂದಿಗೆ ಸಮಾಲೋಚನೆ ನಡೆಸಿ ನಿಗದಿತ ವೇಳಾ ಪಟ್ಟಿಯಂತೆ ಗ್ರಾಮ ಸಭೆ ನಡೆಸುವಂತೆ ಪಂಚಾಯ್ತಿ ರಾಜ್‌ ಇಲಾಖೆ ಸುತ್ತೋಲೆಯಲ್ಲಿ ತಿಳಿಸಿದೆ.ಕೋವಿಡ್‌ ಹಿನ್ನೆಲೆಯಲ್ಲಿ ಹೆಚ್ಚು ದೊಡ್ಡದಾದ ಆವರಣವಿರುವ ಸೂಕ್ತ ಸ್ಥಳದಲ್ಲಿ ನಡೆಸುವಂತೆ ಇಲಾಖೆ ಸೂಚನೆ ನೀಡಿದೆ.

ಮಕ್ಕಳ ದನಿ ಪೆಟ್ಟಿಗೆ :  ಪ್ರತಿ ಗ್ರಾಪಂಯಿಂದ ಮಕ್ಕಳ ಹಕ್ಕುಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ “ಫೇಸ್‌ ಬುಕ್‌ ಪೇಜ್‌’ ರಚಿಸಲು ಸೂಚಿಸಲಾಗಿದೆ. ಹಾಗೆಯೇ ಫೇಸ್‌ಬುಕ್‌ ಪೇಜ್‌ ಅನ್ನು ಆಯಾ ಶಾಲಾ ಶಿಕ್ಷಕರು, ಸ್ಥಳೀಯ ಸ್ವಯಂ ಸೇವಾ ಸಂಘಟನೆಗಳ ಮೂಲಕ ಮಕ್ಕಳಿಗೆ ತಿಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮಕ್ಕಳಿಂದ ಬಂದಂತಹ ದೂರುಗಳನ್ನು”ಮಕ್ಕಳ ಗ್ರಾಮ ಸಭೆ’ಯಲ್ಲಿ ಮಂಡಿಸುವಂತೆ ತಿಳಿಸಲಾಗಿದೆ. ಜತೆಗೆ ಮಕ್ಕಳು ತಮ್ಮ ಸಮಸ್ಯೆ ಮತ್ತು ಬೇಡಿಕೆಗಳನ್ನು ಬರೆದು ಹಾಕಲು ಅನುಕೂಲವಾಗಲು”ಮಕ್ಕಳದನಿಪೆಟ್ಟಿಗೆ’ ತಯಾರಿಸಲು ಸೂಚಿಸಲಾಗಿದೆ. ಇಂತಹ ಪೆಟ್ಟಿಗಳನ್ನು ಶಾಲೆ, ಮಕ್ಕಳ ಪಾಲನಾ ಕೇಂದ್ರ, ಅಂಗನ ವಾಡಿ ಕೇಂದ್ರ, ಗ್ರಾಪಂ ಕಚೇರಿ ಸೇರಿದಂತೆ ಇನ್ನಿತರ ಸಾರ್ವಜನಿಕ ಸ್ಥಳಗಳಲ್ಲಿ ಇರಿಸುವಂತೆ ಸಂಬಂಧಪಟ್ಟಅಧಿಕಾರವರ್ಗಕ್ಕೆ ಸೂಚಿಸಲಾಗಿದೆ.

ಕೋವಿಡ್‌ ಮಾರ್ಗ ಸೂಚಿಗಳನ್ನು ಪಾಲನೆ ಮಾಡಿ “ಮಕ್ಕಳ ಹಕ್ಕುಗಳ ಗ್ರಾಮ ಸಭೆ’ ನಡೆಸುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಸುತ್ತೋಲೆ ಹೊರಡಿಸಿದೆ. ಇಲಾಖೆಯ ಆದೇಶದ ರೀತಿಯಲ್ಲೇ ಗ್ರಾಮಸಭೆ ನಡೆಯಲಿದೆ. –ಆರ್‌.ರಾಜೇಶ್‌, ಪಿಡಿಒ, ರಾಜಾನುಕುಂಟೆ

Advertisement

Udayavani is now on Telegram. Click here to join our channel and stay updated with the latest news.

Next