ಮಡಿಕೇರಿ : ವಾಲ್ನೂರು -ತ್ಯಾಗತ್ತೂರು ಗ್ರಾ. ಪಂ.ಗೆ ಹೊಸ ಕಂಟಕವೊಂದು ಎದುರಾಗಿದೆ. ಪಂಚಾಯತ್ ಕಚೇರಿ ಸೇರಿದಂತೆ ತನ್ನ ವ್ಯಾಪ್ತಿಗೆ ಒಳಪಡುವ ಎಲ್ಲ ಕಟ್ಟಡಗಳಿರುವ ಜಮೀನು ಖಾಸಗಿ ವ್ಯಕ್ತಿಗಳಿಗೆ ಸೇರಿದ್ದು ಎನ್ನುವ ಮಾಹಿತಿ ಬಹಿರಂಗಗೊಂಡಿದೆ.
1965ರ ಅಕ್ಟೋಬರ್ 6ರಂದು ಉದ್ಘಾಟನೆಗೊಂಡ ಪಂಚಾಯತ್ ಕಚೇರಿ ಇರುವ ಪ್ರದೇಶ ಪಂಚಾಯತ್ ಹೆಸರಿನಲ್ಲಿ ಇಲ್ಲ ಎನ್ನುವುದು ಸರ್ವೆಯ ಮೂಲಕ ತಿಳಿದು ಬಂದಿದೆ. ಪಂಚಾಯತ್ ಹೆಸರಿಗೆ ಇಲ್ಲಿಯವರೆಗೆ ದಾಖಲೆ ಮಾಡಿಕೊಳ್ಳದೆ ತನ್ನದೇ ಜಮೀನು ಎಂಬ ಭ್ರಮೆಯಡಿ ವಿವಿಧ ಕಟ್ಟಡಗಳು ಇಲ್ಲಿ ನಿರ್ಮಾಣಗೊಂಡಿವೆ. ಇತ್ತೀಚೆಗೆ ಶಾಸಕರು ನೂತನ ಕಚೇರಿ ಕಟ್ಟಡಕ್ಕೂ ಭೂಮಿಪೂಜೆ ನೆರವೇರಿಸಿ ಕಾಮಗಾರಿ ಆರಂಭಗೊಂಡಿದೆ.
ಹಳೆಯ ಕಚೇರಿ, ನೂತನ ಡಿಜಿಟಲ್ ಗ್ರಂಥಾಲಯ, ಅಂಚೆ ಕಚೇರಿ, ಇತ್ತೀಚೆಗೆ ಉದ್ಘಾಟನೆಗೊಂಡ ಕಸ ವಿಲೇವಾರಿ ಘಟಕದ ಕಟ್ಟಡಗಳು ಇಲ್ಲಿವೆ. ಇವುಗಳಿರುವ ಭೂಮಿ ಗ್ರಾ.ಪಂ.ಗೆ ಸೇರಿಲ್ಲ.
ಸರ್ವೆ ಸಂಖ್ಯೆ 119/1ರ ಜಾಗದ ಆರ್‌ಟಿಸಿ ಬೀರಯ್ಯ, ಲೀಲಾವತಿ, ಬೋಜಮ್ಮ, ಪ್ರೇಮಕುಮಾರಿ ಹಾಗೂ ಮಂಜುಳಾ ಅವರ ಹೆಸರಿನಲ್ಲಿದೆ. ಸ. ಸಂ. 122ರ ಜಾಗ ಬಸವೇಶ್ವರ ದೇವರ ಜಾಗ ಎಂದು ಆರ್‌ಟಿಸಿ ಇದೆ. ಈ ಮಾಹಿತಿಗೆ ಗ್ರಾ. ಪಂ. ದಿಗ್ಬ†ಮೆ ವ್ಯಕ್ತಪಡಿಸಿದ್ದರೆ, ಖಾಸಗಿ ವ್ಯಕ್ತಿಗಳು ಪಂಚಾಯತ್ ಅಧೀನದಲ್ಲಿರುವ ಜಾಗ ನಮಗೆ ಸೇರಬೇಕೆಂದು ಜಿಲ್ಲಾಡಳಿತ ಹಾಗೂ ಜಿ.ಪಂ. ಮೊರೆ ಹೋಗಿದ್ದಾರೆ.
ಇದನ್ನೂ ಓದಿ : ಮಂಗಳೂರು ಅಂ.ರಾ.ವಿಮಾನ ನಿಲ್ದಾಣ: 1 ತಿಂಗಳಲ್ಲಿ 2.19 ಕೋ.ರೂ. ಮೌಲ್ಯದ ಚಿನ್ನ ವಶ !