Advertisement
ಗ್ರಾಪಂ ಚುನಾವಣೆ ಫಲಿತಾಂಶ ಪ್ರಕಟಗೊಂಡ ಬೆನ್ನಲ್ಲೇ ಇದೀಗ ಅಧ್ಯಕ್ಷ-ಉಪಾಧ್ಯಕ್ಷ ಹುದ್ದೆಗೆ ಏರಲುಕಸರತ್ತು ತೀವ್ರಗೊಂಡಿದೆ. ಪ್ರತಿ ಪಂಚಾಯ್ತಿಯಲ್ಲೂ ಗೆದ್ದವರ ಗುಂಪು ರಚಿಸುತ್ತಿರುವ ರಾಜಕೀಯ ಪಕ್ಷಗಳು ಮೀಸಲಾತಿ ಪ್ರಕಟಗೊಳ್ಳುವ ಮುನ್ನವೆ ಬಹುಮತಕ್ಕೆ ಬೇಕಿರುವ ಸದಸ್ಯರ ಬೆಂಬಲ ಪಡೆಯಲು ಗೆದ್ದವರಿಗೆ ಗಾಳ ಹಾಕುತ್ತಿವೆ.
Related Articles
Advertisement
ಮೀಸಲು ಲೆಕ್ಕಾಚಾರ: ಚುನಾವಣಾ ಆಯೋಗ ಗ್ರಾಪಂ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳನ್ನು ವರ್ಗವಾರುನಿಗದಿಪಡಿಸಲು ಎಲ್ಲ ಜಿಲ್ಲಾ ಧಿಕಾರಿಗಳಿಗೆ ಆದೇಶ ಪತ್ರ ರವಾನಿಸಿದ್ದು ಜಿಲ್ಲಾ ಧಿಕಾರಿಗಳು ಮೀಸಲಾತಿ ಪ್ರಕಟಿಸಬೇಕಿದೆ. ಆ ನಂತರವೇ ಹಳ್ಳಿ ರಾಜಕೀಯ ಮತ್ತೂಮ್ಮೆ ಗರಿಗೆದರಲಿದೆ. ಆದರೆ, ಈ ಹಿಂದಿನ ಹಾಗೂ ಮುಂದೆ ಪ್ರಕಟಗೊಳ್ಳಬಹುದಾದ ಮೀಸಲಾತಿ ಬಗ್ಗೆ ಲೆಕ್ಕ ಹಾಕಿ ಇಂತಹದೇ ಮೀಸಲಾತಿ ಸಿಗಬಹುದು ಎಂಬಅಂದಾಜಿನ ಮೇಲೆ ರಾಜಕೀಯ ಚಟುವಟಿಕೆಗಳು ಜೋರಾಗಿವೆ. ಇಲ್ಲಿ ಯಾವ ಮೀಸಲಾತಿ ಬಂದರೆ ಯಾರಿಗೆ ಅಧಿಕಾರ ನೀಡುವುದು ಎಂಬ ವಿಚಾರ ಇಟ್ಟುಕೊಂಡು ಬೆಂಬಲಿತ ಸದಸ್ಯರ ಗುಂಪು ರಚಿಸಲಾಗುತ್ತಿದೆ. ಸಾಮಾನ್ಯ ವರ್ಗದ ಮೀಸಲಾತಿ ಬರಬಹುದಾದ ಗ್ರಾಪಂಗಳಲ್ಲಿ ಅತ್ಯಂತ ತುರುಸಿನ ಚಟುವಟಿಕೆಗಳು ನಡೆದಿವೆ. ಯಾವ ಪಕ್ಷದ ಬೆಂಬಲ ಪಡೆಯದೇ ಪಕ್ಷೇತರವಾಗಿ ಗೆದ್ದಿರುವ ಅಭ್ಯರ್ಥಿಗಳಿಗೆ ಭಾರಿ ಬೇಡಿಕೆಯಿದ್ದು, ಚುನಾವಣೆಗೆ ಖರ್ಚು ಮಾಡಿದ ಹಣವನ್ನೆಲ್ಲ ಹಿಂಪಡೆಯುವ ಲೆಕ್ಕಾಚಾರದಲ್ಲಿ ಕೆಲವರಿದ್ದರೇ, ಮಿಸಲಾತಿಯಲ್ಲಿ ಅವಕಾಶ ಸಿಕ್ಕರೆ ಅ ಧಿಕಾರ ಪಡೆದೇ ತೀರುವ ಹುಮ್ಮಸ್ಸಿನಲ್ಲಿ ಮತ್ತೆ ಕೆಲವರಿದ್ದಾರೆ.
ಕುದುರೆ ವ್ಯಾಪಾರ: ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿಯಲ್ಲಿ ಅವಕಾಶ ಸಿಕ್ಕರೆ ಸದಸ್ಯರನ್ನು ಪ್ರವಾಸಿ ತಾಣಗಳಿಗೆ, ದೇವಸ್ಥಾನಗಳಿಗೆ ಕರೆದೊಯ್ಯಬೇಕು ಎಂಬ ಲೆಕ್ಕಾಚಾರ ಕೆಲ ಸದಸ್ಯರು ನಡೆಸಿದ್ದಾರೆ.
ಪ್ರತಿಷ್ಠೆಗೆ ಬಿದ್ದ ಪಕ್ಷಗಳು: ತಮ್ಮ ಬೆಂಬಲಿತ ಅಭ್ಯರ್ಥಿಗಳೇ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಸಾಧಿ ಸಿದ್ದಾರೆ ಎಂದು ಹೇಳಿಕೊಳ್ಳುತ್ತಿರುವ ಬಿಜೆಪಿ, ಕಾಂಗ್ರೆಸ್, ಜೆಡಿಎಸ್‌ಅಧ್ಯಕ್ಷ-ಉಪಾಧ್ಯಕ್ಷ ಹುದ್ದೆಗೇರಲು ಅಷ್ಟೇ ಪ್ರತಿಷ್ಠೆಗೆ ಬಿದ್ದಿವೆ. ಹಲವೆಡೆ ಸ್ಪಷ್ಟ ಬಹುಮತಕ್ಕೆ ಬೇಕಾದ ಸದಸ್ಯರ ಕೊರತೆಯನ್ನು ಮೂರೂ ಪಕ್ಷಗಳ ಬೆಂಬಲಿತರಗುಂಪುಗಳು ಎದುರಿಸುತ್ತಿವೆ. ಹೀಗಾಗಿ ಇಲ್ಲಿ ಕೊರತೆ ಇರುವ ಸ್ಥಾನಗಳನ್ನು ತುಂಬಲು ಎಲ್ಲಿಲ್ಲದ ಕಸರತ್ತು ನಡೆಸಲಾಗುತ್ತಿದೆ.
ಗ್ರಾಪಂ ಅಧಿಕಾರ ಯಾರಿಗೆ ಹೋಗಲಿ. ಮೊದಲು ಊರ ಉದ್ಧಾರ ಮಾಡುವವರು ಬೇಕಾಗಿದೆ. ಗ್ರಾಮದಲ್ಲಿನ ಕುಡಿಯುವ ನೀರು, ಚರಂಡಿ ವ್ಯವಸ್ಥೆ, ಗ್ರಾಮ ಸ್ವಚ್ಛತೆ ಸಮರ್ಪಕವಾಗಿ ಆಗಬೇಕು. ಪಿಡಿಒಗಳು ನಿತ್ಯ ಪಂಚಾಯತ್‌ಗೆ ಬರುವಂತಾಗಬೇಕು.ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷರೇ ಪಿಡಿಒ ಮನೆಗೆ ಹೋಗುವಂತಾಗಬಾರದು. ಗ್ರಾಮದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕು. – ಅನ್ನಪೂರ್ಣ ಹಿರೇಮಠ, ರೈತ ಮಹಿಳೆ, ಮುಳಸಾವಳಗಿ
ಗ್ರಾಮಗಳು ಸಾಕಷ್ಟು ಸಮಸ್ಯೆಗಳ ಆಗರಗಳಾಗಿವೆ. ಗ್ರಾಪಂಅಧ್ಯಕ್ಷ-ಉಪಾಧ್ಯಕ್ಷ ಯಾರೇ ಆಗಲಿಸಮಸ್ಯೆಗಳಿಗೆ ಸ್ಪಂ ದಿಸಬೇಕು. ಸರಕಾರದಯೋಜನೆಗಳನ್ನು ಸರಿಯಾಗಿ ಅನುಷ್ಠಾನಮಾಡಬೇಕು. ಮಹಿಳೆಯರಿಗೆಸಾರ್ವಜನಿಕ ಶೌಚಾಲಯಗಳನ್ನು ಸುಸಜ್ಜಿತವಾಗಿನಿರ್ಮಿಸಬೇಕು. ಗ್ರಾಮಗಳಲ್ಲಿ ಒಳಚರಂಡಿ ವ್ಯವಸ್ಥೆ ಮೊದಲು ಕಲ್ಪಿಸಬೇಕು. ಆಗ ಮನೆಗೊಂದು ಶೌಚಾಲಯನಿರ್ಮಾಣವಾಗುತ್ತವೆ.– ಕಸ್ತೂರಿಬಾಯಿ ಹೂಗಾರ ಗ್ರಾಮಸ್ಥೆ, ಅಂತರಗಂಗಿ
ಮಕ್ಕಳ ಆರೋಗ್ಯ, ರಕ್ಷಣೆ ಮತ್ತು ಶಿಕ್ಷಣಅಭಿವೃದ್ಧಿಗಾಗಿತಳಮಟ್ಟದಿಂದಲೇ ಅವಶ್ಯಕ ಸುಧಾರಣಾ ಕ್ರಮ ಕೈಗೊಳ್ಳಬೇಕು. ಮಕ್ಕಳಿಗೆ ಸಂಬಂಧಿ ಸಿದ ಸಮಗ್ರ ಅಭಿವೃದ್ಧಿ ಅಂಶಗಳ ಅನುಷ್ಠಾನಕ್ಕಾಗಿ ಪ್ರತಿಗ್ರಾಮಗಳಲ್ಲಿ ಗ್ರಾಮ ಸಭೆ ಕಡ್ಡಾಯ ಮತ್ತುಸಮರ್ಪಕವಾಗಿ ನಡೆಸಬೇಕು. – ಜ್ಯೋತಿ ಪೂಜಾರ ಕಾರ್ಯದರ್ಶಿ, ಮಕ್ಕಳ ಕಲ್ಯಾಣ ಪ್ರತಿಷ್ಠಾನ, ಸಿಂದಗಿ
–ರಮೇಶ ಪೂಜಾರ