Advertisement

ಕನಿಷ್ಟ ವೇತನಕ್ಕೆ ಗ್ರಾಪಂ ಗ್ರಂಥಪಾಲಕರ ಆಗ್ರಹ

04:44 PM Sep 30, 2020 | Suhan S |

ಬೀದರ: ಗ್ರಾಪಂ ಗ್ರಂಥಾಲಯ ಗ್ರಂಥಪಾಲಕರಿಗೆ ಕಾರ್ಮಿಕರ ಕಾಯ್ದೆಯಂತೆ ವೇತನ ನೀಡುವುದು ಸೇರಿದಂತೆ ಪ್ರಮುಖ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾ ಸರ್ಕಾರಿ ಗ್ರಾಮೀಣ ಗ್ರಂಥಾಲಯಗಳ ನೌಕರರ ಸಂಘದಿಂದ ಪ್ರತಿಭಟನೆ ನಡೆಸಲಾಯಿತು.

Advertisement

ನಗರದ ಅಂಬೇಡ್ಕರ್‌ ವೃತ್ತದಿಂದ ಡಿಸಿ ಕಚೇರಿವರೆಗೆ ನೌಕರರು ರ್ಯಾಲಿ ನಡೆಸಿ ಸಿಎಂಗೆ ಬರೆದ ಮನವಿ ಪತ್ರ ಜಿಲ್ಲಾಡಳಿತಕ್ಕೆ ಸಲ್ಲಿಸಿದರು. ಪ್ರತಿಭಟನೆ ರ್ಯಾಲಿಗೆ ವಿಶ್ವ ಕನ್ನಡಿಗರ ಸಂಸ್ಥೆ, ಕರವೇ ಕನಕ ರಕ್ಷಣಾ ವೇದಿಕೆ ಕಾರ್ಯಕರ್ತರು ಬೆಂಬಲಿಸಿ ಭಾಗವಹಿಸಿದ್ದರು.

ಗ್ರಾಮೀಣ ಭಾಗದ ಗ್ರಾಪಂಗಳಲ್ಲಿ 33 ವರ್ಷಗಳಿಂದ ತಿಂಗಳಿಗೆ 300ರಿಂದ 7000ರೂ. ವರೆಗೆ ಗೌರವಧನ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿರುವ ಗ್ರಂಥಪಾಲಕರಿಗೆ ಕಾರ್ಮಿಕಕಾಯ್ದೆಯಂತೆ ತಿಂಗಳಿಗೆ ಕನಿಷ್ಟ 13,200 ರೂ. ವೇತನ ನೀಡಬೇಕು. ಗ್ರಂಥಪಾಲಕರಿಗೆ ತಿಂಗಳ ವೇತನ ನೀಡುವಲ್ಲಿ ವಿಳಂಬ ಹಾಗೂ ತಾರತಮ್ಯ ಮಾಡುತ್ತಿರುವ ಪಿಡಿಒಗಳ ಮೇಲೆ ಕ್ರಮ ಜರುಗಿಸಬೇಕು. ಗ್ರಾಪಂ ಗ್ರಂಥಲಯಗಳಿಗೆ ಸರ್ಕಾರದ ವಿವಿಧ ಯೋಜನೆಗಳ ಮಾಹಿತಿ ತಿಳಿಸಿಕೊಡುವ ಮತ್ತು ದಿನ ಪತ್ರಿಕೆಗಳು ಒದಗಿಸುವುದು ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ, ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಅವರಿಗೆ ಅನುಕೂಲವಾಗುವ ಪುಸ್ತಕಗಳನ್ನು ಒದಗಿಸಬೇಕು. ಗ್ರಾಮೀಣ ಗ್ರಂಥಾಲಯಗಳ ಮೂಲಕ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಮಾಹಿತಿ ತಂತ್ರಜ್ಞಾನ ಕಲಿಸುವ ನಿಯತಕಾಲಿಕೆಗಳು, ಕಂಪ್ಯೂಟರ್‌ ತರಬೇತಿ ಕೊಡಿಸುವ ಕೆಲಸ ಮಾಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next