Advertisement

ಗ್ರಾಪಂನಲ್ಲಿ ಗೆದ್ದು ಕಾಂಗ್ರೆಸ್‌ ಬಲಪಡಿಸಿ: ಧ್ರುವ

07:13 PM Dec 13, 2020 | Suhan S |

ನಂಜನಗೂಡು: ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್‌ ಬೆಂಬಲಿತರು ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದು ಪಕ್ಷದ ಅಡಿಪಾಯ ಭದ್ರಗೊಳಿಸುವುದರ ಜೊತೆಗೆ ನೀವು ಕೂಡ ಬಲಿಷ್ಠರಾಗಿ ಎಂದು ಮಾಜಿ ಸಂಸದ ಆರ್‌.ಧ್ರುವನಾರಾಯಣ ಮನವಿ ಮಾಡಿದರು.

Advertisement

ನಗರದ ಕನಕ ಭವನದಲ್ಲಿ ಶನಿವಾರ ನಡೆದ ವರುಣಾವಿಧಾನಸಭಾ ಕ್ಷೇತ್ರದ ಗ್ರಾಮ ಜನಾಧಿಕಾರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಆಯಾ ಗ್ರಾಮದ ಜನತೆ  ಒಂದಾಗಿ ಚರ್ಚಿಸಿ ಮಿಸಲಾತಿಯ ಆಧಾರದಲ್ಲಿ ಅಭ್ಯರ್ಥಿಗಳಾಗಿರುವ ನಿಮ್ಮ ಬೆಂಬಲಕ್ಕೆ ನಾವಿದ್ದೇವೆ. ಯಾವುದೇ ಕಾರಣಕ್ಕೂ ನಿಮ್ಮ ನಿಮ್ಮಲ್ಲಿ ಪೈಪೋಟಿ ಆಗದಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ನೀವು ಅಧಿಕಾರ ಪಡೆದರೆ ಮಾತ್ರ ಪಕ್ಷದ ಅಧಿಕಾರದ ಹಾದಿ ಸುಲಭವಾಗಲಿದೆ. ಬಿಜೆಪಿ ಸರ್ಕಾರವು ವರುಣಾ ವಿಧಾನ ಸಭಾ ಕ್ಷೇತ್ರದ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡುವ ಬದಲು ಹಿಂದಿನ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಮಂಜೂರು ಆಗಿದ್ದ ಅನುದಾನವನ್ನೂ ವಾಪಸ್‌ ಪಡೆದಿದೆ. ಬಿಜೆಪಿ ಅಧಿಕಾರದಲ್ಲಿ ಮುಂದುವರಿದರೆ ಈಗಾಗಲೆ 10 ಕೆಜಿಯಿಂದ 5ಕ್ಕೆ ಇಳಿದಿರುವಪಡಿತರಅಕ್ಕಿ ಸಂಪೂರ್ಣವಾಗಿ ಸ್ಥಗಿತವಾಗುವ ಸಾಧ್ಯತೆ ಇದೆ.ಈ ಜನ ವಿರೋಧಿ ಧೋರಣೆಯನ್ನು ಗ್ರಾಮಾಣ ಜನತೆಗೆ ತಿಳಿಸುವುದೇ ನಮ್ಮ ನೀತಿಯಾಗಬೇಕು ಎಂದರು.

ಜೆಡಿಎಸ್‌ ದುರ್ಬಲ: ಜಿಲ್ಲಾಧ್ಯಕ್ಷ ವಿಜಯ ಕುಮಾರ್‌, ಜೆಡಿಎಸ್‌ ದುರ್ಬಲವಾಗಿರುವ ಈ ಭಾಗದಲ್ಲಿ ಬಿಜೆಪಿ ನಮಗೆ ಲೆಕ್ಕಕ್ಕಿಲ್ಲ. ಆದರೂ ನಾವು ಎಚ್ಚರಿಕೆವಹಿಸಬೇಕು ಎಂದರು. ಸಮಾವೇಶದಲ್ಲಿ ವಿಧಾನ ಪರಿಷತ್‌ ಮಾಜಿ ಸದಸ್ಯಧರ್ಮಸೇನಾ, ಮಾಜಿ ಶಾಸಕ ಕಳಲೆ ಕೇಶವ ಮೂರ್ತಿ, ಮುಖಂಡರಾದ ಎಸ್‌.ಸಿ.ಬಸವರಾಜು, ಬಿ.ಎಂ.ರಾಮು, ಮಾರುತಿ, ಗುರುಪಾದಸ್ವಾಮಿ, ನಂಜಪ್ಪ, ತಗಡೂರು ಬ್ಲಾಕ್‌ ಅಧ್ಯಕ್ಷ ರಂಗಸ್ವಾಮಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next