Advertisement
ಡಿ.22ರಂದು ರಾಮನಗರ ತಾಲೂಕಿನ ಎಲ್ಲಾ 20 ಗ್ರಾಪಂ, ಕನಕಪುರ ತಾಲೂಕಿನ 43 ಗ್ರಾಪಂಗಳಲ್ಲಿ 36 ಗ್ರಾಪಂಗೆ ಚುನಾವಣೆ ನಡೆಯಲಿದೆ. ಚನ್ನಪಟ್ಟಣ ತಾಲೂಕಿನ ಎಲ್ಲಾ 32 ಮತ್ತು ಮಾಗಡಿಯ 32ಗ್ರಾಪಂನಲ್ಲಿ 30 ಗ್ರಾಪಂಗೆ ಡಿಸೆಂಬರ್ 27ರಂದು ಚುನಾವಣೆ ನಡೆಯಲಿದೆ.
Related Articles
Advertisement
359 ಸದಸ್ಯರು ಆಯ್ಕೆ: ರಾಮನಗರ ತಾಲೂಕಿನ 20 ಗ್ರಾಪಂನ 187 ಕ್ಷೇತ್ರಗಳಿಂದ 359 ಸದಸ್ಯರು ಆಯ್ಕೆಯಾಗಲಿದ್ದಾರೆ. ಬೈರಮಂಗಲ ಗ್ರಾಪಂನ 9 ಕ್ಷೇತ್ರಗಳಿಂದ 21 ಸದಸ್ಯರು, ಕಂಚುಗಾರನಹಳ್ಳಿಯ 10 ಕ್ಷೇತ್ರಗಳಿಂದ 17 ಸದಸ್ಯರು,ಗೋಪಹಳ್ಳಿ ಗ್ರಾಪಂನ 13 ಕ್ಷೇತ್ರಗಳಿಂದ 26, ಮಂಚನಾಯ್ಕನಹಳ್ಳಿಯ 14 ಕ್ಷೇತ್ರಗಳಿಂದ 34 ಸದಸ್ಯರು, ಬನ್ನಿಕುಪ್ಪೆಯ 11 ಕ್ಷೇತ್ರಗಳಿಂದ 20 ಸದಸ್ಯರು, ಹರೀಸಂದ್ರದ 10 ಕ್ಷೇತ್ರಗಳಿಂದ 16, ಬಿಳಗುಂಬದ 10 ಕ್ಷೇತ್ರಗಳಿಂದ 18, ಸುಗ್ಗನಹಳ್ಳಿಯ 14 ಕ್ಷೇತ್ರಗಳಿಂದ 20, ಮಾಯಗಾನಹಳ್ಳಿಯ 11 ಕ್ಷೇತ್ರಗಳಿಂದ 21, ಕೂಟಗಲ್ಲು ಗ್ರಾ
ಪಂನ 9 ಕ್ಷೇತ್ರಗಳಿಂದ 19 ಸದಸ್ಯರು, ದೊಡ್ಡಗಂಗವಾಡಿಯ 4 ಕ್ಷೇತ್ರಗಳಿಂದ 9, ಅಕ್ಕೂರಿನ 4 ಕ್ಷೇತ್ರಗಳಿಂದ 8, ಹುಲಿಕೆರೆ ಗುನ್ನೂರಿನ 10 ಕ್ಷೇತ್ರಗಳಿಂದ 17, ಜಾಲಮಂಗಲದ 5 ಕ್ಷೇತ್ರಗಳಿಂದ 11, ಲಕ್ಷ್ಮೀಪುರದ 11 ಕ್ಷೇತ್ರಗಳಿಂದ 18, ಕೈಲಾಂಚದ 7 ಕ್ಷೇತ್ರಗಳಿಂದ 15, ಹುಣಸನಹಳ್ಳಿಯ9 ಕ್ಷೇತ್ರಗಳಿಂದ21, ಬನ್ನಿಕುಪ್ಪೆ (ಕೈ) 9 ಕ್ಷೇತ್ರಗಳಿಂದ 13, ವಿಭೂತಿಕೆರೆಯ 9 ಕ್ಷೇತ್ರಗಳಿಂದ 19, ಶ್ಯಾನುಬೋಗನಹಳ್ಳಿಯ 8 ಗ್ರಾಮಪಂಚಾಯ್ತಿ ಕ್ಷೇತ್ರಗಳಿಮದ16 ಸದಸ್ಯರು ಆಯ್ಕೆಯಾಗಲಿದ್ದಾರೆ.
ಗ್ರಾಪಂ: ಮೊದಲ ಹಂತದ ವೇಳಾಪಟ್ಟಿ ಪ್ರಕಟ : ರಾಮನಗರ: ಕರ್ನಾಟಕ ಗ್ರಾಮ ಸ್ವರಾಜ್ ಮತ್ತುಪಂಚಾಯತ್ ರಾಜ್ ಅಧಿನಿಯಮ-1993 ಉಪಬಂಧಗಳ ಮೇರೆಗೆ ರಾಮನಗರ ಜಿಲ್ಲೆಯರಾಮನಗರ ಹಾಗೂ ಕನಕಪುರ ತಾಲೂಕಿನಲ್ಲಿ ಗ್ರಾಪಂ ಸದಸ್ಯರು ಅಧಿಕಾರವಧಿಯು ಮುಕ್ತಾಯವಾಗಿ ಹೊರ ಹೋಗಿರುವ ಕಾರಣದಿಂದ ತೆರವಾಗಿರುವ ಸದಸ್ಯ ಸ್ಥಾನಗಳಿಗೆ ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಅವರು ವೇಳಪಟ್ಟಿಯನ್ನು ನಿಗದಿಪಡಿಸಿದ್ದಾರೆ.
ನಾಮಪತ್ರಗಳನ್ನು ಸಲ್ಲಿಸಲು ಡಿ.11 ಕೊನೆಯ ದಿನಾಂಕ. ನಾಮಪತ್ರಗಳ ಪರಿಶೀಲನೆ ಡಿ.12 ರಂದು ನಡೆಯಲಿದೆ. ಉಮೇದುವಾರಿಕೆ ಹಿಂಪಡೆಯಲು ಡಿ.14 ಕೊನೆಯ ದಿನಾಂಕವಾಗಿದೆ. ಮತದಾನದ ಅವಶ್ಯವಿದ್ದರೆ ಡಿ.22ರ ಬೆಳಗ್ಗೆ 7ರಿಂದ ಸಂಜೆ 5 ಗಂಟೆಯವರೆಗೆ ನಡೆಯಲಿದೆ. ಮರು ಮತದಾನ ಇದ್ದಲ್ಲಿ ಡಿ.24ರ ಬೆಳಗ್ಗೆ 7ರಿಂದಸಂಜೆ 5 ಗಂಟೆಯವರೆಗೆ ನಡೆಯಲಿದೆ. ಮತ ಎಣಿಕೆಯು ಡಿ.30ರ ಬೆಳಗ್ಗೆ 8 ಗಂಟೆಗೆ ಆಯಾ ತಾಲೂಕು ಕೇಂದ್ರದಲ್ಲಿ ನಡೆಯಲಿದೆ. ಚುನಾವಣಾ ಪ್ರಕ್ರಿಯೆಯು ಡಿ.31ಕ್ಕೆ ಮುಕ್ತಾಯಗೊಳ್ಳಲಿದೆ ಎಂದು ತಿಳಿಸಿದ್ದಾರೆ.
ಪ್ರಥಮ ದಿನ 23 ನಾಮಪತ್ರ ಸಲ್ಲಿಕೆ : ಗ್ರಾಪಂ ಚುನಾವಣೆಯ ಹಿನ್ನೆಲೆಯಲ್ಲಿ ಮಂಗಳವಾರದಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿದ್ದು, ರಾಮನಗರ ತಾಲೂಕಿನಲ್ಲಿ 16 ನಾಮಪತ್ರಗಳು ಸಲ್ಲಿಕೆಯಾಗಿವೆ. 359 ಸ್ಥಾನಗಳ ಪೈಕಿ 16 ಸ್ಥಾನಗಳಿಗೆ ಮಾತ್ರ ನಾಮಪತ್ರಗಳು ಸಲ್ಲಿಕೆಯಾಗಿದ್ದು, 343 ಸ್ಥಾನಗಳಿಗೆ ನಾಮಪತ್ರಗಳು ಸಲ್ಲಿಕೆಯಾಗಿಲ್ಲ. ಕನಕಪುರ ತಾಲೂಕಿನಲ್ಲಿ7 ನಾಮಪತ್ರಗಳು ಮಾತ್ರ ಸಲ್ಲಿಕೆಯಾಗಿವೆ.612 ಸ್ಥಾನಗಳ ಪೈಕಿ7 ಸ್ಥಾನಗಳಿಗೆಮಾತ್ರ ನಾಮಪತ್ರ ಸಲ್ಲಿಕೆಯಾಗಿದ್ದು,605 ಸ್ಥಾನಗಳಿಗೆ ನಾಮಪತ್ರಗಳು ಸಲ್ಲಿಕೆಯಾಗಿಲ್ಲ.
ಸಾಮಾನ್ಯ, ಮಹಿಳಾಮೀಸಲು ಸ್ಥಾನಕ್ಕೆ ನಾಮಪತ್ರ ಸಲ್ಲಿಕೆ :
ರಾಮನಗರ: ತಾಲೂಕಿನ ಕೈಲಾಂಚ ಹೋಬಳಿ ವ್ಯಾಪ್ತಿಯ5 ಪಂಚಾಯ್ತಿಗಳ ಪೈಕಿ ಹುಣಸನಹಳ್ಳಿ, ಹುಲಿಕೆರೆ-ಗುನ್ನೂರು ಗ್ರಾಪಂಗಳಲ್ಲಿ ಮೊದಲ ದಿನದಲ್ಲಿ ಯಾವುದೇ ನಾಮಪತ್ರ ಸ್ವೀಕೃತವಾಗಲಿಲ್ಲ. ಆದರೆ, ವಿಭೂತಿಕೆರೆ ಗ್ರಾಪಂಗೆ 2, ಬನ್ನಿಕುಪ್ಪೆ ಗ್ರಾಮ ಪಂಚಾಯ್ತಿಗೆ 1, ಕೈಲಾಂಚ ಗ್ರಾಮ ಪಂಚಾಯ್ತಿಗೆ 1 ನಾಮಪತ್ರಗಳು ಸಲ್ಲಿಕೆಯಾಗಿವೆ. ಬನ್ನಿಕುಪ್ಪೆ ಸಾಮಾನ್ಯ ಕ್ಷೇತ್ರಕ್ಕೆ ಶಂಕರ್, ಕೈಲಾಂಚ ಸಾಮಾನ್ಯ ಕ್ಷೇತ್ರದಿಂದ ದಾಸೇಗೌಡ, ವಿಭೂತಿಕೆರೆ ಗ್ರಾಪಂ ವ್ಯಾಪ್ತಿಯ ಚನ್ನಮಾನಹಳ್ಳಿ ಭಾಗ 2ರಿಂದ ಸಾಮಾನ್ಯ ಸ್ಥಾನಕ್ಕೆ ಟಿ. ನಾಗೇಶ್, ಅಂಜನಾಪುರ ಮಹಿಳಾ ಮೀಸಲು ಸ್ಥಾನಕ್ಕೆ ಸಂಪಾವತಿ ನಾಮಪತ್ರ ಸಲ್ಲಿಸಿದರು.