Advertisement
ರಾಜಕೀಯ ಪಕ್ಷಗಳು ತಮ್ಮ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಅಖಾಡ ಸಿದ್ಧಪಡಿಸುತ್ತಿದ್ದು, ಅಲ್ಲಲ್ಲಿ ಚುನಾವಣಾ ಪೂರ್ವಸಭೆಗಳನ್ನು ಆಯೋಜಿಸುತ್ತಿವೆ. ತಾಲೂಕಿನ 9 ಗ್ರಾಪಂಗಳಿಗೆ ಚುನಾವಣೆ ನಡೆಯಲಿದ್ದು, 26543 ಮತದಾರರು ಮತ ಚಲಾಯಿಸಲಿದ್ದಾರೆ. ಇದರಲ್ಲಿ ಪುರುಷ ಮತದಾರರು 13097 ಹಾಗೂ ಮಹಿಳಾ ಮತದಾರರು 13446 ಇದ್ದು, ಒಟ್ಟು 48 ಮತಗಟ್ಟೆಗಳಿದ್ದು 86 ಸ್ಥಾನಗಳಿಗಾಗಿಚುನಾವಣೆ ನಡೆಯಲಿದೆ. ತಾಲೂಕಿನಲ್ಲಿ ಅಡ್ಡಗದ್ದೆ,ಬೇಗಾರ್, ಧರೆಕೊಪ್ಪ, ಮರ್ಕಲ್, ಮೆಣಸೆ,
Related Articles
Advertisement
ಹಲವು ಗ್ರಾಮದಲ್ಲಿ ಮೂಲ ಸೌಕರ್ಯದ ಕೊರತೆ, ಕುಡಿಯುವ ನೀರು, ರಸ್ತೆ, ಸೇತುವೆ ಹಾಗೂ ಕೆಲವು ಭಾಗಗಳಲ್ಲಿ ದೊಡ್ಡ ದೊಡ್ಡ ಹಳ್ಳಗಳಿಗೆ ಈಗಲೂಕಾಲುಸಂಕದಲ್ಲಿಯೇ ಸಂಚರಿಸಬೇಕಾದ ಅನಿವಾರ್ಯ ಸ್ಥಿತಿ. ವಸತಿ ಯೋಜನೆಗೆ ಕೆಲವು ಗ್ರಾಪಂನಲ್ಲಿ ಜಾಗ ಗುರುತಿಸಲ್ಪಟ್ಟಿದ್ದರು ಮೀಸಲು ಅರಣ್ಯ ಘೋಷಣೆ, ಸೊಪ್ಪಿನಬೆಟ್ಟ ಇತ್ಯಾದಿ ಕಾರಣಗಳಿಂದ ನನೆಗುದಿಗೆ ಬಿದ್ದಿದೆ.
ಒಟ್ಟಾರೆ ಗ್ರಾಮೀಣ ಭಾಗದ ಜನರ ಪಾಲಿಗೆ ಸಂಕಷ್ಟಗಳೇ ಜಾಸ್ತಿಯಾಗಿದೆ. ಸೌಲಭ್ಯ ವಂಚಿತ ಗ್ರಾಮಸ್ಥರು ಇದೇ ಸಂದರ್ಭ ಬಳಸಿಕೊಂಡು ಸ್ಪರ್ಧಾಳುಗಳಲ್ಲಿ ಸವಲತ್ತು ಕೇಳುವ ತವಕದಲ್ಲಿದ್ದಾರೆ. ಸ್ಪರ್ಧಾಳುಗಳು ಸವಲತ್ತಿನ ಸವಾಲನ್ನು ಎದುರಿಸಬೇಕಿದೆ. ಕಳೆದ ಎರಡು ವರ್ಷಗಳಿಂದ ದಾಖಲೆ ಪ್ರಮಾಣದಲ್ಲಿ ತಾಲೂಕಿನಲ್ಲಿ ಅತಿವೃಷ್ಟಿಯಾಗಿದ್ದು, ಇದರ ಪರಿಣಾಮ ಜಮೀನು,
ಮನೆ ಕಳೆದುಕೊಂಡು ಸಂತ್ರಸ್ತರಾದವರು ಕೂಡ ಸ್ಪರ್ಧಾಳುಗಳಲ್ಲಿ ಬೇಡಿಕೆ ಇರಿಸಲು ಕಾಯುತ್ತಿದ್ದಾರೆ. ಗ್ರಾ.ಪಂ ಚುನಾವಣೆಯಲ್ಲಿ ಅಭ್ಯರ್ಥಿಗಳು ಸ್ವತಂತ್ರವಾಗಿ ಸ್ಪರ್ಧಿಸಬೇಕಿದೆ. ರಾಜಕೀಯ ಪಕ್ಷದ ಚಿಹ್ನೆ ಬಳಸಲು ಅವಕಾಶವಿಲ್ಲದಿದ್ದರು ಪಕ್ಷಗಳು ತಮ್ಮ ಬೆಂಬಲಿಗರನ್ನು ಕಣಕ್ಕಿಳಿಸಿ ಗ್ರಾಪಂ ಆಡಳಿತವನ್ನು ತೆಕ್ಕೆಗೆ ಪಡೆಯುವಲ್ಲಿ ಹವಣಿಸುತ್ತಿದ್ದಾರೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರ ಬಿಜೆಪಿ ಆಡಳಿತದಲ್ಲೆ ಇರುವುದರಿಂದ ಜನರ ಸಮಸ್ಯೆಗಳನ್ನು ಪರಿಹರಿಸಲು ಗ್ರಾ.ಪಂ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತರು ಆಡಳಿತಕ್ಕೆ ಬಂದರೆ ಸಹಾಯವಾಗುತ್ತದೆ. ಪ್ರಧಾನಿ ನರೇಂದ್ರ ಮೋದಿಯವರ ಅನೇಕ ಜನಪರ ಯೋಜನೆಗಳಿಂದ ಜನರು ಬಿಜೆಪಿ ಪರ ಇದ್ದಾರೆಂಬುದು ಈಗಾಗಲೇ ಸಾಬೀತಾಗಿದೆ. ತಲಗಾರು ಉಮೇಶ್, ಬಿಜೆಪಿ ಅಧ್ಯಕ್ಷರು.
ಕಳೆದ ಬಾರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಸಾಕಷ್ಟು ಅಭಿವೃದ್ಧಿ ಕಂಡಿದ್ದು, ಜನರು ಸ್ಥಳೀಯ ಚುನಾವಣೆಯಲ್ಲಿ ಜನರು ಕಾಂಗ್ರೆಸ್ ಪಕ್ಷದ ಪರವಾಗಿ ಇದ್ದಾರೆ. ಶಾಸಕ ಟಿ.ಡಿ. ರಾಜೇಗೌಡ ಕ್ಷೇತ್ರದಲ್ಲಿ ಒಳ್ಳೆಯ ಹೆಸರು ಮಾಡಿದ್ದಾರೆ. –ನಟರಾಜ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು.
ಮಾಜಿ ಪ್ರಧಾನಿ ದೇವೇಗೌಡರ ಕುಟುಂಬ ಈ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ನೀಡಿದೆ. ಜನರಿಗೆ ಮನವರಿಕೆ ಮಾಡಿಕೊಟ್ಟು ಗ್ರಾ.ಪಂ ಚುನಾವಣೆ ಎದುರಿಸಲಿದ್ದೇವೆ. – ಟಿ.ಟಿ ಕಳಸಪ್ಪ, ಜೆಡಿಎಸ್ ಅಧ್ಯಕ್ಷರು
-ರಮೇಶ್ ಕರುವಾನೆ