Advertisement

ಅಕ್ಷರದಲ್ಲಡಗಿದೆ ಸೋಲು-ಗೆಲುವಿನ ಭವಿಷ್ಯ!

06:28 PM Dec 19, 2020 | Suhan S |

ಬಳ್ಳಾರಿ: ತಾಲೂಕಿನ ಡಿ. ನಾಗೇನಹಳ್ಳಿಯ ಶ್ರೀಗುರು ಮರುಳಸಿದ್ಧಾಶ್ರಮದ ನಂಜುಂಡೇಶ್ವರ ತಾತನವರು ಡಿ. 22ರಂದುನಡೆಯಲಿರುವ ಮೊದಲ ಹಂತದ ಗ್ರಾಪಂ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳಹೆಸರಿನ ಮೊದಲ ಅಕ್ಷರವನ್ನು ಆಧರಿಸಿಅವರ ಸೋಲು-ಗೆಲುವುಗಳ ಭವಿಷ್ಯನುಡಿದಿದ್ದು ಸೋಲುವ ಅಭ್ಯರ್ಥಿಗಳು ಗೆಲ್ಲಲು ಪರಿಹಾರವನ್ನು ಸಹ ಸೂಚಿಸಿದ್ದಾರೆ.

Advertisement

ಈ ಹಿಂದೆ 2018ರಲ್ಲಿ ನಡೆದ ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲೂ ತಾತನವರು ನುಡಿದಿದ್ದ ಭವಿಷ್ಯ ನಿಜವಾಗಿತ್ತು. ಜತೆಗೆ ನೆರೆಯ ಆಂಧ್ರಪ್ರದೇಶದಲ್ಲಿ 2019ರಲ್ಲಿನಡೆದ ವಿಧಾನಸಭೆ ಚುನಾವಣೆಯಲ್ಲೂತೆಲುಗುದೇಶಂ ಪಕ್ಷ ಅಧಿ ಕಾರಕ್ಕೆ ಬರಲ್ಲ ಎಂದು ನುಡಿದಿದ್ದ ಭವಿಷ್ಯ ನಿಜವಾಗಿದ್ದು; ಇದೀಗ ಗ್ರಾಪಂ ಚುನಾವಣೆಯಲ್ಲೂ ತಾತನವರ ಭವಿಷ್ಯ ನಿಜವಾಗಲಿದೆ ಎಂದು ಭಕ್ತರು ವಿಶ್ವಾಸ ವ್ಯಕ್ತಪಡಿಸುತ್ತಾರೆ. ತಾತನವರು ನುಡಿದಿರುವ ಭವಿಷ್ಯದಂತೆ

ಬು, ಗ, ಯೆ, ತಿ, ಪೆ, ಮ, ಕೆ, ವೆ, ಚು,ಯೊ, ತು, ಗಿ, ಧ, ಪೊ, ಕೊ, ಮಿ, ಚೆ, ವೊ,ಕಿ, ಹಿ, ಮು, ರಾ, ತೆ, ಭ, ಗು, ಪಾ, ಕ, ಹ, ಮೆ, ರಿ, ತೊ, ಭಿ, ಗೆ, ಡ, ಚೂ, ಲ ಹೆಸರಿನ ಮೊದಲ ಈ ಅಕ್ಷರವುಳ್ಳ ಅಭ್ಯರ್ಥಿಗಳಿಗೆ ಶೇ. 100ರಷ್ಟು ಗೆಲುವು ಸಾಧಿಸಲಿದ್ದಾರೆ ಎಂದು ತಾತನವರು ಖಚಿತಪಡಿಸಿದ್ದಾರೆ.

ಅದೇ ರೀತಿ ಡೊ, ದೊ, ಯಿ, ಚಿ, ಡಿ, ಯು, ದೆ, ಚಿ, ಯ, ಡ, ನೊ, ಡು ಅಕ್ಷರಗಳ ಹೆಸರಿನ ಅಭ್ಯರ್ಥಿಗಳಿಗೆ ಶೇ. 80ರಷ್ಟು ಗೆಲುವು, ಢ, ಭ, ಚೆ, ಅ, ಧ, ಟೊ, ಈ, ಧ, ಪಿ, ಉ, ಪ, ಎ, ಫ ಅಕ್ಷರಗಳ ಹೆಸರಿನ ಅಭ್ಯರ್ಥಿಗಳಿಗೆ ಶೇ. 70 ರಷ್ಟು ಗೆಲುವು ಸಾಧ್ಯವಿದೆ.

ಇನ್ನುಳಿದ ಛ, ಥ, ಸಿ, ರೊ, ಶು, ಸ, ನ, ರೆ, ಬೆ, ಜಿ, ಲು, ಷ, ಶೊ, ಝ ಸೇರಿ ಇನ್ನಿತರೆ ಅಕ್ಷರಗಳ ಹೆಸರಿನ ಅಭ್ಯರ್ಥಿಗಳಿಗೆ ಶೇ. 50ರಷ್ಟು ಗೆಲ್ಲುವ ಸಾಧ್ಯತೆಯಿದೆ. ಶೇ 50, 70, 80ರಷ್ಟು ಗೆಲ್ಲುವ ಸಾಧ್ಯತೆಯುಳ್ಳಅಭ್ಯರ್ಥಿಗಳು ರಾಶಿಬಲ ಹೆಚ್ಚಿರುವಮತದಾರರನ್ನು ಕರೆದೊಯ್ದು ಮೊದಲು ಮತದಾನ ಮಾಡಿಸಿದರೆ ಅಂತಹವರಿಗೆಅವರ ಬಲದಿಂದ ಗೆಲ್ಲುವ ಸಾಧ್ಯತೆಗಳು ದಟ್ಟವಾಗಿವೆ. ಕೆಲವೆಡೆ ಒಂದೇ ಅಕ್ಷರದ ಹೆಸರಿನ ಅಭ್ಯರ್ಥಿಗಳು ಪರಸ್ಪರ ಪ್ರತಿಸ್ಪರ್ಧಿಗಳಾದಲ್ಲಿ ಅಂತಹ ಕಡೆ ತೀವ್ರ ಪೈಪೋಟಿ ಎದುರಾಗಲಿದ್ದು, ಇಬ್ಬರು ಉತ್ತಮವಾಗಿ ಮತಗಳನ್ನು ಪಡೆದು, ಕೇವಲ 20-25 ಮತಗಳ ಅಂತರದಿಂದಯಾರಾದರೊಬ್ಬರು ಗೆಲುವು ಸಾಧಿಸಲಿದ್ದಾರೆ ಎಂದು ತಾತನವರು ಅಭ್ಯರ್ಥಿಗಳಿಗೆ ಪರಿಹಾರ ಮಾರ್ಗಗಳನ್ನು ಸಹ ಸೂಚಿಸಿದ್ದಾರೆ. ಆದರೆ, ಈ ಹಿಂದೆ ನಿಜವಾದಂತೆ ಗ್ರಾಪಂ ಚುನಾವಣೆಯಲ್ಲೂ ತಾತನವರ ಭವಿಷ್ಯ ನಿಜವಾಗಲಿದೆಯಾ ಅಥವಾ ಇಲ್ಲವಾ ಎಂಬುದು ಫಲಿತಾಂಶ ಹೊರಬೀಳುವ ಡಿ. 30ರವರೆಗೆ ಕಾದು ನೋಡಬೇಕಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next