ಬಾಗಲಕೋಟೆ: ಜಿಲ್ಲೆಯಲ್ಲಿ ಎರಡನೇ ಹಂತದ ಗ್ರಾಮ ಪಂಚಾಯತಿಗಳ ಚುನಾವಣೆಗೆ ಸಲ್ಲಿಸಿದ ನಾಮಪತ್ರಗಳ ಪರಿಶೀಲನೆ ಶುಕ್ರವಾರ ನಡೆದಿದ್ದು, ಸ್ವೀಕೃತವಾದ ಒಟ್ಟು 5085 ನಾಮಪತ್ರಗಳ ಪೈಕಿ 110 ತಿರಸ್ಕೃತಗೊಂಡರೆ,4975 ನಾಮಪತ್ರಗಳು ಕ್ರಮಬದ್ಧವಾಗಿವೆ ಎಂದು ಜಿಲ್ಲಾ ಚುನಾವಣಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ|ಕೆ.ರಾಜೇಂದ್ರ ತಿಳಿಸಿದ್ದಾರೆ.
ಜಿಲ್ಲೆಯ ಬಾಗಲಕೋಟೆ ಉಪ ವಿಭಾಗ ವ್ಯಾಪ್ತಿಯಲ್ಲಿ ಬರುವ 102 ಗ್ರಾಮ ಪಂಚಾಯತಿಗಳ 1547 ಸ್ಥಾನಗಳಿಗೆ ಒಟ್ಟು 5085 ನಾಮಪತ್ರಗಳು ಸ್ವೀಕೃತಗೊಂಡಿದ್ದವು. ಈ ಪೈಕಿಬಾಗಲಕೋಟೆ ತಾಲೂಕಿನಲ್ಲಿ 28 ಗ್ರಾಮ ಪಂಚಾಯತಿಗಳಿಂದಸಲ್ಲಿಕೆಯಾದ 1374 ನಾಮಪತ್ರಗಳ ಪೈಕಿ 40 ತಿರಸ್ಕೃತ, 1334ಕ್ರಮಬದ್ಧವಾಗಿವೆ. ಹುನಗುಂದ ತಾಲೂಕಿನಲ್ಲಿ ಸಲ್ಲಿಕೆಯಾದ 762 ನಾಮಪತ್ರಗಳ ಪೈಕಿ 6 ತಿರಸ್ಕೃರ, 756 ಕ್ರಮಬದ್ದವಾಗಿವೆ.
ಬಾದಾಮಿ ತಾಲೂಕಿನಲ್ಲಿ ಸಲ್ಲಿಕೆಯಾದ 1543 ನಾಮಪತ್ರಗಳಪೈಕಿ 19 ತಿರಸ್ಕೃತ, 1524 ಕ್ರಮಬದ್ದ, ಇಳಕಲ್ಲ ತಾಲೂಕಿನಲ್ಲಿಸ್ವೀಕೃತಗೊಂಡ 94 ನಾಮಪತ್ರಗಳ ಪೈಕಿ 32 ತಿರಸ್ಕೃತ, 908 ಕ್ರಮಬದ್ದವಾಗಿವೆ. ಗುಳೇದಗುಡ್ಡ ತಾಲೂಕಿನಲ್ಲಿ ಸ್ವೀಕೃತಗೊಂಡ 466 ನಾಮಪತ್ರಗಳ ಪೈಕಿ 13 ತಿರಸ್ಕೃತಗೊಂಡರೆ, 453 ನಾಮಪತ್ರಗಳು ಕ್ರಮಬದ್ದವಾಗಿವೆ. ಹುನಗುಂದ ತಾಲೂಕಿನಲ್ಲಿ 2 ಹಾಗೂ ಬಾದಾಮಿ ತಾಲೂಕಿನಲ್ಲಿ 7 ಸ್ಥಾನಕ್ಕೆ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಮದ್ಯ ಮಾರಾಟ-ಸಾಗಣೆ ನಿಷೇಧ: ಜಿಲ್ಲೆಯಾದ್ಯಂತ ಡಿ.22 ಮತ್ತು 27 ರಂದು ಗ್ರಾಮ ಪಂಚಾಯತಿಗಳ ಸಾರ್ವತ್ರಿಕಚುನಾವಣೆಗೆ ಮತದಾನ ನಡೆಯಲಿದ್ದು, ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಮದ್ಯ ಮಾರಾಟ ಮತ್ತುಸಾಗಾಣಿಕೆ ನಿಷೇಧಿಸಲಾಗಿದೆ. ಮೊದಲನೇ ಹಂತದ ಮತದಾನ ಡಿ. 22ರಂದು ನಡೆಯಲಿರುವ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ಡಿ.20ರ ಸಂಜೆ 5ಗಂಟೆಯಿಂದ 22ರ ಸಂಜೆ 5ರವರೆಗೆ ಹಾಗೂ ಎರಡನೇ ಹಂತದ ಡಿ. 27ರಂದು ಮತದಾನನಡೆಯಲಿರುವ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ಡಿ.25ರ ಸಂಜೆ 5 ರಿಂದ 27ರ ಸಂಜೆ 5 ಗಂಟೆವರೆಗೆ ಬಾಗಲಕೋಟೆ ಜಿಲ್ಲೆಯ ಗ್ರಾಮ ಪಂಚಾಯತ ವ್ಯಾಪ್ತಿಗೆ ಬರುವ ಹಳ್ಳಿಗಳಲ್ಲಿ ಮಾತ್ರ ಬೀರ, ಬ್ರ್ಯಾಂಡಿ ಹಾಗೂ ಲಿಕ್ಕರ್ ಮಾರಾಟ ಸಂಗ್ರಹಣೆ ಹಾಗೂ ಸಾಗಾಣಿಕೆ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ|ಕೆ. ರಾಜೇಂದ್ರ ತಿಳಿಸಿದ್ದಾರೆ.