Advertisement

ಚುನಾವಣೆಗೆ ತಯಾರಿ ಜೋರು

05:13 PM Dec 18, 2020 | Suhan S |

ಮುಂಡಗೋಡ: ಜಿಲ್ಲಾ ಚುನಾವಣಾ ವೀಕ್ಷಕ ಶರಣಬಸಪ್ಪ ಕೋಟೇಪ್ಪನವರ ಗುರುವಾರ ಮುಂಡಗೋಡಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Advertisement

ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜಗೆ ಭೇಟಿ ನೀಡಿ ಪರಿಶೀಲಿಸಿದರು. ಮತ ಪೆಟ್ಟಿಗೆ ಸಂಗ್ರಹಿಸುವ ಕೊಠಡಿಗಳು ಹಾಗೂ ಮತಗಟ್ಟೆಗಳಿಗೆ ಸಿಬ್ಬಂದಿ ಕಳುಹಿಸುವ ಸ್ಥಳದ ಕುರಿತು ಅಧಿಕಾರಿಗಳ ಜೊತೆ ಚರ್ಚಿಸಿದರು.

ನಂತರ ತಹಶೀಲ್ದಾರ್‌ ಕಚೇರಿಯಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿ ಯಾವ ರೀತಿ ಚುನಾವಣೆಯಲ್ಲಿ ಕಾರ್ಯ ನಿರ್ವಹಿಸಬೇಕು ಎಂಬುದರ ಕುರಿತು ಮಾಹಿತಿ ನೀಡಿದರು. ತಹಶೀಲ್ದಾರ್‌ ಶ್ರೀಧರ ಮುಂದಲಮನೆ, ತಾಪಂ ಅಧಿಕಾರಿ ಪ್ರವೀಣ ಕಟ್ಟಿ ಹಾಗೂ ಅಧಿಕಾರಿಗಳು ಇದ್ದರು.

ಮೂರು ನಾಮಪತ್ರ ತಿರಸ್ಕೃತ :

ಹಳಿಯಾಳ: ತಾಲೂಕಿನ 20 ಗ್ರಾಮ ಪಂಚಾಯತಗಳ 212 ಸ್ಥಾನಗಳಿಗೆ ಆಯ್ಕೆ ಬಯಸಿ ಒಟ್ಟೂ 685 ಅಭ್ಯರ್ಥಿಗಳಿಂದ ಉಮೇದುವಾರಿಕೆ ಸಲ್ಲಿಕೆಯಾಗಿವೆ ಎಂದು ತಹಶೀಲ್ದಾರ್‌ ವಿದ್ಯಾಧರ ಗುಳಗುಳೆ ಮಾಹಿತಿ ನೀಡಿದ್ದಾರೆ.

Advertisement

ನಾಮಪತ್ರ ಪರಿಶೀಲನೆ ಗುರುವಾರ ನಡೆದು 685ರಲ್ಲಿ ಕೇವಲ ಮೂರು ನಾಮಪತ್ರ ತೀರಸ್ಕೃತಗೊಂಡಿದ್ದು, 682 ನಾಮಪತ್ರಗಳು ಸ್ವೀಕೃತವಾಗಿವೆ. ತೀರಸ್ಕೃತಗೊಂಡಿರುವ ನಾಮಪತ್ರ ಮದ್ನಳ್ಳಿ, ಬೆಳವಟಗಿ ಹಾಗೂ ತಟ್ಟಿಗೇರಿ ಗ್ರಾಮದ್ದಾಗಿದೆ. ಇನ್ನೂ ನಾಮಪತ್ರ ಹಿಂಪಡೆಯಲು ಡಿ. 19ರ ಮಧ್ಯಾಹ್ನ3ರ ವರೆಗೆ ಅವಕಾಶ ಕಲ್ಪಿಸಲಾಗಿದೆ. ಬಳಿಕ ಅಂತಿಮವಾಗಿ ಕಣದಲ್ಲಿ ಉಳಿಯುವವರಿಗೆ ಚಿಹ್ನೆಗಳನ್ನು ಹಂಚಿಕೆ ಮಾಡಲಾಗುತ್ತದೆ.

ಸಾಮಾನ್ಯ ಕ್ಷೇತ್ರದ 77 ಸ್ಥಾನಗಳಿಗೆ 201 ಹಾಗೂ ಮಹಿಳಾ ಸಾಮಾನ್ಯ ಕ್ಷೇತ್ರದ 38 ಸ್ಥಾನಗಳಿಗೆ 72 ನಾಮಪತ್ರಗಳು,ಅನುಸೂಚಿತ ಜಾತಿಯ ಸಾಮಾನ್ಯ ಕ್ಷೇತ್ರದ2 ಸ್ಥಾನಗಳಿಗೆ 5 ನಾಮಪತ್ರಗಳು ಹಾಗೂಮಹಿಳಾ ಮೀಸಲಾತಿಯ 20 ಸ್ಥಾನಗಳಿಗೆ 38 ನಾಮಪತ್ರಗಳು ಸಲ್ಲಿಸಲ್ಪಟ್ಟಿವೆ. ಅನುಸೂಚಿತ ಪಂಗಡದ ಸಾಮಾನ್ಯ ಕ್ಷೇತ್ರದ 2 ಸ್ಥಾನಗಳಿಗೆ 4 ನಾಮಪತ್ರಗಳುಹಾಗೂ ಮಹಿಳಾ ಮೀಸಲಾತಿಯ 20 ಸ್ಥಾನಗಳಿಗೆ 33 ಮತ್ತು ಅನುಸೂಚಿತ ಜಾತಿ ಹಾಗೂ ಪಂಗಡ ಕ್ಷೇತ್ರಕ್ಕೆ 80 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಹಿಂದುಳಿದ ಅ ಮತ್ತು ಬ ವರ್ಗದ ಒಟ್ಟು 57 ಸ್ಥಾನಗಳಿಗೆ ಒಟ್ಟೂ 115 ಉಮೇದುವಾರಿಕೆ, ಹಿಂದುಳಿದ ಅ ವರ್ಗದ ಸಾಮಾನ್ಯ ಮೀಸಲಾತಿಯ 16 ಸ್ಥಾನಗಳಿಗೆ 34 ಹಾಗೂ ಮಹಿಳಾಮೀಸಲಾತಿಯ 30 ಸ್ಥಾನಗಳಿಗೆ 54 ನಾಮಪತ್ರಗಳು ಮತ್ತು ಹಿಂದುಳಿದ ಬವರ್ಗದ ಸಾಮಾನ್ಯ ಮೀಸಲಾತಿಯ 8 ಸ್ಥಾನಗಳಿಗೆ 22 ನಾಮಪತ್ರಗಳು ಹಾಗೂ ಮಹಿಳಾ ಮೀಸಲಾತಿಯ 3 ಸ್ಥಾನಗಳಿಗೆ 5 ನಾಮಪತ್ರಗಳು ಸಲ್ಲಿಸಲ್ಪಟ್ಟಿವೆ.

ಮದ್ನಳ್ಳಿ ಗ್ರಾಪಂನ 13 ಸ್ಥಾನಗಳಿಗೆ 50, ಗುಂಡೊಳ್ಳಿ ಗ್ರಾಪಂನ 14 ಸ್ಥಾನಗಳಿಗೆ 50 ಮತ್ತು ಹವಗಿ ಗ್ರಾಪಂನ 12 ಸ್ಥಾನಗಳಿಗೆ 44 ಅಭ್ಯರ್ಥಿಗಳಿಂದ ದಾಖಲೆಯ ನಾಮಪತ್ರಗಳು ಸಲ್ಲಿಕೆಯಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next