ದೇವನಹಳ್ಳಿ: ಗ್ರಾಪಂ ಚುನಾವಣೆ ಹಿನ್ನೆಲೆ ಬೆಂ.ಗ್ರಾ ಜಿಲ್ಲೆಯ ವ್ಯಾಪ್ತಿಯಲ್ಲಿ ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಕಾರ್ಯನಿರ್ವಹಿಸಬೇಕು. ಎಲ್ಲಾ ಅಧಿಕಾರಿಗಳು ಗಂಭೀರತೆಯನ್ನು ಅರಿತು ಕಟ್ಟೆಚ್ಚರ ವಹಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ತಿಳಿಸಿದರು.
ತಾಲೂಕಿನ ಜಿಲ್ಲಾಡಳಿತ ಭವನದ ಡೀಸಿ ಕಚೇರಿ ಸಭಾಂಗಣದಲ್ಲಿ ನಡೆದ ಗ್ರಾಪಂಚುನಾವಣೆಯ ಅಧಿಕಾರಿಗಳ ಸಭೆಯಲ್ಲಿಮಾತನಾಡಿ, ಜಿಲ್ಲೆಯಲ್ಲಿ ಗ್ರಾಪಂ ಸದಸ್ಯ ಸ್ಥಾನಗಳ ಆಯ್ಕೆ ಪ್ರಕ್ರಿಯೆ ಹರಾಜು ಮೂಲಕನಡೆಯುತ್ತಿರುವ ಬಗ್ಗೆ ವರದಿಯಾಗಿದೆ. ಜಿಲ್ಲೆಯಲ್ಲಿ ಇಂತಹ ಪ್ರಕ್ರಿಯೆಗಳು ನಡೆಯದಂತೆ ಅಧಿಕಾರಿಗಳು ಕ್ರಮ ಕೈಗೊಂಡು, ಅರಿವುಮೂಡಿಸಬೇಕು. ಮತಪತ್ರಗಳನ್ನು ಮುದ್ರಣಕ್ಕೆಕಳುಹಿಸುವ ಮುನ್ನ ತಹಶೀಲ್ದಾರ್‌ಗಳು ಲೋಪ ವಾಗದಂತೆಖಾತರಿ ಪಡಿಸಿಕೊಳ್ಳಬೇಕು ಎಂದರು.
ಚಿಹ್ನೆ ಅಂತಿಮಗೊಳಿಸಿ ಸಭೆ ನಡೆಸಿ: ಮತಪತ್ರಗಳು, ಲೇಖನ ಸಾಮಗ್ರಿಗಳು,ಕೋವಿಡ್-19 ಸಾಮಗ್ರಿಗಳು, ಮತಗಟ್ಟೆ ಸಾಮಗ್ರಿಗಳ ಹಂಚಿಕೆಹಾಗೂ ವಿತರಣೆಗೆ ಕ್ರಮ ಕೈಗೊಳ್ಳಬೇಕು.ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳ ಚಿಹ್ನೆಗಳನ್ನು ಅಂತಿಮಗೊಳಿಸಿದ ನಂತರಅಭ್ಯರ್ಥಿಗಳು ಹಾಗೂ ಏಜೆಂಟರೊಂದಿಗೆ ಸಭೆ ನಡೆಸಿ, ಚಿಹ್ನೆ ವಿತರಿಸಬೇಕು. ಇತ್ತೀಚೆಗೆ ಪ್ರಕಟಗೊಳಿಸಿರುವ ಅಂತಿಮ ಮತದಾರ ಪಟ್ಟಿಯಲ್ಲಿನ ಮತದಾರರು ಮತದಾನ ಮಾಡಲು ಅರ್ಹ ಎಂದು ತಿಳಿಸಿದರು.
ಸಿಬ್ಬಂದಿ ನಿಯೋಜಿಸಿ: ಚುನಾವಣೆ ಸಂಬಂಧಿತ ದೂರು ಸಲ್ಲಿಸುವ ಕಂಟ್ರೋಲ್ ರೂಂ ಅತ್ಯಂತ ಚಟುವಟಿಕೆಯಿಂದ ಕಾರ್ಯ ನಿರ್ವಹಿಸಲು ಮೂರು ಪಾಳಿಯಲ್ಲಿ ಸಿಬ್ಬಂದಿ ನಿಯೋಜಿಸಬೇಕು. ಸೋಂಕಿತ ಮತದಾರರಿಗೆ ಮತದಾನದ ದಿನದ ಕೊನೆಯ 1 ಗಂಟೆ ಅವಕಾಶ ನೀಡಲಾಗುವುದು. ಮತಗಟ್ಟೆ ಸಿಬ್ಬಂದಿ ಪಿಪಿಇ ಕಿಟ್ ಹಾಗೂ ಎಚ್ಚರಿಕೆ ಕ್ರಮ ಕೈಗೊಳ್ಳಬೇಕು. ಮತದಾರರು ಸರದಿ ಸಾಲಿನಲ್ಲಿ ನಿಂತು ಮತ ಚಲಾಯಿಸಲು ಅನುಕೂಲಕ್ಕಾಗಿ ಮತಗಟ್ಟೆಗಳಲ್ಲಿ ಸಾಮಾಜಿಕ ಅಂತರ ಕಾಪಾಡಿ ಕೊಳ್ಳಲು ಗುರುತು ಹಾಕಬೇಕು ಎಂದರು.
ರೌಡಿಶೀಟರ್‌ಗಳ ಮೇಲೆ ನಿಗಾವಹಿಸಿ: ಜಿಪಂ ಸಿಇಒ ಎಂ.ಆರ್.ರವಿಕುಮಾರ್ ಮಾತನಾಡಿ, ನೆಲಮಂಗಲ ಹಾಗೂ ಹೊಸಕೋಟೆ ಸೂಕ್ಷ್ಮ ಕ್ಷೇತ್ರಗಳಾಗಿದೆ. ಇಲ್ಲಿ ಹೆಚ್ಚು ರೌಡಿ ಶೀಟರ್‌ಗಳ ಮೇಲೆ ನಿಗಾವಹಿಸಬೇಕು. ಪೊಲೀಸ್ ಇಲಾಖೆ ರಾತ್ರಿ ಗಸ್ತು ಹೆಚ್ಚಿಸಬೇಕು ಎಂದು ತಿಳಿಸಿದರು.
ಎಸ್ಪಿ ರವಿ.ಡಿ. ಚನ್ನಣ್ಣನವರ್ ಮಾತನಾಡಿ, ಚುನಾವಣೆ ಶಾಂತಿಯುತ, ಸುಗಮವಾಗಿ ನಡೆಯಲು ಕ್ರಮ ಕೈಗೊಳ್ಳಲಾಗಿದೆ. ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗದಂತೆ ಸೂಚನೆ ನೀಡಲಾಗಿದೆ. ನಾಲ್ಕು ಜನರನ್ನು ಗಡಿಪಾರು ಮಾಡಲು ಡೀಸಿಗೆ ಶಿಫಾರಸು ಮಾಡಲಾಗಿದೆ. ಎಂದು ಹೇಳಿದರು. ಎಡಿಸಿ ಡಾ.ಜಗದೀಶ್ ಕೆ.ನಾಯಕ, ಎಸಿ ಅರುಳ್ ಕುಮಾರ್, ಡಿವೈಎಸ್‌ಪಿ ರಂಗಪ್ಪ ಇದ್ದರು.