ಚನ್ನರಾಯಪಟ್ಟಣ: ರಾಜ್ಯ ಚುನಾವಣಾ ಆಯೋಗ ಗ್ರಾಪಂ ಚುನಾವಣೆ ಘೋಷಣೆಮಾಡಿದ ಹಿನ್ನೆಲೆಯಲ್ಲಿ ತಾಲೂಕಿನ ರಾಜಕೀಯ ಚಟುವಟಿಕೆ ಗರಿಗೆದರಿದ್ದು ಮೂರು ಪಕ್ಷಗಳಲ್ಲೂ ಸಿದ್ಧತೆ ಪ್ರಾರಂಭವಾಗಿದೆ.
ತಾಲೂಕಿನಲ್ಲಿ 41 ಗ್ರಾಪಂಗಳಿದ್ದುಶ್ರವಣಬೆಳಗೊಳ ಹೊರತು ಪಡಿಸಿ ಉಳಿದ 40 ಗ್ರಾಪಂಗೆ ಚುನಾವಣೆ ನಡೆಯಲಿದ್ದು 609 ಮಂದಿ ಸದಸ್ಯ ರಾಗಲಿದ್ದಾರೆ. 40 ಗ್ರಾಪಂ ಪೈಕಿ 205439 ಮಂದಿ ಮತದಾರರಿದ್ದು 102284 ಮಂದಿ ಪುರುಷರು,103151ಮಹಿಳೆಯರು, 4 ಮಂದಿ ಇತರರು ಡಿ.22 ರಂದು ಮತದಾನ ಮಾಡಲಿದ್ದಾರೆ.
ಚುನಾವಣಾ ಕಾವು ಪ್ರಾರಂಭ: ತಾಲೂಕಿನಲ್ಲಿ ಮುಂಬೈ, ಬೆಂಗಳೂರಿನಲ್ಲಿ ತಮ್ಮ ಬದುಕು ಕಟ್ಟಿಕೊಂಡಿದ್ದವರೇ ಹೆಚ್ಚುಮಂದಿ ಇದ್ದು ಕೋವಿಡ್ ಕಾವು ಹೆಚ್ಚಿಸಿದ್ದರು.ಈಗ ಕೋವಿಡ್ ಕಾವು ತಣ್ಣಗಾಗುತಲೇ ಚುನಾವಣಾ ಕಾವು ಗ್ರಾಮೀಣ ಭಾಗದಲ್ಲಿ ಹೆಚ್ಚಾಗುತ್ತಿದೆ. ಕೆಲ ಗ್ರಾಮದಲ್ಲಿ ಅವಿರೋಧ ಚಿಂತನೆ: ಕಳೆದ ಸಾಲಿನಲ್ಲಿಯೂ ಗ್ರಾಪಂ ಚುನಾವಣೆಯಲ್ಲಿ ಹಲವು ಗ್ರಾಮದಲ್ಲಿ ದೇಗುಲ ನಿರ್ಮಾಣಕ್ಕೆ 10 ರಿಂದ 35 ಲಕ್ಷ ರೂ. ಗ್ರಾಮಕ್ಕೆ ನೀಡಿದವರನ್ನು ಗ್ರಾಪಂ ಗೆ ಅವಿರೋಧ ಮಾಡಿದ್ದರು. ಇದೇ ಹಾದಿಯಲ್ಲಿ ಕೆಲ ಗ್ರಾಮ ದಲ್ಲಿ ಮುಖಂಡರು ಚರ್ಚಿಸುತ್ತಿ ದ್ದಾರೆ. ಯಾವ ವ್ಯಕ್ತಿ ದೇವಾಲಯ ನಿರ್ಮಾಣಕ್ಕೆ ಹಣ ನೀಡುತ್ತಾನೆ ಅವರನ್ನು ಅವಿರೋಧ ಆಯ್ಕೆ ಮಾಡಲು ಚಿಂತನೆ ನಡೆಯುತ್ತಿದೆ.
ಮಹಿಳೆಯರಿಗೆಹೆಚ್ಚು ಸ್ಥಾನ: 609 ಸ್ಥಾನದಲ್ಲಿ 313 ಮಹಿಳೆಯರಿಗೆ ಮೀಸಲಾಗಿದ್ದರೆ 296 ಮಂದಿ ಪುರುಷರಿಗೆ ಅವಕಾಶ ಕಲ್ಪಿಸಲಾಗಿದೆ. ಎಸ್‌ಸಿ ಮೀಸಲು ಕ್ಷೇತ್ರದಲ್ಲಿಯೂ 70ಕ್ಕೆ 45 ಮಹಿಳೆಯರು, 25 ಪುರುಷರಿಗೆ ಅವಕಾಶ ದೊರೆತಿದೆ. ಹಿಂ.ವರ್ಗ(ಅ) 143 ಸ್ಥಾನದಲ್ಲಿ 79 ಮಹಿಳೆ, 64 ಪುರುಷರು, ಹಿಂದುಗಳೀದ ವರ್ಗ(ಬ) 38 ಸ್ಥಾನಕ್ಕೆ 23 ಮಹಿಳೆಯರು, 15 ಪುರುಷರಿಗೆ ಅವಕಾಶ ದೊರೆತಿದೆ.
ಎಸ್ಟಿ ಪುರುಷರಿಗೆ ಅವಕಾಶ ಇಲ್ಲ: ಎಸ್‌ಟಿ 40 ಸ್ಥಾನ ಮೀಸಲಾಗಿದ್ದು ಪುರುಷರಿಗೆ ಒಂದು ಸ್ಥಾನಕ್ಕೂ ಅವಕಾಶ ದೊರೆತಿಲ್ಲ. ಎಲ್ಲಾ 40 ಸ್ಥಾನ ಮಹಿಳೆಯರಿಗೆ ಮೀಸಲಾಗಿದೆ. 2015ರಲ್ಲಿಯೇ ಗ್ರಾಪಂ ಚುನಾವಣೆಗೆ ಮೀಸ ಲಾತಿ ನಿಗದಿಯಾಗಿತ್ತು. ಅಂದು ಈ ಬಗ್ಗೆ ಯಾರೂ ಪ್ರಶ್ನೆ ಮಾಡದಿದ್ದರಿಂದ ಎಸ್‌ಟಿ ಗೆ ಸೇರಿದ ಪುರುಷರು ಸ್ಪರ್ಧಿಸುವಂತಿಲ್ಲ. ಪುರುಷರಿಗೆ ಹೆಚ್ಚು ಸ್ಥಾನ: ಗ್ರಾಪಂ 318 ಸ್ಥಾನ ಸಾಮಾನ್ಯ ವರ್ಗಕ್ಕೆ ಸೀಮಿತವಾಗಿದ್ದು 192 ಮಂದಿ ಪುರುಷರಿಗೆ ಅವಕಾಶ ಕಲ್ಪಿಸಲಾಗಿದೆ. ಇನ್ನು 126 ಮಂದಿ ಮಹಿಳೆಯರು ಮಾತ್ರ ಸದಸ್ಯರಾಗುವ ಅವಕಾಶ ಕಲ್ಪಿಸಲಾಗಿದೆ ಹೆಚ್ಚು ಪುರುಷರಿಗೆ ಅವಕಾಶ ಮಾಡಲಾಗಿದೆ.
ತಮಗೆ ಬೇಕಾದವರನ್ನುಕಣಕ್ಕಿಳಿಸಲು ತಯಾರಿ :
ಗ್ರಾಪಂ ಚುನಾವಣೆ ಯಾವುದೇ ಪಕ್ಷದ ಗುರುತಿನಲ್ಲಿ ನಡೆಯದಿದ್ದರೂ ತಾಲೂಕಿ ನಲ್ಲಿ ಜೆಡಿಎಸ್, ಬಿಜೆಪಿ,ಕಾಂಗ್ರೆಸ್ ಮುಖಂಡರು ತಮ್ಮ ಪಕ್ಷದ ಬೆಂಬಲಿತ ಅಭ್ಯರ್ಥಿ ಗಳನ್ನು ಕಣಕ್ಕಿಳಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಚುನಾವಣೆ ಘೋಷಣೆ ಆದ ಮೊದಲ ದಿನವೇ ಕ್ಷೇತ್ರದ ಶಾಸಕ ಸಿ.ಎನ್.ಬಾಲ ಕೃಷ್ಣ ಮನೆ ಮುಂದೆ ಸಾವಿರಾರು ಮಂದಿ
ಜೆಡಿಎಸ್ ಕಾರ್ಯಕರ್ತರು ಸಾಲುಗಟ್ಟಿ ನಿಂತಿದ್ದರು. ಕಾಂಗ್ರೆಸ್‌ನ ಸಾವಿರಾರು ಕಾರ್ಯಕರ್ತರು ಮಾಜಿ ಶಾಸಕ ಪುಟ್ಟೇಗೌಡ ಹಾಗೂ ವಿಧಾನಪರಿಷತ್‌ಸದಸ್ಯಎಂ.ಎ.ಗೋಪಾಲಸ್ವಾಮಿ ಮನೆಗೆ ಧಾವಿಸಿ ಗ್ರಾಪಂ ಚುನಾವಣೆಗೆ ತಮ್ಮನ್ನೇ ಅಭ್ಯರ್ಥಿ ಮಾಡುವಂತೆ ಅಂಗಲಾಚುತ್ತಿದ್ದದ್ದು ಸಾಮಾನ್ಯ ವಾಗಿತ್ತು. ಆದರೆ ತಾಲೂಕಿನ ಬಿಜೆಪಿಯಲ್ಲಿ ಮಾತ್ರ ಅಷ್ಟಾಗಿ ಚುನಾವಣಾ ಕಾವು ಏರಿದಂತೆ ಕಾಣುತ್ತಿಲ್ಲವಾದರೂ ಟಿಕೆಟ್‌ಗೆದುಂ ಬಾಲು ಬಿದ್ದಿದ್ದಾರೆ. ಇನ್ನು ಗ್ರಾಪಂ ಚುನಾವಣೆಗೆ ಯಾವುದೇ ಪಕ್ಷದ ಗುರುತಿ ನಿಂದ ಚುನಾವಣೆಗೆ ಅಭ್ಯರ್ಥಿ ಇಳಿಸದೆ ಇದ್ದರೂ ಮೂರು ಪಕ್ಷದ ಮುಖಂಡರು ತೆರೆಮರೆಯಲ್ಲಿ ಇದ್ದು ತಮ್ಮಗೆ ಬೇಕಾದವರನ್ನು ಕಣಕ್ಕೆ ಇಳಿಸಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಮೀಸಲಾತಿ ಮೇರೆಗೆ ಲೆಕ್ಕಾಚಾರ ಮಾಡಿಕೊಂಡು ಮುಖಂಡರ ಮನೆಗೆ ಧಾವಿಸುತ್ತಿದ್ದಾರೆ.
-ಶಾಮಸುಂದರ್ ಕೆ.ಅಣ್ಣೇನಹಳ್ಳಿ