Advertisement

ಲೋಕಲ್‌ ಫೈಟ್‌ಗೆ ಹೆಚ್ಚಿದ ಉಮೇದುವಾರಿಕೆ

05:37 PM Dec 11, 2020 | Suhan S |

ಯಾದಗಿರಿ: ಸದ್ಯ ಎದುರಾಗಿರುವ ಗ್ರಾಪಂ ಚುನಾವಣೆಗೆ ಗ್ರಾಮೀಣ ಭಾಗದಲ್ಲಿ ತೀವ್ರ ಪೈಪೋಟಿ ನಡೆಯುತ್ತಿದೆ. ಚುನಾವಣೆ ಅಖಾಡಕ್ಕೆ ಎಂಟ್ರಿ ಕೊಟ್ಟಿರುವ ಯುವ ಸಮೂಹ ಭಾರಿ ಉತ್ಸಾಹದಿಂದ ನಾಮಪತ್ರ ಸಲ್ಲಿಸುತ್ತಿರುವುದು ಕಂಡು ಬರುತ್ತಿದೆ.

Advertisement

ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ಮೂರು ತಾಲೂಕುಗಳಲ್ಲಿ ಚುನಾವಣೆ ಜರುಗಲಿದ್ದು, ಶಹಾಪುರ ತಾಲೂಕಿನ 24 ಗ್ರಾಪಂಗಳ 495 ಸದಸ್ಯ ಸ್ಥಾನ, ಸುರಪುರ ತಾಲೂಕಿನ 21 ಗ್ರಾಪಂಗಳ 383 ಸ್ಥಾನ ಹಾಗೂ ಹುಣಸಗಿ ತಾಲೂಕಿನ 18 ಗ್ರಾಪಂಗಳ 369ಸ್ಥಾನ ಸೇರಿ 1247 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

ಮೊದಲ ಹಂತದಲ್ಲಿ ಚುನಾವಣೆ ನಡೆಯಲಿರುವ ಪಂಚಾಯಿತಿಗಳಲ್ಲಿ ಈಗಾಗಲೇ ನಾಮಪತ್ರ ಸಲ್ಲಿಕೆನಡೆಯುತ್ತಿದ್ದು, ಶಹಾಪುರ ತಾಲೂಕಿನ ಚಟ್ನಳ್ಳಿಗ್ರಾಪಂ ಕಾರ್ಯಾಲಯ ಎದುರು ಆಕಾಂಕ್ಷಿಗಳು ಮತ್ತು ಬೆಂಬಲಿಗರು ಜಾತ್ರೆಯಂತೆ ನೆರೆದಿದ್ದು ಕಂಡು ಬಂತು.

ಈ ಬಾರಿ ವಿಶೇಷವಾಗಿ ಯುವ ಸಮೂಹವೇ ಚುನಾವಣೆ ಅಖಾಡಕ್ಕೆ ಹೆಚ್ಚಾಗಿ ಧುಮುಕಿರುವುದುಕಾಣಸಿಗುತ್ತಿದ್ದು, ಪಂಚಾಯಿತಿ ಫೈಟ್‌ ದಿನದಿಂದದಿನಕ್ಕೆ ಕಾವೇರುತ್ತಿದೆ. ಒಂದು ಸ್ಥಾನಕ್ಕೆ ಮೂವರಿಂದನಾಲ್ವರು ನಾಮಪತ್ರ ಸಲ್ಲಿಸುತ್ತಿದ್ದು ಬಹುತೇಕಹೊಸ ಮುಖಗಳು ಎಂಟ್ರಿ ಕೊಡುತ್ತಿರುವುದು ಇನ್ನುಮುಂದಾದರೂ ಗ್ರಾಮದ ಏಳ್ಗೆಯಾಗಲಿ ಎನ್ನುವ ಮಾತುಗಳು ಕೇಳಿಬರುತ್ತಿದೆ.

ನಾಮಪತ್ರ ಸಲ್ಲಿಸುತ್ತಿರುವ ಅಭ್ಯರ್ಥಿಗಳು ತನ್ನ ಸ್ವಂತ ವರ್ಚಸ್ಸಿನ ಮೇಲೆಯೇ ನಾಮಪತ್ರ ಸಲ್ಲಿಸುತ್ತಿದ್ದು, ಎಲ್ಲ ಜಾತಿ ಮತ ಪಡೆಯಲು ಜನರನ್ನುಓಲೈಸುವ ತಂತ್ರಗಾರಿಕೆ ಶುರು ಮಾಡಿದ್ದಾರೆ. ಈಗಲೇ ಬಹಿರಂಗವಾಗಿ ಜಾತಿ ಹೆಸರು ಬಳಸಿ ಇತರರ ಅಸಮಾಧಾನಕ್ಕೆ ಗುರಿಯಾಗದೇ ಒಳಗೊಳಗೆ ತಮ್ಮಜಾತಿಯ ಮತಗಳನ್ನು ಒಗ್ಗೂಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಅಭ್ಯರ್ಥಿಗಳು ಏನೆಲ್ಲ ಕಸರತ್ತು ನಡೆಸಿದರೂ ಅಂತಿಮವಾಗಿ ಮತದಾರರು ಯಾರಿಗೆಜೈ ಎನ್ನುವರೋ ಎನ್ನುವ ಉತ್ತರ ಸಿಗಲು ಮತದಾನದವರೆಗೆ ಕಾಯಲೆಬೇಕಿದೆ.

Advertisement

ನಾಮಪತ್ರ ಸಲ್ಲಿಕೆ :  ಜಿಲ್ಲೆಯಲ್ಲಿ ಮೊದಲ ಹಂತದ ಗ್ರಾಪಂ ಚುನಾವಣೆಗೆ ಅಭ್ಯರ್ಥಿಗಳಿಂದ ಡಿ.9ರವರೆಗೆವಿವಿಧ ಗ್ರಾಪಂಗಳಲ್ಲಿ ಒಟ್ಟು 102 ನಾಮಪತ್ರ ಸಲ್ಲಿಕೆಯಾಗಿತ್ತು. ಶಹಾಪುರ ತಾಲೂಕಿನಗ್ರಾಪಂಗಳಿಗೆ 11, ಸುರಪುರ ತಾಲೂಕಿನ ಗ್ರಾಪಂಗಳಿಗೆ 31 ಹಾಗೂ ಹುಣಸಗಿತಾಲೂಕಿನ ಗ್ರಾಪಂಗಳಿಗೆ 60 ಸೇರಿ ಒಟ್ಟು 102ಸಲ್ಲಿಕೆಯಾಗಿತ್ತು. ಡಿ.11 ನಾಮಪತ್ರ ಸಲ್ಲಿಕೆಗೆಕೊನೆ ದಿನವಾಗಿದ್ದು, ಇಂದೂ ಕೂಡ ಬಹಳಷ್ಟು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲಿದ್ದಾರೆ.

ಮೊದಲ ಬಾರಿಗೆ ಗ್ರಾಪಂ ಚುನಾವಣೆಗೆ ಸ್ಪರ್ಧಿಸುತ್ತಿದ್ದು, ಗ್ರಾಮದಲ್ಲಿ ಸಮರ್ಪಕ ಅಭಿವೃದ್ಧಿ ಮಾಡುವ ಉದ್ದೇಶವಿದೆ. ಗ್ರಾಮದಲ್ಲಿಯೂ ಸಾಕಷ್ಟು ಪ್ರೋತ್ಸಾಹನೀಡುತ್ತಿದ್ದು ಮತದಾರರು ಆಶೀರ್ವದಿಸಿದರೆ ಸೇವೆಗೆ ಅನಕೂಲವಾಗಲಿದೆ.  –ಸಾಬಣ್ಣ ಭಜಂತ್ರಿ, ಚಟ್ನಳ್ಳಿ ಗ್ರಾಪಂ ಅಭ್ಯರ್ಥಿ

ಗ್ರಾಮಗಳ ಅಭಿವೃದ್ಧಿಗೆ ಹೊಸ ಆಲೋಚನೆಗಳಿರುವ ಯುವಕರನ್ನು ಆರಿಸಿತರಬೇಕಿದೆ. ಯುವ ಸಮೂಹ ಉತ್ಸುಕರಾಗಿಚುನಾವಣೆಗೆ ಸ್ಪರ್ಧಿಸುತ್ತಿದ್ದು ವಿದ್ಯಾವಂತರೂ ಇದ್ದಾರೆ. ಅವರು ಆರಿಸಿ ಬಂದರೆ ಗ್ರಾಮಗಳ ಅಭಿವೃದ್ಧಿಯಾಗುವ ನಿರೀಕ್ಷೆಯಿದೆ. –ಮಾನಪ್ಪ ಗೌಡ ದಳಪತಿ, ಮರಮಕಲ್‌

ಹಿಂದೆ ನಮ್ಮ ಕಾಲದಲ್ಲಿ ಮುಖಂಡರು ಯಾರ ಹೆಸರು ಹೇಳಿದರೆ ಅವರು ಆರಿಸಿ ಬರುತ್ತಿದ್ದೆವು. ಈಗ ಹುಡುಗರು ಎಲೆಕ್ಷನ್‌ಗೆ ನಿಂತಿದ್ದಾರೆ. ಇಂದಿನ ದಿನಮಾನಗಳೇ ಬೇರೆ. ಹಾಗಾಗಿ ಸನ್ನಿವೇಶಕ್ಕೆ ತಕ್ಕಂತೆ ಅವಕಾಶ ದೊರೆಯಬೇಕು. ಜನರಿಗೆ ಉಪಯೋಗವಾಗುವ ಕಾರ್ಯ ಮಾಡುವುದು ಅಗತ್ಯ. –ಸಾಬಣ್ಣ ಪೂಜಾರಿ, ಗ್ರಾಪಂ ಮಾಜಿ ಸದಸ್ಯ, ಚಟ್ನಳ್ಳಿ

 

-ಅನೀಲ ಬಸೂದೆ

Advertisement

Udayavani is now on Telegram. Click here to join our channel and stay updated with the latest news.

Next