Advertisement
ಜಿಲ್ಲೆಯ 226 ಗ್ರಾಪಂಗಳಲ್ಲಿ 209 ಗ್ರಾಪಂಗಳಿಗೆ ಚುನಾವಣೆ ನಿಗದಿಯಾಗಿದ್ದು, ಅಭ್ಯರ್ಥಿಆಕಾಂಕ್ಷಿಗಳು ತಮಗೆ ಮತ ನೀಡುವಂತೆ ಮತದಾರರಮನವೊಲಿಕೆಯಲ್ಲಿ ನಿರತರಾಗಿದ್ದಾರೆ. ಅಭ್ಯರ್ಥಿ, ಅಭ್ಯರ್ಥಿಗಳ ನಡುವೆ ಸ ರ್ಧೆ ಏರ್ಪಟ್ಟಿರುವ ಕ್ಷೇತ್ರಗಳಲ್ಲಿ ಎದುರಾಳಿ ಸ್ಪರ್ಧಿಯ ಮನವೊಲಿಕೆ ಕಾರ್ಯವೂ ಭರದಿಂದ ಸಾಗುತ್ತಿದೆ.
Related Articles
Advertisement
ಚುನಾವಣೆ ಬಹಿಷ್ಕಾರ ಕೂಗು: ಒಂದು ಕಡೆ ಗ್ರಾ.ಪಂ. ಚುನಾವಣೆ ರಂಗೇರುತ್ತಿದ್ದರೆ ಮತ್ತೂಂದು ಕಡೆಚುನಾವಣೆ ಬಹಿಷ್ಕಾರದ ಮಾತುಗಳು ಕೇಳಿ ಬರುತ್ತಿವೆ. ಚುನಾವಣೆಗೆ ಯಾರಾದರೂ ನಾಮಪತ್ರ ಸಲ್ಲಿಸಿದರೆ ಅವರಿಗೆ ಹಾರ ಹಾಕಿ ಅಂತಹವರ ಮನೆ ಮುಂದೆ ಧರಣಿ ಕೂರುವುದಾಗಿ ಮಲೆನಾಡಿಗರು ಎಚ್ಚರಿಕೆ ನೀಡಿದ್ದಾರೆ.
ಚಿಕ್ಕಮಗಳೂರು ತಾಲೂಕು ಖಾಂಡ್ಯ ಹೋಬಳಿನಾಲ್ಕು ಗ್ರಾಮ ಪಂಚಾಯತ್ ವ್ಯಾಪ್ತಿಯ ಜನರು ಚುನಾವಣೆ ಬಹಿಷ್ಕಾರಕ್ಕೆ ಮುಂದಾಗಿದ್ದು, ಅಲ್ಲಲ್ಲಿಚುನಾವಣೆ ಬಹಿಷ್ಕಾರದ ಫ್ಲೆಕ್ಸ್‌ಗಳನ್ನು ಅಳವಡಿಸಿದ್ದಾರೆ.ಈ ಗ್ರಾಮಗಳಲ್ಲಿ ಚುನಾವಣೆ ಬಹಿಷ್ಕಾರಕ್ಕೆ ಮುಖ್ಯಕಾರಣ ಮಲೆನಾಡಿಗೆ ಮಾರಕವಾಗಿರುವ ಹುಲಿ ಯೋಜನೆ, ಬಫರ್ ಝೋನ್, ಕಸ್ತೂರಿ ರಂಗನ್‌ವರದಿ, ಪರಿಸರ ಸೂಕ್ಷ¾ ವಲಯ ಯೋಜನೆಗಳನ್ನು ರದ್ದುಪಡಿಸುವಂತೆ ಒತ್ತಾಯಿಸಿ ಚುನಾವಣೆ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ.
ಬುಧವಾರ ಮತದಾನ ಬಹಿಷ್ಕಾರದ ಫ್ಲೆಕ್ಸ್ ತೆರವಿಗೆ ಬಂದ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಕಿಡಿಕಾರಿದ್ದಾರೆ. ನೀವು ಸಂಬಳಕ್ಕಾಗಿ ಹೋರಾಡ್ತಿರಾ, ನಾವು ಬದುಕಿಗಾಗಿ ಹೋರಾಟ ಮಾಡುತ್ತಿದ್ದೇವೆ ಎಂದು ಕಂದಾಯ ನಿರೀಕ್ಷಕ ಮತ್ತು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಯನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
17 ಗ್ರಾಪಂ ಚುನಾವಣೆ ಇಲ್ಲ: ಚಿಕ್ಕಮಗಳೂರು ತಾಲೂಕಿನ ಬೆಳವಾಡಿ, ಈಶ್ವರಹಳ್ಳಿ, ಕಳಸಾಪುರ, ಕೆ.ಬಿ.ಹಾಳ್, ಮಾಚೇನಹಳ್ಳಿ, ಸಿಂ ಗೆರೆ ಹಾಗೂ ಕಡೂರು ತಾಲೂಕಿನ ದೇವನೂರು, ಚಿಕ್ಕದೇವನೂರು, ನಿಡಘಟ್ಟ, ಎಸ್.ಬಿದರೆ, ನಾಗರಾಳು ಕರಗಡ ಯೋಜನೆ ಪೂರ್ಣಗೊಳಿಸುವಂತೆ ಒತ್ತಾಯಿಸಿ ಚುನಾವಣೆ ಬಹಿಷ್ಕರಿಸಿದ ಪರಿಣಾಮ 1ವರ್ಷ ತಡವಾಗಿ ಚುನಾವಣೆಯಾಗಿದ್ದು, ಅವಧಿ ಮುಗಿಯದ ಕಾರಣ ಚುನಾವಣೆ ನಡೆಯುತ್ತಿಲ್ಲ. ಮೀಸಲಾತಿ ವಿಚಾರವಾಗಿ ನ್ಯಾಯಾಲಯದ ಮೆಟ್ಟಿಲೇರಿ 1ವರ್ಷ ತಡವಾಗಿ ಚುನಾವಣೆ ನಡೆದು ಅವಧಿ ಮುಗಿಯದ ಮೂಡಿಗೆರೆ ತಾಲೂಕಿನ ಕುಂದೂರು, ಬಣಕಲ್, ತರುವೆ ತರೀಕೆರೆ ತಾಲೂಕು ಕೆಂಚಿಕೊಪ್ಪ, ಕೊಪ್ಪ ತಾಲೂಕು ಹೇರೂರು, ಅಜ್ಜಂಪುರ ತಾಲೂಕು ಬುಕ್ಕಾಂಬುದಿ ಗ್ರಾಪಂಗಳ ಅವಧಿ ಮುಗಿಯದ ಕಾರಣ ಚುನಾವಣೆ ನಡೆಯುತ್ತಿಲ್ಲ.
ಬಿಜೆಪಿ ಕಾರ್ಯಕರ್ತರು ಗ್ರಾಪಂಚುನಾವಣೆಯಲ್ಲಿ ತೊಡಗಿಸಿಕೊಂಡಿದ್ದು, ಸಿದ್ಧತೆ ನಡೆಸಲಾಗುತ್ತಿದೆ. ಪಕ್ಷ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸುವ ವಿಶ್ವಾಸವಿದೆ. ಸಿ.ಟಿ.ರವಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಶಾಸಕ
ಗ್ರಾಪಂ ಚುನಾವಣೆಗೆ ಒಂದು ತಿಂಗಳಿಂದ ಎಲ್ಲಾ ಸಿದ್ಧತೆ ನಡೆಸಲಾಗುತ್ತಿದೆ. ಈ ಹಿಂದಿನಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆಲುವು ಸಾಧಿಸಿದ್ದೆವು. ಈ ಬಾರಿಯೂ ಅದಕ್ಕಿಂತ ಹೆಚ್ಚಿನ ಸ್ಥಾನ ಗೆಲ್ಲಲಿದ್ದೇವೆ. –ಕಲ್ಮುರುಡಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ
ಚುನಾವಣೆಗೆ ಈಗಾಗಲೇ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಪಕ್ಷದ ನಾಯಕರ ಸೂಚನೆಗೆ ಕಾಯುತ್ತಿದ್ದೇವೆ. ಅವರ ಸೂಚನೆಯಂತೆ ಚುನಾವಣೆ ಎದುರಿಸುತ್ತೇವೆ. ರಂಜನ್ ಅಜೀತ್‌ಕುಮಾರ್, ಜೆಡಿಎಸ್ ಜಿಲ್ಲಾಧ್ಯಕ್ಷ
ಚುನಾವಣೆಗೆ ಸಕಲ ಸಿದ್ಧತೆ ನಡೆಸಲಾಗುತ್ತಿದ್ದು, ಈಗಾಗಲೇ ಗ್ರಾಮೀಣ ಮಟ್ಟದಲ್ಲಿ ಕಾರ್ಯಕರ್ತರಸಭೆ ನಡೆಸಲಾಗಿದೆ. ಮುಖಂಡರ ನೇತೃತ್ವದಲ್ಲಿ ಚುನಾವಣೆಯನ್ನು ಸಮರ್ಥವಾಗಿ ಎದುರಿಸಲಿದ್ದೇವೆ. ಅಂಶುಮಂತ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ
–ಸಂದೀಪ ಜಿ.ಎನ್.ಶೇಡ್ಗಾರ್