Advertisement

ಮತದಾರರಿಗೆ ಸ್ಪರ್ಧಾಕಾಂಕ್ಷಿಗಳ ಆಮಿಷ

05:58 PM Dec 14, 2020 | Suhan S |

ಗುಡಿಬಂಡೆ: ಗ್ರಾಪಂ ಚುನಾವಣೆ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಹಳ್ಳಿಯಲ್ಲಿ ಅಭ್ಯರ್ಥಿಗಳನ್ನು ಹರಾಜು ಮಾಡುವಂತೆ ಬಿರುಸಿನ ಚರ್ಚೆಗಳು ನಡೆಯುತ್ತಿರುವುದುಕಳವಳಕಾರಿ ಸಂಗತಿಯಾಗಿದೆ.

Advertisement

ಸ್ಪರ್ಧಾಕಾಂಕ್ಷಿಗಳು ಸೇರಿದಂತೆ ಅವರ ಕುಟುಂಬ ಸದಸ್ಯರು ಈಗಾಗಲೇ ಗ್ರಾಮಗಳಲ್ಲಿ ಮನೆ ಮನೆಗಳಿಗೆತೆರಳಿ ಮತಯಾಚಿಸಿ ಆಮಿಷಗಳ ಮಹಾಪೂರವನ್ನೇಹರಿಸಿದ್ದಾರೆ. ಗ್ರಾಮಗಳಲ್ಲಿ ಹೆಚ್ಚು ಮತ ಇರುವಕುಟುಂಬ, ಪ್ರಬಲ ಸಮುದಾಯಗಳ ಮುಖಂಡರ ಮನೆ ಮುಂದೆ ಪರೇಡ್‌ ನಡೆಸುತ್ತಿರುವ ಆಕಾಂಕ್ಷಿಗಳು ಓಲೈಕೆಗೆ ಮುಂದಾಗುತ್ತಿದ್ದಾರೆ.

ನೀತಿ ಸಂಹಿತೆ ಜಾರಿ: ನೀತಿ ಸಂತೆ ಜಾರಿಯಲ್ಲಿದ್ದು, ಗ್ರಾಮಗಳಲ್ಲಿ ಯಾವುದೇ ರೀತಿಯ ಸಭೆ ಸಮಾರಂಭ ಗಳು ನಡೆಸಬೇಕಾದರೆ ಕಡ್ಡಾಯವಾಗಿ ಚುನಾವಣಾ ಆಯೋಗದಿಂದ ಅನುಮತಿ ಪಡೆಯಬೇಕು.

ಮದ್ಯದ ಅಂಗಡಿಗಳಿಗೆ ನೋಟಿಸ್‌: ಗ್ರಾಮಾಂತರ ಪ್ರದೇಶ ವ್ಯಾಪ್ತಿಯಲ್ಲಿರುವ ಮದ್ಯದ ಅಂಗಡಿ ಗಳಲ್ಲಿಕಡಿಮೆ ಬೆಲೆಯ ಮದ್ಯ ಖಾಲಿಯಾಗಿದ್ದು, ಬೇಡಿಕೆ ಹೆಚ್ಚಾಗಿದೆ. ಆಕಾಂಕ್ಷಿಗಳು ಮತದಾರರ ಓಲೈಕೆಗಾಗಿ ಮದ್ಯ ಸಂಗ್ರಹಕ್ಕೆ ಮುಂದಾಗಿರು ವುದರಿಂದ ಎಲ್ಲಾ ಕಡೆ ಕಡಿಮೆ ಬೆಲೆಯ ಮದ್ಯ ಸಿಗದಂತಾಗಿದ್ದು, ಮದ್ಯಕ್ಕಾಗಿ ಪಟ್ಟಣ ಪ್ರದೇಶಗಳತ್ತಾ ಮುಖಮಾಡಿದ್ದಾರೆ.

ಹದ್ದಿನ ಕಣ್ಣಿಟ್ಟ ಆಯೋಗ: ತಾಲೂಕಿನಲ್ಲಿ ಚುನಾವಣಾ ಅಯೋಗ ಹದ್ದಿನಕಣ್ಣಿಟ್ಟಿದೆ. ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಮತ್ತು ಸಾಮಾನ್ಯ ಮತಗಟ್ಟೆ ಪ್ರದೇಶಗಳನ್ನು ಪ್ರತಿದಿನ ಗಮನಿಸಲಾಗುತ್ತಿದೆ ಎಂದು ತಾಲೂಕು ಚುನಾವಣಾ ಆಧಿಕಾರಿ ಮಾಹಿತಿ ನೀಡಿದರು.

Advertisement

ಕುತೂಹಲ ಮೂಡಿಸಿದ ಸ್ಥಾನಗಳ ಹರಾಜು: ಚುನಾವಣೆ ನಿಗದಿ ನಂತರ ಸ್ಥಾನಗಳ ಹರಾಜು ಬಗ್ಗೆಕುತೂಹಲ ಮೂಡಿಸಿದೆ. ಇದರಿಂದ ಬಂದ ಹಣದಲ್ಲಿ ದೇವಾಲಯ ಅಥವಾ ಊರಿನ ಅಭಿವೃದ್ಧಿ ಮಾಡಲುಹರಾಜು ಮಾಡಬೇಕು ಎಂಬ ಬಿಸಿಬಿಸಿ ಮಾತುಗಳು ಹರಿದಾಡುತ್ತಿವೆ.

ತಾಲೂಕಿನಲ್ಲಿ 8 ಗ್ರಾಪಂಗಳ 119 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಸೂಕ್ಷ್ಮ ಮತಗಟ್ಟೆ 23, ಅತಿಸೂಕ್ಷ್ಮ 13, ಸಾಮಾನ್ಯ 37 ಮತಗಟ್ಟೆಗಳಿವೆ. ದಿನದ 24 ಗಂಟೆಯೂ ಕಂಟ್ರೋಲ್‌ ರೂಂ ತೆರೆದಿರು ತ್ತದೆ. ಚುನಾವಣೆಗೆ ಸಂಬಂಧಿಸಿದ ದೂರು ನೀಡಬಹುದು. ಸಿಬ್ಗತುಲ್ಲಾ, ತಹಶೀಲ್ದಾರ್‌, ಗುಡಿಬಂಡೆ

ಪ್ರಜಾಪ್ರಭುತ್ವ ವ್ಯವಸ್ಥೆಗೆ ಗೌರವ ನೀಡಿ ಮತದಾನದಮೂಲಕ ಉತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಉತ್ತಮ ಸಮಾಜ ನಿರ್ಮಾಣಕ್ಕೆ ಎಲ್ಲರೂ ಮುಂದಾಗಬೇಕು. ಮುರಳಿ, ಮತದಾರ, ನಿಚ್ಚನಬಂಡಹಳ್ಳಿ

ಚುನಾವಣೆ ಸಮಯದಲ್ಲಿ ಎಲ್ಲರನ್ನೂ ಮಾತನಾಡಿಸುತ್ತಾರೆ. ಬಳಿಕ ಸಮಸ್ಯೆಗಳಿಗೆ ಸ್ಪಂದಿಸುವವರು ಇರುವುದಿಲ್ಲ. ಸಮಾಜದ ಅಭಿವೃದ್ಧಿಗೆ ಉತ್ತಮ ವ್ಯಕ್ತಿಯನ್ನು ಆಯ್ಕೆ ಮಾಡುವುದು ಸೂಕ್ತ. ಕುಮಾರ್‌, ಪದವಿ ವಿದ್ಯಾರ್ಥಿ, ಕರಿಗಾನತಮ್ಮನಹಳ್ಳಿ

 

ಶ್ರೀಕಾಂತ್‌, ಗುಡಿಬಂಡೆ

Advertisement

Udayavani is now on Telegram. Click here to join our channel and stay updated with the latest news.

Next