Advertisement

ಶಾಸಕರಿಬ್ಬರಿಗೆ ಪ್ರತಿಷ್ಠೆಯ ಕಣವಾದ ಗ್ರಾಪಂ ಕದನ

05:37 PM Dec 15, 2020 | Suhan S |

ಹೊಸನಗರ: ತಾಲೂಕು ಒಂದಾದರೂ ಎರಡು ವಿಧಾನಸಭಾ ಕ್ಷೇತ್ರಗಳಿಗೆ ಹಂಚಿಹೋಗಿರುವ ಇಲ್ಲಿ ಸಮಸ್ಯೆಗಳು ಹಲವು. ಗ್ರಾಪಂ ಚುನಾವಣೆ ಇಬ್ಬರು ಶಾಸಕರಿಗೆಪ್ರತಿಷ್ಠೆಯಾಗಿದ್ದರೆ, ವಿಪಕ್ಷಗಳಿಗೆ ಸ್ಥಳೀಯ ಮಟ್ಟದಲ್ಲಿ ಅಸ್ತಿತ್ವ ಉಳಿಸಿಕೊಳ್ಳುವ ಸವಾಲು.

Advertisement

ಹೌದು, ಕಸಬಾ, ಕೆರೆಹಳ್ಳಿ, ಹುಂಚಾ ಮತ್ತು ನಗರ ಸೇರಿ ನಾಲ್ಕು ಹೋಬಳಿ ಹೊಂದಿರುವಹೊಸನಗರ ತಾಲೂಕಿನಲ್ಲಿ ಗ್ರಾಪಂ ಚುನಾವಣೆ2 ನೇ ಹಂತದಲ್ಲಿ ನಡೆಯಲಿದೆ. ಬಿಜೆಪಿ ಮತ್ತುಕಾಂಗ್ರೆಸ್‌ ಸ್ಪರ್ಧೆ ಬಹುತೇಕ ಕಂಡುಬಂದರೆ ಜೆಡಿಎಸ್‌ ನಡೆ ಇನ್ನೂ ನಿಗೂಢವಾಗಿದೆ.

ಸಮಸ್ಯೆಗಳ ಸಾಲು: ವಾರಾಹಿ, ಚಕ್ರಾ ಸಾವೇಹಕ್ಲು ಮತ್ತು ಶರಾವತಿ ಸಂತ್ರಸ್ತರಸಮಸ್ಯೆ ಇಲ್ಲಿಯ ಹಲವು ದಶಕದ ಸಮಸ್ಯೆ.ಇನ್ನು ಭೂಮಿ ಹಕ್ಕಿಗಾಗಿ ಹೋರಾಟನಡೆಯುತ್ತಲೇ ಇದೆ. ನೂತನ ಬಿಜೆಪಿ ಸರ್ಕಾರ ಬಂದ ಮೇಲೆ ಈವರೆಗೆ ಬಗರ್‌ಹುಕುಂ ಸಮಿತಿ ರಚನೆಯಾಗದಿರುವುದು ವಿಪಕ್ಷಗಳಚುನಾವಣಾ ಅಸ್ತ್ರವಾಗಿ ಮಾರ್ಪಾಡಾಗಿದೆ. ಇನ್ನು ನಾಲ್ಕು ಹೋಬಳಿಯಲ್ಲಿ ವಿಭಿನ್ನ ಚಿತ್ರಣ, ವಿಭಿನ್ನ ಸಮಸ್ಯೆಗಳಿದ್ದು ಸ್ಥಳೀಯ ಚುನಾವಣೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ಹರತಾಳು ಹಾಲಪ್ಪ ಹೊಸನಗರ ಕ್ಷೇತ್ರದ ಕೊನೆಯ ಶಾಸಕರು: ಹರತಾಳು ಹಾಲಪ್ಪ ಶಾಸಕರಾಗಿದ್ದೇ ಕೊನೆ. ಅಲ್ಲಿಂದ ಹೊಸನಗರ ವಿಧಾನಸಭಾ ಕ್ಷೇತ್ರ ಮಾನ್ಯತೆಯನ್ನು ಕಳೆದುಕೊಂಡಿದೆ. ಇದೀಗ ಸಾಗರ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಹರತಾಳು ಹಾಲಪ್ಪ ಹೊಸನಗರ ತಾಲೂಕಿನ ಕಸಬಾ ಮತ್ತು ಕೆರೆಹಳ್ಳಿಯನ್ನು ಪ್ರತಿನಿಧಿಸುತ್ತಿದ್ದಾರೆ. ಇನ್ನು ನಗರ ಮತ್ತು ಹುಂಚಾ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ವ್ಯಾಪ್ತಿಗೆ ಬರುತ್ತದೆ.ಇದೀಗ ಮತ್ತೆ ಹೊಸನಗರ ವಿಧಾನಸಭಾಕ್ಷೇತ್ರದ ಮರುಹುಟ್ಟಿಗಾಗಿ ಗ್ರಾಮಮಟ್ಟದಲ್ಲಿ ಕೂಗು ಕೇಳಿ ಬರುತ್ತಿದೆ.

ಪ್ರಭಾವಿಗಳ ಪ್ರಭಾವ: ಹೊಸನಗರ ತಾಲೂಕು ಎರಡು ಶಾಸಕರ ವ್ಯಾಪ್ತಿಗೆ ಬರುವ ಕಾರಣ ಹಾಲಿ ಶಾಸಕರಾಗಿರುವ ಹರತಾಳು ಹಾಲಪ್ಪ ಮತ್ತು ಆರಗ ಜ್ಞಾನೇಂದ್ರ ಅವರ ಪ್ರಭಾವ ಚುನಾವಣೆಮೇಲೆ ಬೀಳಲಿದೆ. ಕೋವಿಡ್ ಸಂಕಷ್ಟದ ಮಧ್ಯೆ ಕೂಡ ಪಂಚಾಯತ್‌ ಮಟ್ಟದಲ್ಲಿ ನೀಡಿರುವ ಕೊಡುಗೆಗಳ ಬಗ್ಗೆ ಮತದಾರರಿಗೆ ತಿಳಿಸುವ ಮೂಲಕ ಅಖಾಡಕ್ಕೆ ಈಗಾಗಲೇ ಧುಮುಕಿದ್ದಾರೆ. ಈ ನಡುವೆ ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರ ಹೊಂದಿ ಹುಮ್ಮಸ್ಸಿನಲ್ಲಿರುವ ಬಿಜೆಪಿ ಕಾರ್ಯಕರ್ತರ ಸಂಘಟಿತ ಪ್ರಯತ್ನಕ್ಕೆ ಕೈಹಾಕಿದೆ.

Advertisement

ಕಾಂಗ್ರೆಸ್‌- ಜೆಡಿಎಸ್‌ ಹೊಂದಾಣಿಕೆ ಸಾಧ್ಯವೇ?: ಈಗಾಗಲೇ ಬಹುತೇಕ ಗ್ರಾಪಂಗಳಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿತ್ತು. ಆದರೆ ಬದಲಾದ ರಾಜಕೀಯದಲ್ಲಿ ಅವುಗಳನ್ನು ಉಳಿಸಿಕೊಳ್ಳುವ ಸವಾಲು ಕಾಂಗ್ರೆಸ್‌ ಎದುರಿಗಿದೆ. ಮಾಜಿ ಸಚಿವರಾದ ಕಾಗೋಡು ತಿಮ್ಮಪ್ಪ, ಕಿಮ್ಮನೆ ರತ್ನಾಕರ್‌, ಕಾಂಗ್ರೆಸ್‌ ವಕ್ತಾರ ಬೇಳೂರು ಗೋಪಾಲಕೃಷ್ಣ ಈಗಾಗಲೇ ಒಂದು ಹಂತದ ಪಂಚಾಯತ್‌ ಮಟ್ಟದಲ್ಲಿ ಸಭೆ ನಡೆಸಿ ಕಾರ್ಯಕರ್ತರನ್ನು ಹುರಿದುಂಬಿಸುವ ಕೆಲಸ ಮಾಡಿದ್ದಾರೆ.

ಈ ನಡುವೆ ಜೆಡಿಎಸ್‌ ಸಂಘಟನೆ ತಾಲೂಕಿನಲ್ಲಿ ಹೇಳಿಕೊಳ್ಳುವಂತಿಲ್ಲ.ಹೊಸನಗರ ಪಪಂ ತನ್ನದೇ ಒಂದಷ್ಟು ಹಿಡಿತ ಹೊಂದಿರುವ ಜೆಡಿಎಸ್‌ ನಗರ ಹೋಬಳಿಯಲ್ಲಿ ಕೂಡ ಒಂದಷ್ಟು ಪ್ರಭಾವ ಹೊಂದಿದೆ. ಪಕ್ಷ ಮಟ್ಟದಲ್ಲಿ ಹೊಂದಾಣಿಕೆ ಕಂಡು ಬರದಿದ್ದರೂ ಕೂಡ ಲೋಕಲ್‌ನಲ್ಲಿಅಲ್ಲಲ್ಲಿ ಅಭ್ಯರ್ಥಿಗಳ ನಡುವೆ ಸಹಮತ ಕಂಡುಬಂದಿದೆ.

 

ಕುಮುದಾ ನಗರ

Advertisement

Udayavani is now on Telegram. Click here to join our channel and stay updated with the latest news.

Next