Advertisement

ಗ್ರಾಮದ ಅಭಿವೃದ್ಧಿ ಮಾಡಲು ಅವಕಾಶ ಕೊಡಿ

03:27 PM Dec 16, 2020 | Suhan S |

ಮಾಗಡಿ: ಮಹಿಳಾ ಮೀಸಲಾತಿ ಬಂದಿರುವುದರಿಂದ ಗ್ರಾಮದ ಅಭಿವೃದ್ಧಿ ಹಾಗೂ ಜನಗಳ ಸೇವೆ ಮಾಡಲು ಒಂದು ಭಾರಿ ನಮಗೂ ಅವಕಾಶ ಮಾಡಿಕೊಡಿ ಎಂದು ಚಕ್ರಬಾವಿ ಕ್ಷೇತ್ರದಿಂದ ಗ್ರಾಪಂ ಚುನಾವಣೆಗೆ ಸ್ಪರ್ಧಿಸುತ್ತಿರುವ ಅಭ್ಯರ್ಥಿ ಮಂಜುಳಾ ದೀಪಕ್‌ ಮನವಿ ಮಾಡಿದರು.

Advertisement

ತಾಲೂಕಿನ ಸೀಗೇಕುಪ್ಪೆ ಗ್ರಾಪಂ ವ್ಯಾಪ್ತಿಯ ಚಕ್ರಬಾವಿ-1 ಮಹಿಳಾಕ್ಷೇತ್ರಕ್ಕೆ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿ ಮಾತನಾಡಿದರು.ಗ್ರಾಪಂನಲ್ಲಿ ಆಯ್ಕೆಯಾದರೆ ನರೇಗಾ ಯೋಜನೆ ಮೂಲಕಗ್ರಾಮದ ಅಭಿವೃದ್ಧಿಗೆ ಸಾಕಷ್ಟು ಅನುದಾನ ಬರುವುದರಿಂದ ಗ್ರಾಮಸ್ಥರ ಪರವಾಗಿಸದಸ್ಯರಾಗಿ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ತಂದು ಮಾದರಿ ಗ್ರಾಮವಾಗಿ ಮಾಡಲು ಸಂಕಲ್ಪ ಮಾಡಿಕೊಳ್ಳಲಾಗಿದೆ. ಈ ಭಾರಿ ಗ್ರಾಪಂ ಚುನಾವಣೆಗೆ ಗ್ರಾಮಸ್ಥರ ಒತ್ತಾಯದ ಮೇಲೆ ಸ್ಪರ್ಧೆ ಮಾಡಿದ್ದು ಈ ಚುನಾವಣೆಯಲ್ಲಿಬೆಂಬಿಸುತ್ತಾರೆಂಬ ವಿಶ್ವಾಸವಿದೆ. ನಿಮ್ಮ ಸೇವೆ ಮಾಡಲು ಒಂದು ಅವಕಾಶ ನೀಡಿ ಎಂದು ಮನವಿ ಮಾಡಿದರು.

ಯುವ ಮುಖಂಡ ಸಿ.ಎನ್‌.ದೀಪಕ್‌ ಮಾತನಾಡಿ, ಯುವಕರಿಗೆ ಹೆಚ್ಚಿನ ಅವಕಾಶ ನೀಡಿದರೆ ಹೆಚ್ಚು ಅಭಿವೃದ್ಧಿ ಮಾಡಲುಗಮನಹರಿಸಬಹುದು. ಚಕ್ರಬಾವಿ ಗ್ರಾಮ ಶಾಂತಿ ಗ್ರಾಮವಾಗಿದ್ದು ಈ ಭಾರಿ ನಡೆಯುವ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸುತ್ತಾರೆಂಬ ವಿಶ್ವಾಸವಿದೆ ಎಂದರು.

ಬೆಂಬಲಿಗರ ಜತೆ ನಾಮಪತ್ರ ಸಲ್ಲಿಸಲಾಯಿತು. ನಾಮಪತ್ರ ಸಲ್ಲಿಸುವವೇಳೆ ಗ್ರಾಮಸ್ಥರಾದ ಮಹೇಶ್‌, ಸುರೇಶ್‌, ಚಂದ್ರ, ಸಿ.ಟಿ.ನಾಗರಾಜು, ಅಂಗ ಡಿ ನಾಗರಾಜು, ಮಹೇಶ್‌, ಮಂಜುನಾಥ್‌, ಲೋಕೇಶ್‌, ತಿಬ್ಬಲಿಂಗಯ್ಯ, ಪಾಪೇಗೌಡ, ಮೂರ್ತಿ,ಬಸವರಾಜು, ಸುರೇಶ್‌ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next