Advertisement

ಗ್ರಾಪಂ ಚುನಾವಣೆ: 137 ನಾಮಪತ್ರ

04:07 PM Dec 09, 2020 | Suhan S |

ಚಿಕ್ಕಮಗಳೂರು: ಗ್ರಾಪಂ ಚುನಾವಣೆ ನಾಮಪತ್ರ ಸಲ್ಲಿಕೆ ಸೋಮವಾರದಿಂದ ಆರಂಭವಾಗಿದ್ದು, ಮಂಗಳವಾರ ಜಿಲ್ಲೆಯಲ್ಲಿ 137 ನಾಮಪತ್ರ ಸಲ್ಲಿಕೆಯಾಗಿದೆ.

Advertisement

ಅಜ್ಜಂಪುರ ತಾಲೂಕಿನಲ್ಲಿ 2, ಚಿಕ್ಕಮಗಳೂರು ತಾಲೂಕಿನಲ್ಲಿ 53, ಕಡೂರು ತಾಲೂಕಿನಲ್ಲಿ 28, ಕೊಪ್ಪ ತಾಲೂಕಿನಲ್ಲಿ 17, ಮೂಡಿಗೆರೆ ತಾಲೂಕಿನಲ್ಲಿ 19, ನರಸಿಂಹರಾಜಪುರ ತಾಲೂಕಿನಲ್ಲಿ 2, ಶೃಂಗೇರಿ ತಾಲೂಕಿನಲ್ಲಿ 3 ಹಾಗೂ ತರೀಕೆರೆ ತಾಲೂಕಿನಲ್ಲಿ 13 ನಾಮಪತ್ರ ಸಲ್ಲಿಕೆಯಾಗಿವೆ. ನಾಮಪತ್ರ ಸಲ್ಲಿಕೆ ಮೊದಲ ದಿನ ನರಸಿಂಹರಾಜಪುರ ತಾಲೂಕಿನಲ್ಲಿ ಒಂದೇ ಒಂದು ನಾಮಪತ್ರ ಸಲ್ಲಿಕೆಯಾಗಿರಲಿಲ್ಲ, ಮಂಗಳವಾರ ತಾಲೂಕಿನಲ್ಲಿ 2 ನಾಮಪತ್ರ ಸಲ್ಲಿಕೆಯಾಗಿವೆ. ಸೋಮವಾರ ಮತ್ತು ಮಂಗಳವಾರ ಸೇರಿದಂತೆ ಜಿಲ್ಲೆಯಲ್ಲಿ ಇದುವರೆಗೂ 273 ನಾಮಪತ್ರ ಸಲ್ಲಿಕೆಯಾಗಿವೆ.

ತರೀಕೆರೆ: 13 ನಾಮಪತ್ರ ಸಲ್ಲಿಕೆ :

ತರೀಕೆರೆ: 25 ಗ್ರಾಪಂಗಳಿಗೆ ನಡೆಯುತ್ತಿರುವ ಚುನಾವಣೆಯ ಎರಡನೇ ದಿನವಾದ ಮಂಗಳವಾರ 13 ನಾಮಪತ್ರಗಳು ಸಲ್ಲಿಕೆಯಾಗಿವೆ. ಲಕ್ಕವಳ್ಳಿ 2, ಮುಡಗೋಡು 1, ಮಳಲಿ ಚೆನ್ನೇನಹಳ್ಳಿ 2, ದೋರನಾಳು 2, ಬೆಟ್ಟದಹಳ್ಳಿ 3, ಲಿಂಗದಹಳ್ಳಿ, ಹಾದಿಕೆರೆ ಮತ್ತು ಅಮೃತಾಪುರ ಗ್ರಾಪಂಗಳಲ್ಲಿ ತಲಾ ಒಂದು ನಾಮಪತ್ರ ಸಲ್ಲಿಕೆಯಾಗಿದೆ. ಸೋಮವಾರ 18 ನಾಮಪತ್ರಗಳು ಸಲ್ಲಿಕೆಯಾಗಿವೆ. ನಾಮಪತ್ರ ಸಲ್ಲಿಸಲು ಡಿ. 11 ಕೊನೆಯ ದಿನವಾಗಿದೆ. 273 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಅವ ಧಿ ಮುಗಿಯದ ಹಿನ್ನಲೆಯಲ್ಲಿ ಕೆಂಚಿಕೊಪ್ಪ ಗ್ರಾಪಂ ಚುನಾವಣೆ ನಡೆಯುತ್ತಿಲ್ಲ ಎಂದು ಚುನಾವಣಾಧಿಕಾರಿ ಸಿ.ಜಿ. ಗೀತಾ ತಿಳಿಸಿದ್ದಾರೆ.

ಶೃಂಗೇರಿ: 3 ನಾಮಪತ್ರ :

Advertisement

ಶೃಂಗೇರಿ: ಎರಡನೇ ದಿನ ಗ್ರಾಪಂ ಚುನಾವಣೆಗೆ ತಾಲೂಕಿನಲ್ಲಿ ಮೂರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಮೆಣಸೆ ಗ್ರಾಪಂ 2, ವಿದ್ಯಾರಣ್ಯಪುರ ಗ್ರಾಪಂ 1 ನಾಮಪತ್ರ ಸಲ್ಲಿಕೆಯಾಗಿದೆ. ತಾಲೂಕಿನಲ್ಲಿ ಇದುವರೆಗೆ 5 ನಾಮಪತ್ರ ಸಲ್ಲಿಕೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next